Advertisement

ತಂಬಾಕು ನಿಯಂತ್ರಣ ತನಿಖಾ ತಂಡದಿಂದ ದಾಳಿ

06:57 PM Oct 21, 2020 | Suhan S |

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಲಕಾರ್ಮಿಕರ ಯೋಜನೆ, ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಪೊಲೀಸ್‌ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ಹರಿಹರದ ವಿವಿಧ ಭಾಗದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ ನಡೆಸಲಾಯಿತು.

Advertisement

ಹರಿಹರ ನಗರದ ಶಿವಮೊಗ್ಗ ರಸ್ತೆಯ ಎಲ್ಲಾ ಹೊಟೇಲ್‌, ಬಾರ್‌, ಪಾನ್‌ಶಾಪ್‌, ಬಸ್‌ ನಿಲ್ದಾಣ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವವರು ಹಾಗೂ  ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವವರಿಗೆ ಸ್ಥಳದಲ್ಲಿಯೇ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕ ಸ್ಥಳದಲ್ಲಿರುವ ಅಂಗಡಿ ಮಾಲೀಕರುಗಳು ಧೂಮಪಾನ ನಿಷೇಧದ ಬಗ್ಗೆ ಪ್ರದರ್ಶಿಸಬೇಕಾದ ಫಲಕಗಳನ್ನು ಅಳವಡಿಸಲು ತಾಕೀತು ಮಾಡಲಾಯಿತು.

ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ| ಚಂದ್ರಮೋಹನ್‌, ಪಿಎಸ್‌ಐ ಶೈಲಶ್ರೀ, ಆಹಾರ ಸುರಕ್ಷತಾಧಿಕಾರಿ ಮಂಜುನಾಥ ಕುಸುಮ್ಮನ್‌ನವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಎಚ್‌. ಪಾಟೀಲ, ಹಿರಿಯ ಆರೋಗ್ಯ ಸಹಾಯಕ ಉಮ್ಮಣ್ಣ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ ಕಲಹಾಳ, ಸಮಾಜ ಕಾರ್ಯಕರ್ತ ಕೆ.ಪಿ. ದೇವರಾಜ್‌,ನಗರಸಭೆಯ ಆರೋಗ್ಯ ನಿರೀಕ್ಷಕ ಕೋಡಿ ಭೀಮರಾಯಪ್ಪ, ಶಿಕ್ಷಣ ಇಲಾಖೆಯ ಅಶೋಕ, ಕಿರಿಯ ಆರೋಗ್ಯ ಸಹಾಯಕ ದಾದಾಪೀರ್‌ ಸೇರಿದಂತೆ ಇತರರು ಇದ್ದರು.

ನ.7ರಿಂದ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಿಸಾನ್‌ ರ್ಯಾಲಿ :

ದಾವಣಗೆರೆ: ಕೇಂದ್ರದ ಎಪಿಎಂಸಿ, ಭೂ ಸುಧಾರಣೆ, ವಿದ್ಯುತ್‌  ಕಾಯ್ದೆ ತಿದ್ದುಪಡಿ ವಿರೋ ಧಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ  ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಹೋರಾಟ ನಡೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ ನ. 7 ರಿಂದ 9ರವರೆಗೆ ಬೆಳಗಾವಿ ಅಥವಾ ಹೈದರಾಬಾದ್‌ ಕರ್ನಾಟಕ ವಿಭಾಗದಲ್ಲಿ ಎರಡು ದಿನ ಕಿಸಾನ್‌ ರ್ಯಾಲಿ ನಡೆಯಲಿದೆ ಎಂದು ಕಿಸಾನ್‌ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಸಚಿನ್‌ ಮೀಗಾ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಳಿಯಾರ್‌- ಹುಬ್ಬಳ್ಳಿ- ಬೆಳಗಾವಿ,ದಾವಣಗೆರೆ- ಚನ್ನಗಿರಿ- ಶಿವಮೊಗ್ಗ ಜಿಲ್ಲೆಯ ಕಾಗೋಡು, ಬೀದರ್‌- ಕಲಬುರಗಿ ಮಾರ್ಗದಲ್ಲಿ ರ್ಯಾಲಿ ನಡೆಸಲು ಯೋಚಿಸಲಾಗಿದೆ. ಉಪ ಚುನಾವಣೆ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ಇತರರು ಕಿಸಾನ್‌ ರ್ಯಾಲಿಯ ಮಾರ್ಗ, ದಿನಾಂಕದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕಿಸಾನ್‌ ರ್ಯಾಲಿ ಆಯೋಜನೆಗೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಲಾಗಿದೆ. ರಾಹುಲ್‌ ಗಾಂಧಿಯವರು ಪಂಜಾಬ್‌,

ಉತ್ತರ ಪ್ರದೇಶದಲ್ಲಿ ಟ್ರ್ಯಾಕ್ಟರ್‌ ರ್ಯಾಲಿ ನಡೆಸಿದಂತೆ ಕರ್ನಾಟಕದಲ್ಲೂ ನಡೆಸುವ ಸಾಧ್ಯತೆ ಇದೆ. ರ್ಯಾಲಿ ಮಾರ್ಗ, ದಿನಾಂಕ ಇನ್ನಷ್ಟೇ ಅಂತಿಮವಾಗಬೇಕಿದೆ. ಎಪಿಎಂಸಿ, ವಿದ್ಯುತ್‌, ಭೂ ಸುಧಾರಣೆ ಹಾಗೂ ಎಫ್‌ಡಿಎಸ್‌ಆರ್‌ ಇತರೆ ರೈತ ವಿರೋಧಿ ಕಾಯ್ದೆ ತಿದ್ದುಪಡಿ ವಿರುದ್ಧ ಕಿಸಾನ್‌ ಕಾಂಗ್ರೆಸ್‌ ದಾವಣಗೆರೆಯಲ್ಲಿ ಸಹಿ ಸಂಗ್ರಹ ಚಳವಳಿ ಹಮ್ಮಿಕೊಂಡಿದ್ದು, ಈ ಚಳವಳಿ ಪ್ರಧಾನಿ ಮೋದಿ ಅವರ ದೆಹಲಿ ನಿವಾಸದವರೆಗೆ ನಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next