ಹುಮನಾಬಾದ್ : ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಸೇರಿದಂತೆ ಇತರೆ ಕಾರ್ಯಕರ್ಯರಿಂದ ಹುಮನಾಬಾದ ತಹಶೀಲ್ದಾರ ಡಾ। ಪ್ರದೀಪಕುಮಾರ ಹಿರೇಮಠ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಯಚೂರು ನ್ಯಾಯಾಧೀಶರ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ತಹಶೀಲ್ದಾರ ಕಚೇರಿ ಎದುರಿಗೆ ಪ್ರತಿಭಟನೆ ನಿರತ ಬಿಎಸ್ ಪಿ ಕಾರ್ಯಕರ್ತರು ಮನವಿ ಪತ್ರ ಪಡೆಯಲು ಖುದ್ದು ಗ್ರೇಡ್-1 ತಹಶೀಲ್ದಾರ್ ಬರಬೇಕು ಎಂಬ ನಿಟ್ಟಿನಲ್ಲಿ ಒತ್ತಾಯಿಸಿದ ಪ್ರತಿಭಟನಾ ನಿರತರು ಕಚೇರಿಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಡಾ। ಪ್ರದೀಪಕುಮಾರ್ ಹೇಳಿದ್ದಾರೆ.
ಆಸ್ಪತ್ರೆಗೆ ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದ್ಯರಾದ ಡಾ। ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ ಭೇಟಿ ನೀಡಿದ್ದು, ಅವರಿಗೆ ಘಟನೆ ಬಗ್ಗೆ ವಿವರಿಸಿದ್ದಾರೆ.
ತಹಶೀಲ್ದಾರ ಕಚೇರಿ ಬಂದ್
ತಹಶಿಲ್ದಾರ ಮೇಲೆ ಹಲ್ಲೆ ಖಂಡಿಸಿ ತಹಶೀಲ್ದಾರ ಕಚೇರಿಯಲ್ಲಿನ ವಿವಿಧ ಇಲಾಖೆಗಳ ಸಿಬ್ಬಂದಿಗಳು ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಹಿರಿಯ ಅಧಿಕಾರಿಗಳ ಮೇಲೆ ಹಲ್ಲೆ ನಡೆದ ಮೇಲೆ ಸಿಬ್ಬಂದಿಗಳ ಗತಿ ಏನು ಎಂದು ಸಿಬ್ಬಂದಿಗಳು ಕೇಳುತ್ತಿದ್ದಾರೆ. ಕೂಡಲೇ ತಪ್ಪಿಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸುವ ಮೂಲಕ ನ್ಯಾಯ ದೊರೆಯುವಂತೆ ಆಗಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.
ಚಿಟಗುಪ್ಪ ಕಂದಾಯ ಸಿಬ್ಬಂದಿಗಳ ಪ್ರತಿಭಟನೆ.
ತಹಶೀಲ್ದಾರ ಮೇಲೆ ಹಲ್ಲೆ ಖಂಡಿಸಿ ಚಿಟಗುಪ್ಪ ತಾಲೂಕಿನ ಕಂದಾಯ ಸಿಬ್ಬಂದಿಗಳು ಕಾರ್ಯಕಲಾಪಗಳು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ.
ತಹಶೀಲ್ದಾರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿರುವುದ್ದು, ಖಂಡನೀಯವಾಗಿದೆ. ಇಂತಹ ಘಟನೆಗಳು ಈವರೆಗೂ ನಡೆದಿದಿಲ್ಲ. ಆದರೆ ಈ ಘಟನೆಯಿಂದ ಮುಕ್ತವಾಗಿ ಕೆಲಸ ಮಾಡುವುದಕ್ಕೆ ತೊಂದರೆ ಉಂತಾಗುತ್ತದೆ. ಕೂಡಲೇ ಹಲ್ಲೆ ನಡೆಸಿದ ಆರೋಪಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಿಬ್ಬಂದಿಗಳು ಒತ್ತಾಯಿಸಿದ್ದಾರೆ.