Advertisement

ಬದಲಾದ ಉಗ್ರ ನಿಗ್ರಹ ತಂತ್ರ

12:30 AM Feb 13, 2019 | |

ಐಸಿಸ್‌ ಉಗ್ರ ಸಂಘಟನೆ ತನ್ನ ಖಲೀಫ‌ತ್‌ ಅನ್ನು ಭಾರತಕ್ಕೆ ಹರಡುವುದಾಗಿ 2014ರಲ್ಲಿ ಘೋಷಿಸಿದಾಗ, ನಿಜಕ್ಕೂ ಭಾರತ ಬೆಚ್ಚಿಬಿದ್ದಿತ್ತು. ಅಲ್‌ಖೈದಾ, ತಾಲಿಬಾನ್‌, ಇಂಡಿಯನ್‌ ಮುಜಾಹಿದ್ದೀನ್‌ನಂಥ ಉಗ್ರ ಸಂಘಟನೆಗಳನ್ನು ಎದುರಿಸುತ್ತಾ ಬಂದ ಅನುಭವವಿದ್ದರೂ, ಸಾಮಾಜಿಕ ಮಾಧ್ಯಮಗಳ ಮೂಲಕ ಅತಿ ವೇಗದ ವಿಸ್ತರಣೆ ಹೊಂದಿರುವ ಐಸಿಸ್‌ ಅನ್ನು ಎದುರಿಸುವುದಕ್ಕೆ ಯಾವ ಮಾರ್ಗ ಸರಿ ಎನ್ನುವ ಪ್ರಶ್ನೆ ಭಾರತಕ್ಕೆ ಎದುರಾಗಿತ್ತು. 

Advertisement

ಆಗ ರಚನೆಯಾದದ್ದೇ “ಆ್ಯಂಟಿ-ರ್ಯಾಡಿಕಲೈಸೇಷನ್‌’ ಕಾರ್ಯತಂತ್ರ. ಐಸಿಸ್‌ನಂಥ ಉಗ್ರಸಂಘಟನೆಗಳ ಬಲೆಗೆ ಬೀಳುವ ಹಂತದಲ್ಲಿರುವ ಯುವಕರನ್ನು ಪತ್ತೆ ಹಚ್ಚಿ,  ಅವರ ಮನಃ ಪರಿವರ್ತನೆ ಮಾಡುವುದು ಈ ಕಾರ್ಯತಂತ್ರದ ಉದ್ದೇಶ. 2015ರಿಂದಲೇ ಕೇಂದ್ರ-ರಾಜ್ಯ ಗೃಹ ಸಚಿವಾಲಯಗಳು, ರಾಜ್ಯ ಸರ್ಕಾರಗಳು-ಪೊಲೀಸ್‌ ಇಲಾಖೆಗಳು ಮತ್ತು ರಾ ಸೇರಿದಂತೆ ದೇಶದ ಗುಪ್ತಚರ ಸಂಸ್ಥೆಗಳು ಒಟ್ಟುಗೂಡಿ ಈ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ಅದರ ಫ‌ಲವೀಗ ಸ್ಪಷ್ಟವಾಗಿ ಗೋಚರಿಸುತ್ತಿದೆ. 

