Advertisement

13 ಐಎಸ್‌ಐ ಖಾತೆಗಳ ಫೇಸ್‌ಬುಕ್‌ ಫ್ರೆಂಡ್ಸ್‌ ಮೇಲೆ ಎಟಿಎಸ್‌ ನಿಗಾ

06:00 AM Nov 18, 2018 | Team Udayavani |

ಲಕ್ನೋ: ಸುಮಾರು 1300 ಭಾರತೀಯ ಸ್ನೇಹಿತರನ್ನು ಹೊಂದಿರುವ ಪಾಕಿಸ್ಥಾನ ಮೂಲದ 13 ಫೇಸ್‌ಬುಕ್‌ ಅಕೌಂಟ್‌ಗಳ ಮೇಲೆ ಉತ್ತರಪ್ರದೇಶದ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್‌) ನಿಗಾ ಇಟ್ಟಿದೆ. ಈ ಖಾತೆಗಳು ಪಾಕ್‌ ಗುಪ್ತಚರ ಇಲಾಖೆ(ಐಎಸ್‌ಐ) ನಿರ್ವಹಿಸುತ್ತಿರುವ ನಕಲಿ ಖಾತೆಗಳು ಎಂಬ ಗುಮಾನಿ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ಫೇಸ್‌ಬುಕ್‌ ಮೂಲಕ ಐಎಸ್‌ಐನಿಂದ ಹನಿಟ್ರ್ಯಾಪ್‌ಗೆ ಒಳಗಾದ ಬ್ರಹ್ಮೋಸ್‌ ಏರೋಸ್ಪೇಸ್‌ ಎಂಜಿನಿಯರ್‌ ನಿಶಾಂತ್‌ ಅಗರ್ವಾಲ್‌ ಮತ್ತು ಬಿಎಸ್‌ಎಫ್ ಯೋಧ ಅಚ್ಯು ತಾನಂದ್‌ ಮಿಶ್ರಾ ಬಂಧನದ ಬಳಿಕ, ಸಾವಿರಾರು ಫೇಸ್‌ಬುಕ್‌ ಖಾತೆಗಳನ್ನು ಎಟಿಎಸ್‌ ತಡಕಾಡಿದೆ. ಈ ವೇಳೆ, ಪಾಕಿಸ್ಥಾನದ 13 ಖಾತೆಗಳು ಎಟಿಎಸ್‌ಗೆ ಸಿಕ್ಕಿದ್ದು, ಈ ಖಾತೆಗಳು 1300ರಷ್ಟು ಭಾರತೀಯರನ್ನು ಸ್ನೇಹಿತರನ್ನಾಗಿ ಹೊಂದಿವೆ. ಇದು ಐಎಸ್‌ಐ ನಿರ್ವಹಿಸುತ್ತಿರುವ ಖಾತೆಗಳಿರ ಬಹುದು ಎಂಬ ಶಂಕೆ ಮೂಡಿದ್ದು, ಇವುಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಅಲ್ಲದೆ, ಫೇಸ್‌ಬುಕ್‌ ಫ್ರೆಂಡ್ಸ್‌ ಪಟ್ಟಿಯಲ್ಲಿ ರಕ್ಷಣೆ ಅಥವಾ ಸೇನೆಯಲ್ಲಿರುವವರು ಯಾರಿದ್ದಾರೆ ಎಂಬುದರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next