ಶಿಡ್ಲಘಟ್ಟ: ಕೋವಿಡ್ ಸೋಂಕು ನಿಯಂತ್ರಿಸಲು ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವಾಗಲೇ ಶಿಡ್ಲಘಟ್ಟ ನಗರದಲ್ಲಿ ನವವಿವಾಹಿತನ ಕೊಲೆಗೆ ಯತ್ನಿಸಿರುವ ಘಟನೆ ಸಂಭವಿಸಿದೆ.
ತಮಿಳುನಾಡು ರಾಜ್ಯದ ಗುಡಿಯಾತಂ ಜಿಲ್ಲೆಯ ಯುವರಾಜ್ (35 ವ) ತೀವ್ರ ಗಾಯಗೊಂಡಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲತಃ ತಮಿಳುನಾಡು ಜಿಲ್ಲೆಯ ಯುವರಾಜ್ ಶಿಡ್ಲಘಟ್ಟ ತಾಲೂಕಿನ ಡಬರಗಾನಹಳ್ಳಿ ನಳಿನಿ ಎಂಬಾಕೆಯೊಂದಿಗೆ ಕಳೆದ 25 ದಿನಗಳ ಹಿಂದೆಯೇ ವಿವಾಹವಾಗಿದೆ ಎನ್ನಲಾಗಿದೆ. ಶುಕ್ರವಾರ ರಾತ್ರಿ ನವದಂಪತಿಗಳು ಡಬರಗಾನಹಳ್ಳಿಗೆ ಬಂದು ಬೆಳಗ್ಗೆ ಶಿಡ್ಲಘಟ್ಟಕ್ಕೆ ದ್ವಿಚಕ್ರವಾಹನದಲ್ಲಿ ಬಂದ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ (ಗಾರ್ಡನ್ ರಸ್ತೆಯಲ್ಲಿ) ಮಾರಕಾಸ್ತ್ರದಿಂದ ಯುವರಾಜನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಇದನ್ನೂ ಓದಿ:ಸಂಬಂಧಗಳು ಕೆಟ್ಟರೂ ಚಿಂತೆಯಿಲ್ಲ…ಇದು ಪ್ರಾಮಾಣಿಕತೆಯ ಬೆಳಕು
ತೀವ್ರ ಗಂಭೀರ ಗಾಯಗೊಂಡಿದ್ದ ಯುವರಾಜ್ ಗೆ ಸ್ಥಳೀಯ ಸಹಕಾರದೊಂದಿಗೆ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ವೀಕೆಂಡ್ ಕರ್ಫ್ಯೂ ನಡುವೆಯೂ ನವವಿವಾಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆಯಿಂದ ನಾಗರಿಕರು ಆತಂಕಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.