Advertisement
ಅತ್ತಾವರದ ಸುತ್ತಮುತ್ತಲಿನ ಕಂಕನಾಡಿ, ಫಳ್ನೀರ್ ಮೊದಲಾದ ಭಾಗದ ಬಹುಮಹಡಿ ಕಟ್ಟಡಗಳ, ವಸತಿ ಸಮುಚ್ಚಯಗಳತ್ಯಾಜ್ಯ ಒಳಚರಂಡಿಗೆ ಸೇರುತ್ತಿದೆ. ಆದರೆ ಪಾಂಡೇಶ್ವರದಲ್ಲಿ ವೆಟ್‌ವೆಲ್ ಸೇರುವ ಬದಲು ಮಳೆ ನೀರು ಹರಿಯುವ ರಾಜಕಾಲುವೆಗಳಿಗೆ ಬಿಡಲಾಗುತ್ತಿದೆ.
ನಗರದಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತುತ್ತಲೇ ಇವೆ. ಆದರೆ ಇವುಗಳಿಗೆ ಬೇಕಾಗಿರುವ ಮೂಲಸೌಲಭ್ಯ, ತ್ಯಾಜ್ಯನೀರು
ಹರಿಯುವ ವ್ಯವಸ್ಥೆ ಅಸಮರ್ಪಕವಾಗಿದೆ. ಅನೇಕ ವರ್ಷಗಳ ಹಿಂದೆ ಕಿರಿದಾದ ಕೊಳವೆಗಳನ್ನು ಅಳವಡಿಸಲಾಗಿದ್ದು, ಇದೀಗ ಅವುಗಳ ಗಾತ್ರ ಸಣ್ಣದಾಗಿದ್ದು, ಕೊಳಚೆ ಪ್ರಮಾಣ ಹೆಚ್ಚಾಗಿದೆ. ಕೊಳಚೆ ನೀರಿನ ಒತ್ತಡದಿಂದಾಗಿ ಅನಿವಾರ್ಯವಾಗಿ ಅಲ್ಲಲ್ಲಿ ರಾಜಕಾಲುವೆಗಳಿಗೆ ತ್ಯಾಜ್ಯ ನೀರು ಬಿಡಲಾಗಿದೆ. ಕಂಕನಾಡಿ ಸಹಿತ ವಿವಿಧ ಭಾಗಗಳ ಕೊಳಚೆ ನೀರು ಪಾಂಡೇಶ್ವರದ ವೆಟ್‌ವೆಲ್ ಸೇರಿ, ಅಲ್ಲಿ ಶುದ್ಧೀಕರಣವಾಗಬೇಕು. ಆದರೆ
ಕೊಳಚೆ ನೀರು ವೆಟ್‌ವೆಲ್‌ಗೆ ತಲುಪುವುದೇ ಇಲ್ಲ. ನೇರವಾಗಿ ಸಮುದ್ರದ ಒಡಲು ಸೇರುತ್ತಿದೆ. ಇದರಿಂದಾಗಿ ಜಲಚರಗಳಿಗೆ
ಮಾರಕವಾಗಿ ಪರಿಣಮಿಸಿದೆ.
Related Articles
ಅತ್ತಾವರದ ವರೆಗೆ ತ್ಯಾಜ್ಯ ನೀರು ಕೊಳವೆಯಿಂದಲೇ ಪ್ರವಹಿಸಿದರೆ, ಇನ್ನು ಕೆಲವು ಕಡೆಗಳಲ್ಲಿ ಮಳೆ ನೀರು ಹರಿಯುವ ತೋಡಿಗೆ ನೇರವಾಗಿ ಬಿಡಲಾಗಿದೆ. ವೆಟ್‌ವೆಲ್ ಸಂಪರ್ಕಿಸುವ ಕೊಳವೆ ಮೇಲ್ಭಾಗದಲ್ಲಿರುವ ಕಾರಣ ಸಮಸ್ಯೆ ತಲೆದೋರಿದೆ.
