Advertisement

ಉಡುಪಿಗೆ ಜಿಲ್ಲೆ ಹಡಿಲು ಮುಕ್ತಕ್ಕೆ ಪ್ರಯತ್ನ: ಡಿಸಿ

07:53 PM Jul 09, 2020 | Sriram |

ಹೆಬ್ರಿ: ರೈತರು ಯಂತ್ರಧಾರೆ ಮೂಲಕ ಭತ್ತ ಕೃಷಿ ಮಾಡಿದರೆ ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಪಡೆಯಲು ಸಾಧ್ಯ.ಈ ನಿಟ್ಟಿನಲ್ಲಿ ಧರ್ಮಸ್ಥಳ ಯೋಜನೆ ರೈತರಿಗೆ ಉತ್ತೇಜನ ನೀಡಿ ಸಂಪೂರ್ಣ ಸಹಕಾರದೊಂದಿಗೆ ಹಡಿಲು ಬಿದ್ದ ಗದ್ದೆಗಳನ್ನು ಯಂತ್ರಶ್ರೀ ಮೂಲಕ ಕೃಷಿ ಮಾಡುತ್ತಿರುವುದು ಶ್ಲಾಘನೀಯ.ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯನ್ನು ಹಡಿಲು ಮುಕ್ತ ಮಾಡಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

Advertisement

ಅವರು ಗುರುವಾರ ಧ.ಗ್ರಾ. ಯೋಜನೆ ಬಿ.ಸಿ.ಟ್ರಸ್ಟ್‌ ಉಡುಪಿ ಜಿಲ್ಲೆ,ಪ್ರಗತಿ ಬಂಧು ಸ್ವಹಾಯ ಸಂಘಗಳ ಒಕ್ಕೂಟ ಹೆಬ್ರಿ ವಲಯದ ನೇತೃತ್ವದಲ್ಲಿ ಕುಚ್ಚಾರು ಹಾಲಿಕೋಡ್ಲು ಹಾ. ಉ. ಸಂಘದ ಬಳಿ ನಡೆಯುವ ಹಡಿಲು ಭೂಮಿ ಪುನಶ್ಚೇತನ ಮತ್ತು ಯಂತ್ರಶ್ರೀ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಲಾಭ ಆದರೆ ಮಾತ್ರ ಸಾಲ ಮರುಪಾವತಿ ಧರ್ಮಸ್ಥಳ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಲ್‌.ಎಚ್‌.ಮಂಜುನಾಥ್‌ ಯಂತ್ರಶ್ರೀಯನ್ನು ಉದ್ಘಾಟಿಸಿ ಮಾತನಾಡಿ ರೈತರಿಗೆ ಯೋಜನೆ ಮುಖಾಂತರ ಪ್ರತಿ ಎಕ್ರೆಗೆ 20 ಸಾವಿರ ರೂ. ಸಾಲ ನೀಡಲಾಗುತ್ತಿದ್ದು ಅದರಿಂದ ಯಾಂತ್ರೀಕೃತ ಕೃಷಿ ಮೂಲಕ ಭತ್ತ ಬೆಳೆದು ಲಾಭ ಬಂದರೆ ಮಾತ್ರ ಸಾಲ ಮರುಪಾವತಿ ಮಾಡಲಾಗುತ್ತದೆ.ಉಡುಪಿ ಜಿಲ್ಲೆಯಲ್ಲಿ 6,500 ಎಕ್ರೆಯಲ್ಲಿ ಯಾಂತ್ರೀಕೃತ ಕೃಷಿ ಮಾಡಲು ಹೊರಟಿದ್ದು ಈಗಾಗಲೇ 1,250 ಎಕ್ರೆ ಪೂರೈಸಿದ್ದೇವೆ ಎಂದರು.

ಕೃಷಿ ಮತ್ತು ಕೈಗಾರಿಕೆ ಸ್ಥಾಯೀ ಸಮಿತಿ ಅಧ್ಯಕ್ಷ ಸುಮಿತ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ರೈತರಿಗೆ ಸಸಿ ಮಡಿ ಟ್ರೇ ವಿತರಣೆ ನಡೆಯಿತು. ಜಂಟಿ ಕೃಷಿ ನಿರ್ದೇಶಕ ಕೆಂಪೇ ಗೌಡ, ಹೆಬ್ರಿ ತಹಶೀಲ್ದಾರ್‌ ಕೆ. ಮಹೇಶ್ಚಂದ್ರ, ಜಿ.ಪಂ.ಸದಸ್ಯೆ ಜ್ಯೋತಿ ಹರೀಶ್‌ ಮೊದಲಾದವರು ಉಪಸ್ಥಿತರಿದ್ದರು. ಯೋಜನೆಯ ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕ ಗಣೇಶ್‌ ಬಿ. ಸ್ವಾಗತಿಸಿ, ಹೆಬ್ರಿ ವಲಯ ಮೇಲ್ವಿಚಾರಕ ಪ್ರವೀಣ್‌ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ತಾ| ಯೋಜನಾಧಿಕಾರಿ ಭಾಸ್ಕರ್‌ ವಿ.ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next