ಮತಾಂಧತೆಗೆ ಸಿಲುಕಿ ಐಸಿಸ್‌ ಸೇರಲು ಬಯಸಿದ್ದ 400ಕ್ಕೂ ಹೆಚ್ಚು ಯುವಕ ರನ್ನು ಪತ್ತೆ ಹಚ್ಚಿ, ಅವರಿಗೆ ಹೊಸ ಬದುಕು ನೀಡಿದ ಮಹಾರಾಷ್ಟ್ರದ ಉಗ್ರ ನಿಗ್ರಹ ದಳ(ಎಟಿಎಸ್‌) ಈ ಕಾರ್ಯತಂತ್ರದ ಯಶಸ್ಸಿಗೆ ಸ್ಪಷ್ಟ ಉದಾಹರಣೆ. ಎರಡು ವರ್ಷಗಳ ಹಿಂದೆ ಐಸಿಸ್‌ ಸೇರಲು ಬಯಸಿದ್ದ ಯುವಕನೊಬ್ಬ, ಎಟಿಎಸ್‌ನ ಸಹಾ ಯದಿಂದ ಈಗ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ ಸ್ವಂತ ಉದ್ಯಮ ಸ್ಥಾಪಿಸಿ ಸಂತೃಪ್ತ ಜೀವನ ನಡೆಸುತ್ತಿರುವ ಸುದ್ದಿಯು ನಿಜಕ್ಕೂ ಭಾರತದ ಆಂತರಿಕ ರಕ್ಷಣಾ ವಲಯದ ಮೇಲಿನ ಗೌರವವನ್ನು ನೂರ್ಮಡಿಸುವಂತೆ ಮಾಡಿದೆ. ಎಟಿಎಸ್‌, ಈ ಯುವಕರಿಗೆಲ್ಲ ಉದ್ಯೋಗ ತರಬೇತಿ ಮತ್ತು ಬ್ಯಾಂಕ್‌ಗಳಿಂದ ಸಾಲ ಸಿಗುವಂತೆ ನೋಡಿಕೊಂಡಿದೆ. ವಿಶೇಷವೆಂದರೆ, ಇವರಲ್ಲಿ ಅನೇಕ ಯುವ ಕರೀಗ “ಮೂಲಭೂತವಾದದ ಅಪಾಯದ ಬಗ್ಗೆ’ ತಮ್ಮ ಪ್ರದೇಶಗಳಲ್ಲಿ ಜಾಗೃತಿ ಮೂಡಿ ಸುತ್ತಿದ್ದಾರೆ. ತಪ್ಪು ದಾರಿಯಲ್ಲಿ ಹೊರಳಬಹುದಾದ ಮಕ್ಕಳನ್ನು ಪೊಲೀಸರು ಹಿಡಿದು ಒಳಗೆ ಹಾಕುವುದಿಲ್ಲ, ಅವರನ್ನು ಸರಿದಾರಿಗೆ ತರುತ್ತಾರೆ ಎಂಬ ಆಶಾದಾಯಕ ವಾತಾವರಣ ಸೃಷ್ಟಿಯಾಗಿ ರುವುದರಿಂದ ಅನೇಕ ಸಂದರ್ಭಗಳಲ್ಲಿ ಪೋಷಕರೇ ತಮ್ಮ ಮಕ್ಕಳ ಅನುಮಾ ನಾಸ್ಪದ ಚಲನವಲನಗಳ ಬಗ್ಗೆ ಪೊಲೀಸರಿಗೆ, ಎಟಿಎಸ್‌ಗೆ ಮಾಹಿತಿ ಒದಗಿಸಿದ್ದು- ಒದಗಿಸುತ್ತಿರುವುದು ವಿಶೇಷ. 

ಭಾರತದ ಭದ್ರತಾ ಸಂಸ್ಥೆಗಳ ಕಾರ್ಯವೈಖರಿಯಲ್ಲಿನ ಈ ಬೃಹತ್‌ ಪಲ್ಲಟ ಶ್ಲಾಘನೀಯ. ಇದೇ ಹಾದಿಯಲ್ಲೇ ಅನೇಕ ರಾಜ್ಯಗಳು ಹೆಜ್ಜೆಯಿಟ್ಟು ಯುವಕರನ್ನು ಸರಿದಾರಿಗೆ ತರುವ ಪ್ರಯತ್ನ ನಡೆಸಿವೆ.  ಆದರೆ, ವರ್ಷಗಟ್ಟಲೇ ಮತಾಂಧತೆಯ ಸಮ್ಮೊàಹಕ್ಕೆ ಒಳಗಾಗಿ ಉಗ್ರ ಸಂಘಟ ನೆಗಳನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವ ಎಲ್ಲರನ್ನೂ ಪತ್ತೆಹಚ್ಚುವುದು, ಅವರ ಮನಃಪರಿವರ್ತನೆ ಮಾಡುವುದು ಸುಲಭದ ಕೆಲಸ ಅಲ್ಲ. ಇಂದಿಗೂ ದೇಶದ ಸಾಮಾಜಿಕ ವಿಶ್ಲೇಷಕರು “ನಿರುದ್ಯೋಗ ಮತ್ತು ಶಿಕ್ಷಣದ ಕೊರತೆಯೇ ಯುವಕರು ಉಗ್ರವಾದಕ್ಕೆ ಮೊರೆಹೋಗಲು ಕಾರಣ’ ಎಂಬ ಒಂದೇ ಬದಿಯ ಹಾದಿತಪ್ಪಿಸುವ ವಾದಗಳನ್ನು ಎದುರಿಡುತ್ತಾರೆ. ಆದರೆ ಐಸಿಸ್‌ನ ಪ್ರಭಾವಕ್ಕೆ ಹೆಚ್ಚು ಒಳಗಾಗಿರುವ ರಾಜ್ಯಗಳಲ್ಲಿ, ದೇಶದ ಅತಿ ಸುಶಿಕ್ಷಿತ ರಾಜ್ಯವೆಂದೇ ಕರೆಸಿಕೊಳ್ಳುವ ಕೇರಳ ಎರಡನೆಯ ಸ್ಥಾನದಲ್ಲಿದೆ! ಕಾಶ್ಮೀರ ಮೊದಲನೇ ಸ್ಥಾನದಲ್ಲಿದೆ. ಭಾರತದಲ್ಲಿ ಐಸಿಸ್‌ ಪ್ರಭಾವ ಬೆಳೆಯುತ್ತಿದೆ ಎನ್ನುವುದು ರಾಷ್ಟ್ರಾದ್ಯಂತ ಗೊತ್ತಾದದ್ದೇ 2016ರಲ್ಲಿ ಕೇರಳದ 21 ಮಂದಿ(ಮಹಿಳೆಯರು ಮಕ್ಕಳು ಸೇರಿದಂತೆ) ಐಸಿಸ್‌ ಸೇರಿದ್ದಾರೆ ಎನ್ನುವುದು ತಿಳಿದಾಗ. 

