Advertisement
ಜಿಲ್ಲಾ ಅಂಕಿತ ಅಧಿಕಾರಿ ಡಾ| ಶಿವಶಂಕರ ಬಿ. ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಘಟಕದಲ್ಲಿ ಆಕಾಶ ಹೆಸರಿನ ಸೋನ್ ಪಾಪಡಿ ತಯಾರಿಸಲಾಗುತ್ತಿದೆ. ಆದರೆ, ಪ್ಯಾಕೇಜ್ ಗಳ ಮೇಲೆ ಹೈದ್ರಾಬಾದ್‌ನ ವಿಳಾಸ ನಮೂದಿಸಿರುವುದು ಕಂಡುಬಂದಿದೆ. ಇದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ 52 ನೇ ವಿಧಿಪ್ರಕಾರ ಮಿಸ್ ಬ್ರಾಂಡ್ ಎಂದು ಪರಿಗಣಿಸಬಹುದು ಮತ್ತು 3 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ.
ಕಾರ್ಯಾಚರಣೆಯಲ್ಲಿ ತಾಲೂಕು ಆಹಾರ ಸುರಕ್ಷತಾ ಅಧಿಕಾರಿಗಳಾದ ಡಾ| ಪ್ರವೀಣ ಹೂಗಾರ, ರಮೇಶ ಬಿಕ್ಲೆ, ಪ್ರವೀಣಕುಮಾರ ಡಿ.ಎಂ., ಅಜಯ ಪಾಟೀಲ, ಇಸಾಕ್ ಭಾಗವಹಿಸಿದ್ದರು.