Advertisement

ನಿವೃತ್ತಿಯಿಂದ ಹೊರಬಂದು ಟಿ20 ವಿಶ್ವಕಪ್‌ ಆಡಲಿದ್ದಾರೆ ಎಬಿಡಿ?

09:59 AM Dec 18, 2019 | Team Udayavani |

ಜೋಹಾನ್ಸ್‌ಬರ್ಗ್‌: ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳಿರುವ ತಾರಾ ಬ್ಯಾಟ್ಸ್‌ಮನ್‌ ಎಬಿಡಿ ವಿಲಿಯರ್ಸ್ ಮುಂಬರುವ ಟಿ20 ವಿಶ್ವಕಪ್‌ ವೇಳೆ ಮರಳಿ ದಕ್ಷಿಣ ಆಫ್ರಿಕಾ ತಂಡ ಸೇರುವ ಸಾಧ್ಯತೆ ಇದೆ.

Advertisement

ವಿಶ್ವಕಪ್‌ ತಂಡಕ್ಕೆ ಅವರನ್ನು ಕರೆತರುವ ಪ್ರಯತ್ನ ನಡೆದಿದೆ ಎಂದು ಸ್ವತಃ ಆಫ್ರಿಕಾ ತಂಡದ ನಾಯಕ ಡು ಪ್ಲೆಸಿಸ್‌ ತಿಳಿಸಿದ್ದಾರೆ. ‘ಜನರು ಎಬಿಡಿ ಆಟ ನೋಡಲು ಇಷ್ಟಪಡುತ್ತಾರೆ. ನಾನೂ ಹೊರತಾಗಿಲ್ಲ. ಅವರನ್ನು ರಾಷ್ಟ್ರೀಯ ತಂಡಕ್ಕೆ ಕರೆತರಲು ಪ್ರಯತ್ನ ಕಳೆದ ಮೂರ್ನಾಲ್ಕು ತಿಂಗಳಿನಿಂದ ನಡೆಯುತ್ತಿದೆ. ವಿಶ್ವಕಪ್‌ಗೆ ತಂಡ ಸಿದ್ಧಗೊಳಿಸುವಾಗ ವಿಶ್ವ ವಿಖ್ಯಾತ ಆಟಗಾರರು ನಮ್ಮ ತಂಡದೊಳಗೆ ಇರಬೇಕು. ಹಾಗಿದ್ದಾಗ ಅವರನ್ನು ಕರೆತರುವ ಪ್ರಯತ್ನವನ್ನು ನಾವೇಕೆ ಮಾಡಬಾರದು?’ ಎಂದು ಡು ಪ್ಲೆಸಿಸ್‌ ತಿಳಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಎಬಿಡಿ ವಿಲಿಯರ್ಸ್ ವಿದಾಯ ಹೇಳಿದ್ದರು. ಸದ್ಯ ಜಾಗತಿಕ ಟಿ20 ಲೀಗ್‌ನಲ್ಲಿ ಮಾತ್ರ ಎಬಿಡಿ ವಿಲಿಯರ್ಸ್ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next