Advertisement
ಬಡಾವಣೆ ಠಾಣೆ ಆವರಣದಲ್ಲಿ ಆಟೋರಿಕ್ಷಾಗಳ ಹಿಂಬದಿಗೆ ಗುಟಕಾ, ಸಿಗರೇಟ್‌ನಂತಹ ತಂಬಾಕುಯಕ್ತ ವಸ್ತುಗಳ ಬಳಕೆಯಿಂದ ಜನರ ಆರೋಗ್ಯದ ಮೇಲೆ ಆಗುವಂತಹ ದುಷ್ಪರಿಣಾಮ ಕುರಿತ ಭಿತ್ತಿಪತ್ರ ಅಂಟಿಸುವ ಮೂಲಕ ವಿಶೇಷ ಕಾರ್ಯಾಚರಣೆಗೆ ಚಾಲನೆ ನೀಡಿದರು.ನಂತರ ಅಪರ ಜಿಲ್ಲಾಧಿಕಾರಿ, ಜಿಲ್ಲಾ ತಂಬಾಕು ನಿಯಂತ್ರಣ ತಂಡದೊಂದಿಗೆ ಜಯದೇವ ವೃತ್ತದ ಭಾವಸಾರ ಕ್ಷತ್ರಿಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ರಸ್ತೆ ಬದಿಯ 100 ಯಾರ್ಡ್ ವ್ಯಾಪ್ತಿಯ ಟೀ, ಬೀಡಾ ಸ್ಟಾಲ್‌ಗಳಿಗೆ ದಾಳಿ
ನಡೆಸಿ, ನಿಯಮ ಉಲ್ಲಂಘನೆ ಸಂಬಂಧ ದಂಡ ವಿಧಿಸಿದರು.
Related Articles
Advertisement
ತಂಡದಿಂದ 60 ಜನರಿಗೆ ತರಬೇತಿ ಸಹ ನೀಡಲಾಗಿದೆ. ಕೆಲವೆಡೆ ಕಾರ್ಯಾಚರಣೆ ವೇಳೆ ಹೋಲ್‌ಸೇಲ್ ಮಾರಾಟಗಾರರಿಗೆ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ-2003ರ (ಕೋಟಾ)ದ ಸೆಕ್ಷನ್ 7, 8, 9 ರ ಅಧಿನಿಯಮದಡಿ ಇರುವ ಕಾನೂನು ಕ್ರಮಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ. ತಾಲೂಕುವಾರು ಕೂಡ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ. ಹೋಲ್‌ಸೇಲ್ ವ್ಯಾಪಾರ ನಿಲ್ಲಿಸಲಿ ಗುಟಕಾ, ಸಿಗರೇಟು ಮಾರಾಟ ಮಾಡಬೇಡಿ ಅಂತ ನಮ್ಮಂತ ಸಣ್ಣಪುಟ್ಟ
ಗಡಿಗಳಿಗೆ ದಂಡ ವಿಧಿಸುತ್ತಾರೆ. ಮೊದಲು ಗುಟಕಾ, ಸಿಗರೇಟ್ ಉತ್ಪನ್ನಗಳನ್ನ ಹೋಲ್‌ಸೇಲ್ ಮಾರಾಟ ಮಾಡುವುದನ್ನು ಬಂದ್ ಮಾಡಿಸಿ. ಅಲ್ಲಿ ಮಾರಾಟ ನಿಲ್ಲಿಸಿದರೆ, ನಾವೂ ಸಹ ಮಾರಾಟ ಮಾಡಲ್ಲ. ಆಗ ಈ ಕಾರ್ಯಕ್ರಮ ಯಶಸ್ವಿ ಆಗುತ್ತದೆ. ಈ ಉತ್ಪನ್ನಗಳ ಮಾರಾಟದಿಂದ ನಾವೇನು ಸಾವಿರಾರು ರೂಪಾಯಿ ಲಾಭ ಪಡೆಯುತ್ತಿಲ್ಲ. ಮೊದಲು ಹೋಲ್‌ಸೇಲ್ ವ್ಯಾಪಾರ ಬಂದ್ ಮಾಡಿಸಲು ಕ್ರಮ ಕೈಗೊಳ್ಳಲಿ.
ಬಸವರಾಜ್, ಬೀಡಾ ಸ್ಟಾಲ್ ಮಾಲೀಕ. ತಂಬಾಕು ವ್ಯಸನಮುಕ್ತ ಕೇಂದ್ರ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ನ. 2 ರಂದು ತಂಬಾಕು ವ್ಯಸನಮುಕ್ತ ಕೇಂದ್ರ ತೆರೆಯಲಾಗಿದೆ. ಅಲ್ಲಿ ಸಾಮಾಜಿಕ ಕಾರ್ಯಕರ್ತರು, ಆಪ್ತ ಸಮಾಲೋಚಕರು ತಂಬಾಕು, ಸಿಗರೇಟ್ ಉತ್ಪನ್ನಗಳ
ಬಳಕೆಯಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವರು. ತಂಬಾಕು ವ್ಯಸನಿಗಳಿಗೆ ನಿಕೋಟಿನ್ ಚ್ಯುಯಿಂಗ್ ಗಮ್ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ ಜಿಲ್ಲಾ ತಂಬಾಕು ನಿಯಂತ್ರಣ ವಿಶೇಷ ತಂಡದಿಂದ ಈಗಾಗಲೇ ಜಿಲ್ಲೆಯಾದ್ಯಂತ ವಿವಿಧ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ತಂಬಾಕು ಉತ್ಪನ್ನಗಳ ಬಳಕೆಯಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಒಟ್ಟು ಈ ರೀತಿಯ 100 ಕಾರ್ಯಕ್ರಮ ಆಯೋಜಿಸುವ ಗುರಿಯಿದೆ.
ಸತೀಶ್ ಕಲಹಾಳ, ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ನಿನ್ನೆ 112 ಪ್ರಕರಣ
ಜಿಲ್ಲಾ ತಂಬಾಕು ನಿಯಂತ್ರಣ ವಿಶೇಷ ತಂಡ ಶುಕ್ರವಾರ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್, ಪಾನ್‌ಶಾಪ್, ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವವರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವರನ್ನು ಪತ್ತೆ ಹಚ್ಚಿ ಒಟ್ಟಾರೆ 112 ಪ್ರಕರಣ ದಾಖಲಿಸಿ, ಸ್ಥಳದಲ್ಲೇ 12,100 ರೂಪಾಯಿ ದಂಡ ವಸೂಲಿ ಮಾಡಿದೆ.