ನೈಗರ್: ಪಶ್ಚಿಮ ಆಫ್ರಿಕಾದ ನೈಗರ್ ದೇಶದ ರಾಜಧಾನಿ ನಿಯಾಮೆ ಸಮೀಪ ನಡೆದ ಭೀಕರ ಉಗ್ರರ ದಾಳಿಯಲ್ಲಿ 58 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸರ್ಕಾರಿ ಬಸ್ ಅನ್ನು ಗುರಿಯಾಗಿಸಿಕೊಂಡು, ಮಾಲಿಯ ಗಡಿಯಲ್ಲಿ ಉಗ್ರರು ದಾಳಿ ನಡೆಸಿದ್ದಾರೆ ಎಂದು ನೈಗರ್ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ಯಾನಿಬಂಗಸ್ ಪಟ್ಟಣದ ಸಮೀಪದ ಚೆನೆಡೋಗರ್ ಹಳ್ಳಿಗೆ ನಾಲ್ಕು ವಾಹನಗಳಲ್ಲಿ ಬಂದಿದ್ದ ಉಗ್ರರು ಸರ್ಕಾರಿ ಬಸ್ ಅನ್ನು ಅಡ್ಡಗಟ್ಟಿ ಬಾಂಬ್ ದಾಳಿ ನಡೆಸಿದ್ದಾರೆ. ಪರಿಣಾಮ 58 ಮಂದಿ ಸಾವನ್ನಪ್ಪಿದ್ದು, ಈವರೆಗೂ ಯಾವುದೇ ಉಗ್ರಗಾಮಿ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ ಎಂದು ನೈಗರ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನಿತ್ಯಭವಿಷ್ಯ: ಈ ರಾಶಿಯ ನಿರುದ್ಯೋಗಿಗಳಿಗೆ ಸಂತಸದ ಸುದ್ದಿ, ಅಚ್ಚರಿಯ ಬೆಳವಣಿಗೆ !
ಇದೀಗ ಉಗ್ರರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ಒಂದು ದಶಕದಿಂದ ನೈಗರ್ ನಲ್ಲಿ ಜಿಹಾದಿ ಉಗ್ರ ಸಂಘಟನೆಗಳು ಸಕ್ರಿಯವಾಗಿದ್ದು, ಈ ಕೃತ್ಯವನ್ನು ಕೂಡ ಇದೇ ಸಂಘಟನೆಗಳು ಎಸಗಿರಬೇಕೆಂದು ವರದಿ ತಿಳಿಸಿದೆ.