Advertisement

Narendra Modi Stadium ಮೇಲೆ ದಾಳಿ ಬೆದರಿಕೆ; ಓರ್ವನ ಬಂಧನ

11:36 PM Oct 11, 2023 | Team Udayavani |

ಅಹ್ಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಮೈದಾನದ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿರುವ ವ್ಯಕ್ತಿಯನ್ನು, ಅಹ್ಮದಾಬಾದ್‌ ಅಪರಾಧ ಪತ್ತೆ ದಳ ಬಂಧಿಸಿದೆ.

Advertisement

ತನ್ನ ಮೊಬೈಲ್‌ನಿಂದ ಬೆದರಿಕೆ ಇ-ಮೇಲ್‌ ಕಳುಹಿಸಿದ್ದ ಈ ವ್ಯಕ್ತಿ ಯಾವುದೇ ಅಪರಾಧಿ ಹಿನ್ನೆಲೆಯನ್ನು ಹೊಂದಿಲ್ಲ. ಈತ ಮೂಲತಃ ಮಧ್ಯಪ್ರದೇಶದವನು, ಗುಜರಾತ್‌ನ ರಾಜ್‌ಕೋಟ್‌ ಹೊರವಲಯದಲ್ಲಿ ವಾಸಿಸುತ್ತಿದ್ದಾನೆ. ಮೇಲ್‌ ಅನ್ನು ಈತನೇ ಕಳಿಸಿದನೇ, ಈತನ ಖಾತೆಯನ್ನು ಯಾರಾದರೂ ದುರ್ಬಳಕೆ ಮಾಡಿಕೊಂಡರೇ ಅಥವಾ ಖಾತೆ ಹ್ಯಾಕ್‌ ಆಗಿದೆಯೇ ಎಂಬುದು ಗೊತ್ತಾಗಿಲ್ಲ.

ಭದ್ರತಾ ಪಡೆಗಳ ಕಟ್ಟೆಚ್ಚರ
ಭಾರತ-ಪಾಕಿಸ್ಥಾನ ಪಂದ್ಯ ಅ. 14ರಂದು ಇದೇ ಮೈದಾನದಲ್ಲಿ ನಡೆಯಲಿದೆ. ಆ ವೇಳೆ ಸ್ಟೇಡಿಯಂ ಹೌಸ್‌ಫ‌ುಲ್‌ ಆಗುವುದು ಖಾತ್ರಿ. ಒಂದೇ ಕಡೆ ಲಕ್ಷಾಂತರ ಜನರು ಸೇರುವ ಜಾಗದಲ್ಲಿ ಅನಾಹುತವಾದರೆ ಭಾರೀ ಎಡವಟ್ಟು ಸಂಭವಿಸುತ್ತದೆ. ಹೀಗಾಗಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next