Advertisement
ಪಾಲಿಕೆ ತತ್‌ಕ್ಷಣ ಕ್ರಮ ಕೈಗೊಳ್ಳಲಿ: ತ್ಯಾಜ್ಯ ನೀರಿನಿಂದಾಗಿ ಈ ಹಿಂದೆ ಮಾರಕ ಕಾಯಿಲೆಗಳು ಬಂದಿರುವುದನ್ನು ಕಂಡಿದ್ದೇವೆ. ಅನೇಕ ತಿಂಗಳುಗಳಿಂದ ತ್ಯಾಜ್ಯ ನೀರು ರಾಜ ಕಾಲುವೆಗೆ ಹರಿಸಲಾಗುತ್ತಿದೆ. ಶಾಲೆ, ಜನವಸತಿ ಪ್ರದೇಶವಾದ ಹಿನ್ನೆಲೆಯಲ್ಲಿ ದುರ್ವಾಸನೆ ಹಾಗೂ ರೋಗಭೀತಿಯಲ್ಲಿದ್ದೇವೆ. ಪಾಲಿಕೆ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಿವೃತ್ತ ಸಹಾಯಕ ಆರೋಗ್ಯಾಧಿಕಾರಿ ಪದ್ಮನಾಭ ಎ. ತಿಳಿಸಿದ್ದಾರೆ.
ಆರೋಗ್ಯಕ್ಕೆ ಮಾರಕಕೊಳಚೆ ನೀರು ತೆರೆದ ಭಾಗದಲ್ಲಿ ಹರಿಯುವುದು, ನದಿ, ಸಮುದ್ರ ಸೇರುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಐದು ದಶಕಗಳ ಹಿಂದೆ ಇಂತಹದೇ ತ್ಯಾಜ್ಯ ನೀರಿನಿಂದ ನಗರದಲ್ಲಿ ಮಾರಕ ಕಾಯಿಲೆ ಕಾಣಿಸಿಕೊಂಡಿತ್ತು. ಅದರ ವಿರುದ್ಧ ಆರೋಗ್ಯ ಇಲಾಖೆ ಸಮರ ಸಾರುವ ಜತೆಗೆ ಒಳಚರಂಡಿ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಇದೀಗ ಮತ್ತೊಂದು ಮಾರಕ ಕಾಯಿಲೆಗೆ ಪಾಲಿಕೆಯೇ ಆಹ್ವಾನ ನೀಡುತ್ತಿದ್ದಂತೆ ಭಾಸವಾಗುತ್ತಿದೆ. ಪಂಪ್‌ಹೌಸ್‌ಶೀಘ್ರ ನಿರ್ಮಾಣ ಈ ಹಿಂದೆ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಲೋಪವಾಗಿದೆ. ರೈಲು ಹಳಿಯಿಂದ ವೆಟ್‌ವೆಲ್
ಸಂಪರ್ಕಿಸುವ ಪೈಪ್ ಲೈನ್ ಮೇಲ್ಭಾಗದಲ್ಲಿದೆ. ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ, ಪಾಲಿಕೆ ಎಂಜಿನಿ ಯರ್‌ಗಳು ಪರಿಶೀಲನೆ ನಡೆಸಿ ದ್ದಾರೆ. ಪಂಪ್‌ಹೌಸ್ ನಿರ್ಮಿಸಿ ವೆಟ್‌ವೆಲ್‌ಗೆ ತ್ಯಾಜ್ಯ ನೀರು ರವಾನಿಸಲಾಗುವುದು. ಶೀಘ್ರ
ದಲ್ಲೇ ಪಂಪ್‌ಹೌಸ್ ನಿರ್ಮಿಸಿ ತ್ಯಾಜ್ಯ ನೀರನ್ನು ಸಂಸ್ಕರಣ ಘಟಕಕ್ಕೆ ರವಾನಿಸಲಾಗುವುದು.
*ಶೈಲೇಶ್, ಸ್ಥಳೀಯ ಕಾರ್ಪೋರೆಟರ್ *ಸಂತೋಷ್ ಮೊಂತೇರೊ