Advertisement

Udupi: ಬಾಡಿಗೆ ವಿಚಾರಕ್ಕೆ ರಿಕ್ಷಾ ಚಾಲಕನ ಮೇಲೆ ಹಲ್ಲೆ

09:44 PM Aug 03, 2024 | Team Udayavani |

ಉಡುಪಿ: ರಿಕ್ಷಾ ಬಾಡಿಗೆ ವಿಚಾರಕ್ಕೆ ಸಂಬಂಧಿಸಿ ಆಟೋ ಚಾಲಕರ ತಂಡವೊಂದು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರ ನಗರದಲ್ಲಿ ನಡೆದಿದೆ.

Advertisement

ಪ್ರತಾಪ್‌ ಚಂದ್ರ(38), ಹಲ್ಲೆಗೊಳಗಾದ ರಿಕ್ಷಾ ಚಾಲಕ. ಶನಿವಾರ ಗಾಂಧಿ ಆಸ್ಪತ್ರೆ ಬಳಿ ಆಟೋ ನಿಲ್ಲಿಸಿದ್ದ ಪ್ರತಾಪ್‌ಚಂದ್ರ ಅವರಿಗೆ ಪರಿಚಯದ ರಿಕ್ಷಾ ಚಾಲಕರಾದ ಮಿಥುನ್‌ , ಗುರುಪ್ರಸಾದ್‌, ಪ್ರಸಾದ್‌ ಅವರು ಆಟೋ ರಿಕ್ಷಾದಲ್ಲಿ ಬಂದು ನೀನು ಇಲ್ಲಿ ರಿಕ್ಷಾವನ್ನು ನಿಲ್ಲಿಸಬಾರದು ಎಂದು ತಿಳಿಸಿದ್ದಾರೆ. ಅನಂತರ ಊಟಕ್ಕೆ ಮನೆಗೆ ತೆರಳಿದ ಪ್ರತಾಪ್‌ ಚಂದ್ರ ಅವರು ಬನ್ನಂಜೆ ಗರಡಿ ರಸ್ತೆ ಕಡೆಗೆ ತೆರಳುತ್ತಿರುವಾಗ ಮಿಥುನ್‌,ಗುರುಪ್ರಸಾದ್‌ ಮತ್ತು ಪ್ರಸಾದ್‌ ಅವರು ಮಿಥುನ್‌ ಅವರ ರಿಕ್ಷಾದಲ್ಲಿ ಅಡ್ಡಗಟ್ಟಿ ಮೂವರು ಸೇರಿ ಅವಾಚ್ಯವಾಗಿ ನಿಂದಿಸಿದ್ದಾರೆ. ಕೋಲಿನಿಂದ ಹೊಡೆದು, ಸೂðಡ್ರೈವರ್‌ನಿಂದ ಹೊಟ್ಟೆ, ಎದೆಗೆ ಚುಚ್ಚಿ, ಕಾಲಿನಿಂದ ತುಳಿದಿದ್ದಾರೆ. ಮನೆಗೂ ತೆರಳಿ ಪ್ರತಾಪ್‌ಚಂದ್ರ ಅವರ ಹೆಂಡತಿಗೆ ನಿನ್ನ ಗಂಡನನ್ನು ಈ ದಿನ ಪುಡಿ ಮಾಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡಿರುವ ಚಾಲಕ ಪ್ರತಾಪ್‌ ಚಂದ್ರ ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next