Advertisement
ಸವಣೂರು ಪಟ್ಟಣದಲ್ಲಿ ಅನಧಿಧೀಕೃತವಾಗಿ ನಕಲಿ ವೈದ್ಯ ವೃತ್ತಿ ನಡೆಸುತ್ತಿದ್ದ ಡಿ.ಕೆ. ಸಂಕನೂರ, ಎಂ.ಜೆ.ತೋಶಿಖಾನೆ, ಸಂಕ್ಲಿಪೂರ, ಅಬ್ದುಲ್ ರೆಹಮಾನ್ ಕಿಸ್ಮತಗಾರ, ಅಲ್ಲಾವುದ್ದೀನ ಗೋಕಾಕ, ಅಫlಲ್‌ಅಹ್ಮದ್ ಸಂಕ್ಲಿಪೂರ, ಕಾರಡಗಿ ಗ್ರಾಮದ ಮೆಹಬೂಬ್ ಎಸ್. ಗುತ್ತಲ, ಮಹಿಮಾ ಬೆಳವಡಿ ಸೇರಿದಂತೆ ವಿವಿಧ ಕಡೆ ಅನ ಧೀಕೃತ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡ ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ.ಎ.ಆರ್. ಹಾಗೂ ತಂಡ, ಕೆಪಿಎಂಇ ಕಾಯ್ದೆಯಡಿ ನೋಂದಣಿ ಪ್ರಮಾಣ ಪತ್ರ ಪಡೆಯದೆ ಮತ್ತು ವೈದ್ಯಕೀಯ ಪ್ರಮಾಣ ಪತ್ರ ಹೊಂದಿರದೆ ವೈದ್ಯಕೀಯ ಸೇವೆ ನಡೆಸುತ್ತಿರುವುದು ಕಾನೂನಿನಲ್ಲಿ ಅಪರಾಧವಾಗಿದೆ. ಹೀಗಾಗಿ ನೀವು ಈ ಕುರಿತು ಲಿಖೀತ ಸ್ಪಷ್ಟೀಕರಣ ನೀಡಬೇಕು ಹಾಗೂ ತಕ್ಷಣವೇ ಕ್ಲಿನಿಕ್‌ನ್ನು ಮುಚ್ಚುವ ಮೂಲಕ ವೈದ್ಯಕೀಯ ಸೇವೆ ನೀಡದಿರಲು ಸೂಚಿಸಿದರು. ಒಂದು ವೇಳೆ ಇದೇ ರೀತಿ ಮುಂದುವರಿಸಿದ್ದಲ್ಲಿ ಕಾನೂನಿನ ಪ್ರಕಾರ ಸೆಕ್ಷನ್ 40ರ ಭಾಗ-2ರ ಮತ್ತು 38, 420 ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ನೋಟಿಸ್ ನೀಡಿದರು. ಆರೋಗ್ಯ ಇಲಾಖೆ ಮೆಲ್ವಿಚಾರಕ ಪಿ.ಎಲ್. ಪೂಜಾರ, ಬಿಎಚ್‌ಇಒ ಎಸ್.ಎಫ್.ಹನಕನಳ್ಳಿ, ಬಿಪಿಎಂ ನಾಗರಾಜ ಹಾವೇರಿ ಇದ್ದರು.
ಡಾ| ಸತೀಶ.ಎ.ಆರ್.
ತಾಲೂಕು ಆರೋಗ್ಯಾಧಿಕಾರಿ