ಬೆಂಗಳೂರು: ಶಾಸಕ ಸುರೇಶ್ ಕೊಲೆಯತ್ನ ನಡೆದಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಬೈರತಿ ಗ್ರಾಮದಲ್ಲಿ ಕೆಲ ಕಾಲ ಆತಂಕದ ವಾತಾವರಣ ಉಂಟಾಗಿತ್ತು.
ಅದರಲ್ಲೂ ಸಹಾಯ ಪಡೆದ ಸ್ಥಳೀಯ ಯುವಕನೇ ಇಂತಹ ಕೃತ್ಯಕ್ಕೆ ಮುಂದಾದ ಬಗ್ಗೆ ಗ್ರಾಮಸ್ಥರಲ್ಲಿ ನಾನಾ ಪ್ರಶ್ನೆಗಳು ಮೂಡಿದವು. ವಿಷಯ ತಿಳಿಯುತ್ತಿದ್ದಂತೆ ಬೈರತಿಯಲ್ಲಿರುವ ಸುರೇಶ್ ನಿವಾಸಕ್ಕೆ ಸ್ಥಳೀಯರು, ಹೆಬ್ಟಾಳ, ಹೊಸಕೋಟೆಯ ಕಾಂಗ್ರೆಸ್ ಕಾರ್ಯಕರ್ತರು ದೌಡಾಯಿಸಿದರು. ಯಾವುದೇ ಅಪಾಯ ಆಗದ ಕಾರಣ ಸಮಾಧಾನಪಟ್ಟುಕೊಂಡರು. ತಮ್ಮ ನಿವಾಸಕ್ಕೆ ಆಗಮಿಸಿದವರನ್ನು ಸಮಾಧಾನ ಹೇಳಿದ ಶಾಸಕ ಬೈರತಿ ಸುರೇಶ್, ಆವೇಶಕ್ಕೆ ಒಳಗಾಗುವುದು ಬೇಡ. ಪೊಲೀಸರ ತನಿಖೆ ನಿಸ್ಪಕ್ಷಪಾತವಾಗಿ ನಡೆಯಲಿ ಎಂದು ಹೇಳಿದರು.
ಶಾಸಕರ ರಾಜಕೀಯ ಏಳಿಗೆ ಸಹಿಸರ ಕೆಲವು ಈ ಕೃತ್ಯ ನಡೆಸಲು ಕುಮ್ಮಕ್ಕು, ಷಡ್ಯಂತ್ರ ನಡೆಸಿದ್ದಾರೆ ಎಂದು ನೆರೆದಿದ್ದ ಬೆಂಬಲಿಗರು ಆರೋಪಿಸಿದರು. ಮನೆ ಕಟ್ಟಿಕೊಟ್ಟ ಶಾಸಕರಿಗೆ ಆರೋಪಿ ಇಂತಹ ಕೆಲಸ ಮಾಡಿಬಿಟ್ಟನಲ್ಲ ಇದರ ಹಿಂದೆ ಬೇರೆ ಏನೋ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದರು.
ಶಿವು ತಾಯಿ ಕಣ್ಣೀರು: ಮತ್ತೂಂದೆಡೆ ಆರೋಪಿ ಶಿವು ತಾಯಿ, ಮಗ ಎಂತಹ ಕೆಲಸ ಮಾಡಿಬಿಟ್ಟ’ ಎಂದು ದಿಗ್ಭ್ರಾಂತ ರಾಗಿದ್ದರು. ಅಪ್ಪನನ್ನು ಪೊಲೀಸರು ಕರೆದು ಕೊಂಡು ಹೋಗಿದ್ದಾರೆ’ ಎಂದು 10 ವರ್ಷದ ಮಗಳು ಅಳುತ್ತಿದ್ದಳು. ಉದಯ ವಾಣಿ ಜತೆ ಮಾತನಾಡಿದ ಶಿವು ತಾಯಿ ಕಮಲಮ್ಮ, ಏನಾಗಿದೆ ಎಂಬುದೇ ಗೊತ್ತಾಗಿಲ್ಲ ಎಂದು ಕಣ್ಣೀರು ಹಾಕಿದರು. “ಶಾಸಕರು ನಮಗೆ ಆಶ್ರಯ ನೀಡಿದ್ದಾರೆ. ಮನೆ ಕಟ್ಟಲು ಸಹಾಯ ಮಾಡಿದ್ದು, ಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಅಂತಹ ವ್ಯಕ್ತಿಗೆ ನನ್ನ ಮಗ ಹೀಗೆ ಮಾಡಿದ್ದಾನೆ ಎಂದು ನಂಬಲು ಆಗು ತ್ತಿಲ್ಲ’ ಎಂದರು.
