Advertisement

ಕೊಣಾಜೆ ಗ್ರಾಮ ಪಂಚಾಯತ್‌ ಅಧಿಕಾರಿ ಹಾಗೂ ಸದಸ್ಯನ ಮೇಲೆ ಹಲ್ಲೆ

10:06 PM Jul 16, 2019 | sudhir |

ಉಳ್ಳಾಲ: ತ್ಯಾಜ್ಯ ವಿಲೇವಾರಿಯ ಬಗ್ಗೆ ಮಾಹಿತಿ ಕೇಳಲು ತೆರಳಿದ್ದ ಕೊಣಾಜೆ ಗ್ರಾಮ ಪಂಚಾಯತ್‌ ಅಭಿವೃದ್ದಿ ಅಧಿಕಾರಿ ಹಾಗೂ ಪಂಚಾಯತ್‌ ಸದಸ್ಯನ ಮೇಲೆ ಇಬ್ಬರು ಪಾನಮತ್ತರು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಇನೋಳಿಯ ಸುರೇಂದ್ರ ಹಾಗೂ ಕೊಟೆಕಾರು ನಿವಾಸಿ ಯತೀಶ್‌ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ.ಅಸೈಗೋಳಿ ಸಮೀಪದ ಅನಧಿಕೃತ ಪಾಸ್ಟ್‌ಫುಡ್‌ ಅಂಗಡಿಯೊಂದಕ್ಕೆ ಕೊಣಾಜೆ ಪಂಚಾಯತ್‌ ಪಿಡಿಓ ಸವಿತಾ ಮತ್ತು ಪಂಚಾಯತ್‌ ಕಾರ್ಯದರ್ಶಿ ಶಾಲಿನಿ, ಸಿಬ್ಬಂದಿ ಭರತ್‌ ಅವರು ಕಸ ಹಾಗೂ ತ್ಯಾಜ್ಯ ವಿಲೇವಾರಿಯ ಬಗ್ಗೆ ಮಾಹಿತಿ ಕೇಳಲು ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಂಗಡಿಯ ಬಳಿ ಕುಳಿತಿದ್ದ ಸುರೇಂದ್ರ ಹಾಗೂ ಯೋಗೀಶ್‌ ಎಂಬುವವರು ಪಿಡಿಒ ಅವರಲ್ಲಿ ನಿಮಗೆ ಅವೆಲ್ಲಾ ಯಾಕೆ ಎಂದು ಪ್ರಶ್ನಿಸಿದಲ್ಲದೆ ಅವ್ಯಾಚ್ಯವಾಗಿ ನಿಂದಿಸಿ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದರು.

ಇದರಿಂದ ಭಯಗೊಂಡ ಸವಿತಾ ಅವರು ಪೊಲೀಸರಿಗೆ ಫೋನ್‌ ಮಾಡಿದಾಗ ಆರೋಪಿಗಳು ಫೋನ್‌ ಕಸಿಯಲು ಬಂದಾಗ ಸ್ಥಳಕ್ಕೆ ಬಂದ ಪಂಚಾಯತ್‌ ಸದಸ್ಯ ರವಿ ಅಸೈಗೋಳಿ ಅವರನ್ನು ತಡೆಯಲು ಯತ್ನಿಸಿದಾಗ ಆರೋಪಿಗಳು ರವಿಯ ಮೇಲೆ ಪೊಲೀಸರ ಎದುರೇ ಹಲ್ಲೆ ನಡೆಸಿದ್ದರು. ಈ ಬಗ್ಗೆ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next