Advertisement
ರಿಯಾಸಿ ಮತ್ತು ಕಥುವಾದಲ್ಲಿ ದಾಳಿ ನಡೆದ ನಂತರ, ಜಮ್ಮು ಪ್ರದೇಶದಲ್ಲಿ ಕಳೆದ ಮೂರು ದಿನಗಳಲ್ಲಿ ಇದು ಮೂರನೇ ಉಗ್ರ ದಾಳಿಯಾಗಿದೆ.
Related Articles
Advertisement
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪ್ರಕಾರ, ಅಂತಾರಾಷ್ಟ್ರೀಯ ಗಡಿಗೆ (ಐಬಿ) ಸಮೀಪವಿರುವ ಹಿರಾನಗರ ಸೆಕ್ಟರ್‌ನಲ್ಲಿರುವ ಕಥುವಾದ ಸೈದಾ ಸುಖಲ್ ಗ್ರಾಮದ ಮನೆಯೊಂದರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಜೂನ್ 9 ರಂದು ರಿಯಾಸಿ ಜಿಲ್ಲೆಯ ದೇಗುಲದಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಗುಂಡಿನ ದಾಳಿ ನಡೆಸಿ 10 ಜನರನ್ನು ಹತ್ಯೆಗೈಯಲಾಗಿತ್ತು. ದಾಳಿಯಲ್ಲಿ 33 ಮಂದಿ ಗಾಯಗೊಂಡಿದ್ದರು.
ಮೂಲಗಳ ಪ್ರಕಾರ, ಭಯೋತ್ಪಾದಕರು ಮೇ 4 ರಂದು ಪೂಂಚ್‌ನಲ್ಲಿ ಭಾರತೀಯ ವಾಯುಪಡೆ (ಐಎಎಫ್) ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡ ಗುಂಪಿಗೆ ಸೇರಿದವರಾಗಿದ್ದಾರೆ.
ಸ್ಕೆಚ್ ಬಿಡುಗಡೆಪೌನಿ ಪ್ರದೇಶದಲ್ಲಿ ಯಾತ್ರಿಕರ ಬಸ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿರುವ ಉಗ್ರ ರ ಬಗ್ಗೆ ಯಾವುದೇ ಫಲಪ್ರದ ಮಾಹಿತಿ ನೀಡಿದರೆ 20 ಲಕ್ಷ ರೂ.ಇನಾಮನ್ನು ಘೋಷಿಸಿರುವ ರಿಯಾಸಿ ಪೊಲೀಸರು ಸ್ಕೆಚ್ ಬಿಡುಗಡೆ ಮಾಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಮತ್ತು ವಿವರಣೆ ಆಧರಿಸಿ ರೇಖಾಚಿತ್ರ ಸಿದ್ಧಪಡಿಸಲಾಗಿದೆ. ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವಂತೆ ರಿಯಾಸಿ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.