Advertisement
ಕಳೆದ ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ತರೂರಿ ಬಳಿ ಗಾಂಜಾ ಬೆಳೆಯುತ್ತಿದ್ದ ಗ್ಯಾಂಗ್ ಪತ್ತೆ ಮಾಡಲು ಹೋಗಿದ್ದ ಶ್ರೀಮಂತ ಇಲ್ಲಾಳ್ ಮತ್ತು ಸಿಬ್ಬಂದಿ ಮೇಲೆ ಸುಮಾರು 40 ಜನರ ತಂಡ ದಿಢೀರನೆ ದಾಳಿ ಮಾಡಿದೆ.
Related Articles
Advertisement
ಎಸ್ಪಿ ಇಶಾ ಪಂತ ಆಸ್ಪತ್ರೆಗೆ ಭೇಟಿ ನೀಡಿ, ಗಾಂಜಾ ಬೆಳೆ ಬೆಳೆಯೋ ಬಗ್ಗೆ ಮಾಹಿತಿ ಹಿನ್ನೆಲೆ ನಮ್ಮ ಸಿಬ್ಬಂದಿ ದಾಳಿ ಮಾಡಲು ಹೋಗಿದ್ದರು. ಹೋದ ಮೇಲೆ ಗೊತ್ತಾಗಿದೆ ಅದು ಮಹಾರಾಷ್ಟ್ರ ಗಡಿ ಅಂತ. ಮಹಾರಾಷ್ಟ್ರದ ಉಮ್ಮರ್ಗಾ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಲು ಒಂದು ತಂಡ ಹೋದರೆ ಸಿಪಿಐ ಶ್ರೀಮಂತ್ ಇಲ್ಲಾಳ್ ಮತ್ತು ಕೆಲ ಸಿಬ್ಬಂದಿ ಸ್ಥಳದಲ್ಲೇ ಇದ್ದರು. ಅಲ್ಲಿ ಮೂವತ್ತಕ್ಕೂ ಹೆಚ್ಚು ಗಾಂಜಾ ಗಿಡಗಳು ಕೂಡಾ ಸಿಕ್ಕಿದ್ದವು. ಆದರೆ ಮೂವತ್ತಕ್ಕೂ ಹೆಚ್ಚು ಜನ ದಿಢೀರನೆ ಅಟ್ಯಾಕ್ ಮಾಡಿದ್ದಾರೆ. ನಮ್ಮ ಸಿಪಿಐ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಇದೀಗ ಅವರ ಆರೋಗ್ಯದ ಬಗ್ಗೆ ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದೇವೆ. ಅಗತ್ಯ ಬಿದ್ದರೆ ಏರ್ ಲಿಫ್ಟ್ ಮಾಡಿ ಬೇರೆ ಕಡೆ ಚಿಕಿತ್ಸೆ ಕೊಡಿಸುವ ಬಗ್ಗೆ ಕೂಡಾ ಚಿಂತನೆ ನಡೆದಿದೆ. ಗೃಹ ಸಚಿವರು, ಎಡಿಜಿಪಿ ಎಲ್ಲರೂ ಮಾತನಾಡಿದ್ದು ಚಿಕಿತ್ಸೆಗೆ ಬೇಕಾದ ಎಲ್ಲಾ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎಂದು ತಿಳಿಸಿದರು.
ಡಿಸಿ ಭೇಟಿ: ಶ್ರೀಮಂತ ಇಲ್ಲಾಳ ದಾಖಲಾಗಿರುವ ಖಾಸಗಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಎಸ್ಪಿ ಇಶಾ ಪಂತ್ ಭೇಟಿ ವೈದ್ಯರು ಮತ್ತು ಕುಟುಂಬದವರ ಜೊತೆ ಮಾತುಕತೆ ನಡೆಸಿದರು. ಎಸ್ಪಿ, ಡಿಸಿ ಅವರು ಶ್ರೀಮಂತ್ ಇಲ್ಲಾಳ್ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ಪಡೆದರು.