Advertisement

ಸಂಚಾರ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ: ಇಬ್ಬರ ಸೆರೆ 

09:53 AM Jul 22, 2023 | Team Udayavani |

ಬೆಂಗಳೂರು: ನೋ-ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿಗೆ ವೀಲ್‌ ಕ್ಲಾಂಪ್‌ ಹಾಕಿದಕ್ಕೆ ಸಂಚಾರ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

Advertisement

ಸ್ಥಳೀಯ ನಿವಾಸಿಗಳಾದ ಸುಲೇಮಾನ್‌ ಮತ್ತು ಫ‌ಹಾದ್‌ ಎಂಬುವರನ್ನು ಬಂಧಿಸ ಲಾಗಿದೆ. ಆರೋಪಿಗಳು ಬಾಣಸವಾಡಿ ಸಂಚಾರ ಠಾಣೆಯ ಕಾನ್‌ಸ್ಟೇಬಲ್‌ ಉಮೇಶ್‌ ಮೇಲೆ ಹಲ್ಲೆ ನಡೆಸಿದ್ದರು. ಕಾನ್‌ಸ್ಟೇಬಲ್‌ ಉಮೇಶ ಮತ್ತು ಎಎಸ್‌ಐ ನಾರಾಯಣಸ್ವಾಮಿ ಜತೆ ಜುಲೈ 19ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ 6 ಗಂಟೆ ಸುಮಾರಿಗೆ ಎಚ್‌ಆರ್‌ಬಿಆರ್‌ ಲೇಔಟ್‌ನ 5ನೇ ಮುಖ್ಯರಸ್ತೆಯಲ್ಲಿ ಈ ವೇಳೆ ಕಾರು ಮಾಲೀಕ ನೋ ಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿದ್ದಾನೆ. ಅದನ್ನು ಗಮನಿಸಿದ ಉಮೇಶ್‌ ಕಾರಿಗೆ ವೀಲ್‌ ಕ್ಲಾಂಪ್‌ ಹಾಕಿದ್ದಾರೆ.

ಕೆಲ ಹೊತ್ತಿನ ಬಳಿಕ ಕಾರಿನ ಬಳಿಕ ಮೊಬೈಲ್‌ ನಂಬರ್‌ವೊಂದರಿಂದ ಉಮೇಶ್‌ಗೆ ಕರೆ ಬಂದಿದ್ದು, ತಮ್ಮ ಜತೆ ಇರುವ ಮಹಿಳೆಗೆ ತೊಂದರೆ ಆಗಿದ್ದು, ಕೂಡಲೇ ಸ್ಥಳಕ್ಕೆ ಬಂದು ಕ್ಲಾಂಪ್‌ ತೆಗೆಯುವಂತೆ ಕೋರಿದ್ದಾರೆ. ಹೀಗಾಗಿ ಎಎಸ್‌ಐ ನಾರಾಯಣಸ್ವಾಮಿ ಜತೆ ಸ್ಥಳಕ್ಕೆ ಬಂದ ಉಮೇಶ್‌, ಮೇಲೆ ಏಕಾಏಕಿ ಇಬ್ಬರು ಪುರುಷರು ಮತ್ತು ಮಹಿಳೆಯರು ಜಗಳ ತೆಗೆದು, ಯಾಕ್ಕೆ ಕ್ಲಾಂಪ್‌ ಹಾಕಿದ್ದಿರಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅದಕ್ಕೆ ಉಮೇಶ್‌, ನಿಷೇಧಿತ ಪ್ರದೇಶದಲ್ಲಿ ಕಾರು ನಿಲ್ಲಿಸಿದ್ದಿರಾ? ಹೀಗಾಗಿ ಕ್ಲಾಂಪ್‌ ಹಾಕಲಾಗಿದೆ ಎಂದಿದ್ದಾರೆ. ಆಗ ಆಕ್ರೋಶ ಗೊಂಡ ಇಬ್ಬರು ಪುರುಷರು ಉಮೇಶ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳೆಯರು ಕೂಡ ಅದಕ್ಕೆ ಸಹಕಾರ ನೀಡುತ್ತಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next