Advertisement
ಭಾಸ್ಕರ್ ಅವರು ಡಯಾಲಿಸಿಸ್ ಮುಗಿಸಿ ಆಸ್ಪತ್ರೆಯಿಂದ ಬಂದ ತತ್‌ಕ್ಷಣ ಅವರನ್ನು ಮನವಿಗೂ ಸ್ಪಂದಿಸದೆ ಬಂಧಿಸಿ ಧರ್ಮಸ್ಥಳ ಠಾಣೆಯಲ್ಲಿ ಇಡಲಾಗಿತ್ತು. ಬಿಜೆಪಿ ಪದಾಧಿಕಾರಿಗಳನ್ನು ಬಿಜೆಪಿ ಕಚೇರಿ ಬಳಿ ಬಂಧಿಸಿ ವೇಣೂರು ಠಾಣೆಗೆ ಕರೆದೊಯ್ಯಲಾಗಿತ್ತು.
ಮೂಡಬಿದಿರೆ: ಸಮಾರಂಭಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರು ಪಕ್ಷ ಕಚೇರಿ ಬಳಿ ಮುಖ್ಯಮಂತ್ರಿಗಳಿಗೆ ಕರಿಪತಾಕೆ ಹಿಡಿಯಲು ಸಿದ್ಧತೆ ನಡೆಸಿದ್ದರಾದರೂ ಅಷ್ಟರಲ್ಲಿ ಪೊಲೀಸ್ ವಾಹನ ಬಂದು ಅವರನ್ನೆಲ್ಲ ಠಾಣೆಗೆ ಒಯ್ದಾಗ ಅವರೆಲ್ಲ ಅಲ್ಲಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ ಪ್ರಮುಖರಾದ ಜಗದೀಶ ಅಧಿಕಾರಿ, ಈಶ್ವರ ಕಟೀಲು, ಸುಕೇಶ ಶೆಟ್ಟಿ, ಸುಚರಿತ ಶೆಟ್ಟಿ, ಗೋಪಾಲ ಶೆಟ್ಟಿಗಾರ್, ರಾಜೇಶ್ ಮಲ್ಯ, ಸೂರಜ್ ಜೈನ್, ಹರೀಶ್ ಎಂ.ಕೆ. ಮೊದಲಾದವರು ಪ್ರತಿಭಟನೆಯಲ್ಲಿದ್ದರು.
Related Articles
ಪುತ್ತೂರು: ಸೌಹಾರ್ದ ಉಳಿಸಲು ಕ್ರಮ ಕೈಗೊಂಡಿಲ್ಲ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಹಾಗೂ ಬಿಜೆಪಿ, ಹಿಂದೂ ಪರ ಸಂಘಟನೆಗಳು ರವಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರಿಪತಾಕೆ ಹಿಡಿಯಲು ವಿಫಲ ಯತ್ನ ನಡೆಸಿದರು.
Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಫಿಲೋಮಿನಾ ಕಾಲೇಜಿನ ಹೆಲಿಪ್ಯಾಡ್‌ನಲ್ಲಿ ಇಳಿದು ಬರುತ್ತಿದ್ದಂತೆ ಕರಿಪತಾಕೆ ಹಿಡಿಯಲು ಹಿಂದೂ ಸಂಘಟನೆ ಪ್ರಮುಖರು ಗೇಟ್ ಬಳಿ ಸಿದ್ಧವಾಗಿದ್ದರು. ಇವರನ್ನು ತತ್‌ಕ್ಷಣ ಪೊಲೀಸರು ವಶಕ್ಕೆ ತೆಗೆದುಕೊಂಡರು. ಪುತ್ತೂರು ಪೇಟೆಯಲ್ಲಿರುವ ಜೆಡಿಎಸ್ ಕಚೇರಿ ಬಳಿ ಕರಿಪತಾಕೆ ಹಿಡಿದು ಹೊರಟಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.