ಕಳೆದ ಒಂದೂವರೆ ವರ್ಷದ ಹಿಂದೆ ಮಗ ರಾತ್ರಿ ವೇಳೆ ವಿಚಿತ್ರವಾಗಿ ವರ್ತಿಸುತ್ತಿದ್ದ. ಎಲ್ಲೆಂದ ರಲ್ಲಿ ಓಡಿ ಗಲಾಟೆ ಮಾಡುತ್ತಿದ್ದ. ಆಗ ಪೊಲೀಸರೇ ಬಂಧಿಸಿ ಬಳಿಕ ಆತನಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಆತನಿಗೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಿದ್ದೆವು. ಆ ನಂತರ ಆ ರೀತಿ ವರ್ತನೆ ತೋರಿರಲಿಲ್ಲ ಎಂದು ವಿವರಿಸಿದರು. ಶಾಸಕರಲ್ಲಿ ಕ್ಷಮೆ ಕೇಳುತ್ತೇನೆ. ಪೊಲೀಸರು ತನಿಖೆ ನಡೆಸಲಿ ಅವರಿಗೆ ಸಹಕಾರ ನೀಡುತ್ತೇವೆ. ಘಟನೆ ಏನು ಯಾಕೆ ನಡೆದಿದೆ ಎಂಬುದು ಆಮೇಲೆ ಶಾಸಕ ಬೈರತಿ ಸುರೇಶ್ ನಿವಾಸದ ಬಳಿ ಪೊಲೀಸರ ಭದ್ರತೆ. ಗೊತ್ತಾಗಲಿದೆ ಎಂದರು.
ನಮ್ಮ ಶಾಸಕರು ಎಲ್ಲರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಅವರ ಒಳ್ಳೆಯತನ ದುರುಪಯೋಗ ಆಗಿದೆ ಅನ್ನಿಸುತ್ತದೆ. ಶಿವು ಕೊಲೆ ಯತ್ನ ಮಾಡಿರುವ ಉದ್ದೇಶ ಗೊತ್ತಾಗಲೇಬೇಕು.
– ಹೇಮಂತ್, ಸ್ಥಳೀಯ ಯುವಕ
ಬೈಕ್‌ನಲ್ಲಿ ಬಂದು ಕಾರಿಗೆ ಡಿಕ್ಕಿ ಹೊಡೆಸಿದ ಕೂಡಲೇ ಕಾರು ನಿಲ್ಲಿಸಿ ಡ್ರೈವರ್ ಹಾಗೂ ನಾನು ಕೆಳಗೆ ಇಳಿದು ಆತನನ್ನು ಪ್ರಶ್ನಿಸಿದೆವು. ನಮ್ಮ ಮೇಲೆಯೇ ಜಗಳ ಆರಂಭಿಸಿದ. ಆತನನ್ನು ಹಿಡಿದುಕೊಂಡಾಗ ಆತನ ಬಳಿ ಚಾಕು ಇರುವುದು ಗೊತ್ತಾಯಿತು
. –ಸತ್ಯ, ಶಾಸಕರ ಗನ್‌ಮ್ಯಾನ್
-ಮಂಜುನಾಥ ಲಘುಮೇನಹಳ್ಳಿ