Advertisement

ಟೈಲರ್‌ಗಳಿಗೆ ವಿವಿಧ ಸೌಲಭ್ಯಕ್ಕೆ ಪ್ರಯತ್ನ

12:30 AM Mar 08, 2019 | Team Udayavani |

ಮಂಗಳೂರು: ಸ್ಮಾರ್ಟ್‌ಕಾರ್ಡ್‌ ಹಾಗೂ ಭವಿಷ್ಯನಿಧಿ ಸೌಲಭ್ಯ ಸೇರಿದಂತೆ ಟೈಲರ್‌ಗಳ ಪ್ರಮುಖ ಬೇಡಿಕೆಗಳ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ನಗರದ ಗೋರಿಗುಡ್ಡೆಯಲ್ಲಿ ಕರ್ನಾಟಕ ಸ್ಟೇಟ್‌ ಟೈಲರ್ ಅಸೋಸಿಯೇಶನ್‌ ( ಕೆಎಸ್‌ಟಿಎ) ವತಿಯಿಂದ ನಿರ್ಮಿಸಲಾಗಿರುವ ಟೈಲರ್‌ ಭವನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಅಧಿವೇಶನದ ಸಂದರ್ಭ ಟೈಲರ್ ಅಸೋಸಿಯೇಶನ್‌ನ ನಿಯೋಗದೊಂದಿಗೆ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವ ರನ್ನು ಭೇಟಿಯಾಗಿ ಸ್ಮಾರ್ಟ್‌ಕಾರ್ಡ್‌, ಭವಿಷ್ಯ ನಿಧಿ ಸೇರಿದಂತೆ ಪ್ರಮುಖ ಬೇಡಿಕೆ ಗಳ ಬಗ್ಗೆ ಚರ್ಚೆ ನಡೆಸಲು ನಿರ್ಧರಿಸ ಲಾಗಿತ್ತು. ಆದರೆ ಅಧಿವೇಶನದ ಸಂದರ್ಭ ದಲ್ಲಿ ಸಮಸ್ಯೆಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಲಿಲ್ಲ ಎಂದರು.

ಆರ್ಥಿಕ ನೆರವು
ಸಚಿವರು ತಮ್ಮ ವತಿಯಿಂದ 50,000 ರೂ. ನೆರವು ನೀಡಿದ್ದಲ್ಲದೆ, ಇನ್ನೂ 50,000 ರೂ. ನೀಡುವುದಾಗಿ ಭರವಸೆ ನೀಡಿದರು.

ಮೇಯರ್‌ ಭಾಸ್ಕರ್‌ ಕೆ. ಅವರು ಹೊಲಿಗೆ ತರಬೇತಿ ಮತ್ತು ಕೌಶಲ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಶುಭಕೋರಿದರು. ಕೆಎಸ್‌ಟಿಎ ಮಂಗಳೂರು ಕ್ಷೇತ್ರ ಸಮಿತಿ ಅಧ್ಯಕ್ಷ ಕೇಶವ ಕದ್ರಿ ಧ್ವಜಾರೋಹಣ ನೆರವೇರಿಸಿದರು. ಭವನ ನಿರ್ಮಾಣದ ಸಂಚಾಲಕ ಸುರೇಶ್‌ ಸಾಲ್ಯಾನ್‌ ಅವರು ವಸತಿ ನಿಲಯ ಉದ್ಘಾಟಿಸಿದರು. ಕೆಎಸ್‌ಟಿಎ ರಾಜ್ಯ ಉಪಾಧ್ಯಕ್ಷ ಮೊಹಮ್ಮದ್‌ ಫೆರೋಜ್‌ ಹಮ್‌ರಾಜ್‌ ನಾಮಫಲಕ ಅನಾವರಣಗೊಳಿಸಿದರು.

Advertisement

ಕೆಎಸ್‌ಟಿಎ ರಾಜ್ಯಾಧ್ಯಕ್ಷ ಕೆ.ಎಸ್‌. ಆನಂದ್‌ ಅಧ್ಯಕ್ಷತೆ ವಹಿಸಿದ್ದರು. ಮನಪಾ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಕೆಎಸ್‌ಟಿಎ ಕೇರಳ ರಾಜ್ಯ ಅಧ್ಯಕ್ಷ ರಾಮನ್‌ ಚೆನ್ನಿಕರ್‌, ಕೆಎಸ್‌ಟಿಎ ಜಿಲ್ಲಾಧ್ಯಕ್ಷ ಹಾಗೂ ಭವನದ ಸಹಸಂಚಾಲಕ ಪ್ರಜ್ವಲ್‌ ಕುಮಾರ್‌, ಉಡುಪಿ ಜಿಲ್ಲಾಧ್ಯಕ್ಷ ರಾಮ ಚಂದ್ರ, ಮಹಿಳಾ ಉದ್ಯಮಿ ಕುಸುಮಾ ಎಚ್‌. ದೇವಾಡಿಗ, ಕೆಎಸ್‌ಟಿಎ ಜಿಲ್ಲಾ ಸಮಿತಿ ಸದಸ್ಯ ರಾಘವ ಕೈಕಂಬ, ಕುಂದಾಪುರವ ಚಂದ್ರಶೇಖರ್‌ ಅತಿಥಿಗಳಾಗಿದ್ದರು.ಭವನ ನಿರ್ಮಾಣ ಸಂಚಾಲಕ ಸುರೇಶ್‌ ಸಾಲ್ಯಾನ್‌ ಸ್ವಾಗತಿಸಿ, ಮಲ್ಲಿಕಾ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು.

ಬೇಡಿಕೆ ಈಡೇರಿಕೆಗೆ ಆಗ್ರಹ
ಕೆಎಸ್‌ಟಿಎ 20 ವರ್ಷಗಳನ್ನು ಪೂರೈ ಸಿದ್ದು ಈ ಸಂದರ್ಭ ಟೈಲರ್‌ ಭವನ ಉದ್ಘಾ ಟನೆ ಗೊಂಡಿದೆ. ಸರಕಾರದ ಅರ್ಥಿಕ ನೆರವು ಪಡೆಯದೆ ಟೈಲರ್‌ ವೃತ್ತಿ ಬಾಂಧವರೇ ದೇಣಿಗೆ ನೀಡಿ ಈ ಸುಸಜ್ಜಿತ ಭವನ ನಿರ್ಮಿಸಿದ್ದಾರೆ ಎಂದು ಪ್ರಸ್ತಾವನೆ ಗೈದ ರಾಜ್ಯ ಕಾರ್ಯದರ್ಶಿ ವಸಂತ ವಿವರಿ ಸಿ ದರು. ಟೈಲರ್‌ಗಳಿಗೆ ಸ್ಮಾರ್ಟ್‌ ಕಾರ್ಡ್‌, ಭವಿಷ್ಯನಿಧಿ, ಪಿಂಚಣಿ, ಆರೋಗ್ಯವಿಮೆ, ಮಕ್ಕಳಿಗೆ ವಿದ್ಯಾರ್ಥಿವೇತನ ಸೇರಿದಂತೆ ನಮ್ಮ ಪ್ರಮುಖ ಬೇಡಿಕೆಗಳನ್ನು ಸರ ಕಾರ ಈಡೇ ರಿಸ ಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next