Advertisement

ಹಾಸನ ವಿಮಾನ ನಿಲ್ದಾಣಕ್ಕೆ ಕೇಂದ್ರದ ನೆರವಿಗೆ ಪ್ರಯತ್ನ

01:50 PM Jan 31, 2021 | Team Udayavani |

ಹಾಸನ: ಜಿಲ್ಲೆಯ ಜನರ ದಶಕಗಳ ಕನಸಾಗಿರುವ ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರದ ನೆರವು ಪಡೆಯಲು ಪ್ರಯತ್ನಿಸುವುದಾಗಿ ಸಂಸದ ಪ್ರಜ್ವಲ್‌ ರೇವಣ್ಣ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ, ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಹಾಸನ ವಿಶ್ವ ಭೂಪಟದಲ್ಲಿ ಕಾಣಿಸಿಕೊಳ್ಳಬೇಕೇ ಹೊರತು ಕೇವಲ ಭಾರತದ ಭೂಪಟದಲ್ಲಷ್ಟೇ ಅಲ್ಲ. ಹಾಸನದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕೆನ್ನುವುದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕನಸು. ಅದಕ್ಕಾಗಿ ದಶಕಗಳ ಹಿಂದೆಯೇ 600 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈಗ ಸ್ಥಳೀಯ ಶಾಸಕರು ಹಾಸನಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೇಕಿಲ್ಲ, ಶಿವಮೊಗ್ಗ ಮಾದರಿಯ ನಿಲ್ದಾಣ ಸಾಕೆಂದರೆ, ನಾವು ಒಪ್ಪಲು ಹೇಗೆ ಸಾಧ್ಯವೆಂದರು.

 ಸಿದ್ಧರಿದ್ದೇವೆ:ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕುರಿತು ಈಗಾಗಲೇ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದೇನೆ. ಅನುದಾನ ಪಡೆಯಲು ನಾವು ಸಿದ್ಧರಿದ್ದೇವೆ. ರಾಜ್ಯದಲ್ಲಿ ಹೇಗೂ ಬಿಜೆಪಿ ಸರ್ಕಾರ ವಿದೆ. ಜಮೀನು ನೀಡಿರುವ ರೈತರಿಗೆ ಸೂಕ್ತ ಪರಿಹಾರ ನೀಡಲಿ. ಅದನ್ನು ಬಿಟ್ಟು 300 ಎಕರೆಯಲ್ಲಿ ವಿಮಾನ ನಿಲ್ದಾಣ ಮಾಡುತ್ತೇವೆ. ಉಳಿದ ಭೂಮಿ ರೈತರಿಗೆ ವಾಪಸ್‌ ನೀಡುತ್ತೇವೆ ಎನ್ನುವುದು ಸರಿಯಲ್ಲ ಎಂದು ಶಾಸಕ ಪ್ರೀತಂ ಜೆ.ಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಭೇಟಿಯಾಗುವೆ:ಬಜೆಟ್‌ ಅಧಿವೇಶನ ಮುಗಿದ ಬಳಿಕ ಎಚ್‌.ಡಿ. ದೇವೇಗೌಡರ ಜತೆಗೆ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿಯಾಗುತ್ತೇನೆ. ಹಾಸನ ನಗರ ಬೆಂಗಳೂರು-ಮಂಗಳೂರು ಮಹಾನಗರಗಳಿಗೆ ಹತ್ತಿರದಲ್ಲಿದ್ದು ಅಂತಾರಾಷ್ಟ್ರೀಯ

ವಿಮಾನ ನಿಲ್ದಾಣವಾದರೆ ಸಾಕಷ್ಟು ಅಭಿವೃದ್ಧಿ ಹೊಂದಬಹುದು. ಕಾರ್ಗೋ ವಿಮಾನ ನಿಲ್ದಾಣದ ಪ್ರಸ್ತಾವನೆಯೂ ಇದ್ದು ಜಿಲ್ಲೆಯ ಸರಕು ಸಾಮಗ್ರಿಗಳನ್ನು ವಿದೇಶಗಳಿಗೆ ಕಳುಹಿಸಲು ಅನುಕೂಲವಾಗುತ್ತದೆ. ಕೃಷಿ, ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ನೆರವಾಗುತ್ತದೆ ಎಂದರು.

Advertisement

ಇದನ್ನೂ ಓದಿ:ಮೂರು ವರ್ಷದಲ್ಲಿ ‘ಮನೆ ಮನೆಗೆ ಗಂಗೆ’ ಯೋಜನೆ ಪೂರ್ಣ ಅನುಷ್ಠಾನ: ಈಶ್ವರಪ್ಪ

ಶಿವಮೊಗ್ಗಕ್ಕೆ ದುಡ್ಡಿದೆ, ಹಾಸನಕ್ಕೇಕಿಲ್ಲ ?: ಶಿವಮೊಗ್ಗಕ್ಕಿಂತ ಮೊದಲೇ ಹಾಸನದಲ್ಲಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಅನುದಾನವೂ ಮಂಜೂರಾಗಿತ್ತು. ಯೋಜನೆ ಹಾಗೂ ಅನುದಾನವನ್ನು ಶಿವಮೊಗ್ಗಕ್ಕೆ ವರ್ಗಾ ಯಿಸಿದರು. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಅನುದಾನ ಭರಿಸುವ ಸರ್ಕಾರ ಹಾಸನಕ್ಕೆ ಕೊಡಲು ಇಲ್ಲ ಎನ್ನುವುದು ಏಕೆ ಎಂದು ಪ್ರಶ್ನಿಸಿದರು.

ತಾಳ್ಮೆ ವಹಿಸಬೇಕಿತ್ತು: ಕೇಂದ್ರ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗೆ ನಮ್ಮ ವಿರೋಧವಿದೆ. 2 ತಿಂಗಳಿಂದ ಶಾಂತಿಯುತ ಪ್ರತಿಭಟನೆ ನಡೆಸಿದ ರೈತರು ಏಕಾಏಕಿ ಆಕ್ರೋಶಗೊಂಡಿದ್ದು ಏಕೆ ಎಂಬುದಕ್ಕೆ ಉತ್ತರವಿಲ್ಲ. ಕೇಂದ್ರ ಸರ್ಕಾರ ರೈತರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕಿತ್ತು. ಈ ವಿಚಾರದಲ್ಲಿ ಕೇಂದ್ರದ್ದೂ ತಪ್ಪಾಗಿದೆ. ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡುವ ಕಾಯ್ದೆಗಳು ಯಾವ ಕಾರಣಕ್ಕೂ ಜಾರಿಯಾಗುವುದು ಬೇಡ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next