Advertisement

ಭಾಗ್ಯಲಕ್ಷ್ಮೀ ಯೋಜನೆಯ ಲೋಪದೋಷ ಸರಿಪಡಿಸಲು ಪ್ರಯತ್ನ: ಶಶಿಕಲಾ ಜೊಲ್ಲೆ

11:24 PM Sep 30, 2019 | Lakshmi GovindaRaju |

ಮೈಸೂರು: ಭಾಗ್ಯಲಕ್ಷ್ಮೀ ಯೋಜನೆಯ ಲೋಪದೋಷಗಳನ್ನು ಸರಿಪಡಿಸಲು ಪ್ರಯತ್ನಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಮಹಿಳಾ ದಸರಾ ಅಂಗವಾಗಿ ನಗರದ ಜೆ.ಕೆ.ಮೈದಾನದಲ್ಲಿ ಆಯೋಜಿಸಿ ರುವ ಉದ್ಯಮ ಸಂಭ್ರಮ, ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿದ ನಂತರ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಯಡಿಯೂರಪ್ಪ ಅವರ ಹಿಂದಿನ ಸರ್ಕಾರದಲ್ಲಿ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮೀ ಯೋಜನೆಯಿಂದ ಲಕ್ಷಾಂತರ ಫ‌ಲಾನುಭವಿಗಳಿಗೆ ಅನುಕೂಲವಾಗಿತ್ತು. ಆದರೆ, ಕಳೆದ ಐದು ವರ್ಷದಲ್ಲಿ ಈ ಯೋಜನೆ ನನೆಗುದಿಗೆ ಬಿದ್ದಿದೆ. ಪಡಿತರ ಚೀಟಿ ವಿತರಣೆಯಲ್ಲಿ ಸಮಸ್ಯೆಯಾಗಿದ್ದರಿಂದ ಫ‌ಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಯೋಜನೆಯ ಲಾಭ ಸಿಗದಂತಾಗಿದೆ. ಹೀಗಾಗಿ ಯೋಜನೆಯ ಲೋಪದೋಷಗಳನ್ನು ಸರಿಪಡಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಕೇಂದ್ರೀಕೃತ ಯೋಜನೆ: ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿ ಮಹಿಳಾ ಅಭಿವೃದ್ಧಿ ಯೋಜನೆಗಳನ್ನು ಕೇಂದ್ರೀಕೃತಗೊಳಿಸಿ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಜಾರಿಗೆ ಚಿಂತನೆ ನಡೆಸಲಾಗಿದೆ. ಮಹಿಳಾ ಸಂಬಂಧಿ ಎಲ್ಲ ಯೋಜನೆಗಳೂ ಕೇಂದ್ರೀ ಕೃತವಾದಾಗ ಎಲ್ಲರಿಗೂ ಇದರ ಫ‌ಲ ತಲುಪಿಸಬಹುದು. ಮಹಿಳೆ ಯರು ಸ್ವ ಉದ್ಯೋಗಿ ಗಳಾಗಲು ಯೋಚನೆ ಮಾಡ ಬೇಕು ಎಂದು ಹೇಳಿದರು.

ಸಚಿವರಿಂದ ತರಾಟೆ: ಮಹಿಳಾ ದಸರಾದಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಸಮಾರಂಭಕ್ಕೆ ಹಾಕಲಾಗಿದ್ದ ಫ್ಲೆಕ್ಸ್‌ ನಲ್ಲಿ ಕಳೆದ ವರ್ಷ ನಡೆದ ಮಹಿಳಾ ದಸರಾ ಕಾರ್ಯಕ್ರಮಗಳ ಫೋಟೋ ಅಚ್ಚು ಹಾಕಿಸಲಾಗಿತ್ತು. ಆದರೆ, ಈ ಫೋಟೋಗಳಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವೆಯಾಗಿದ್ದ ಉಮಾಶ್ರಿ ಇರುವ ಫೋಟೋಗಳನ್ನು ಕಂಡ ಸಚಿವ ಸೋಮಣ್ಣ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next