ಕೇರಳವಂತೂ ಮತಾಂಧತೆಯ ಕೂಪವಾಗಿ ಬದಲಾಗಿರುವುದು ಅಲ್ಲಿಂದ ಹೊರಬರುವ ಸುದ್ದಿಗಳನ್ನು ಗಮನಿಸಿದಾಗ ಅರ್ಥವಾಗುತ್ತದೆ. ಈಗೆಂದಲ್ಲ, ಬಹಳ ಹಿಂದೆಯೇ ಕೇರಳದಲ್ಲಿ ಸಿಮಿ, ಇಂಡಿಯನ್‌ ಮುಜಾಹಿದಿನ್‌, ಬೇಸ್‌ ಮೂವೆ¾ಂಟ್‌ನ(ಅಲ್‌ಖೈದಾದ ಸ್ಥಳೀಯ ಚಹರೆ) ಪ್ರಭಾವ ಕಾಣಿಸಿಕೊಂಡಿತ್ತು. ಈಗಂತೂ ಕೆಲವು ಕಟ್ಟರ್‌ ಮೂಲಭೂತವಾದಿ ಸಂಘಟನೆಗಳು ಅಲ್ಲಿ ರಾಜ ಕೀಯ ಆಶ್ರಯ ಪಡೆದು ಮತಾಂಧತೆಯನ್ನು ಪಸರಿಸುತ್ತಿವೆ. ಕರ್ನಾಟ ಕಕ್ಕೂ ಕಾಲಿ ಟ್ಟಿರುವ ಈ ರಾಜಕೀಯ ಸಂಘಟನೆಗಳು, ತಮ್ಮ ನೆಲೆ ಬಲಪಡಿಸಿ ಕೊಳ್ಳಲು ಪ್ರಯತ್ನಿಸುತ್ತಿವೆ. ಗೃಹಸಚಿವಾಲಯ, ಐಬಿ ಮತ್ತು ಉಗ್ರನಿಗ್ರಹ ಪಡೆಗಳಿಗೆ ನಿಜಕ್ಕೂ ಕೇರಳ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ, ಆ್ಯಂಟಿ- ರ್ಯಾಡಿಕಲೈಸೇಷನ್‌ನಂಥ ಪ್ರಯತ್ನಗಳು ಇಂಥ ರಾಜ್ಯಗಳ ವಿಷಯದಲ್ಲಿ ಎಷ್ಟು ಪರಿಣಾಮಕಾರಿಯಾಗುತ್ತದೋ ತಿಳಿಯದು. ಒಂದಂತೂ ಸತ್ಯ, ಯುವಕರನ್ನು ಸರಿದಾರಿಗೆ ತರುವ ಜವಾಬ್ದಾರಿ ಸರ್ಕಾರಗಳು-ಭದ್ರತಾ ಸಂಸ್ಥೆಗಳಿ ಗಿಂತಲೂ ಹೆಚ್ಚಾಗಿ ಸಮುದಾಯದ ಮುಖಂಡರು, ಮನೆಯವರ ಮೇಲೂ ಇರುತ್ತದೆ. 
ಈ ನಿಟ್ಟಿನಲ್ಲಿ ಪ್ರಯತ್ನಗಳು ವೇಗವಾಗಿ ನಡೆಯಲೇಬೇಕಿದೆ.  
 

Advertisement
Advertisement

Udayavani is now on Telegram. Click here to join our channel and stay updated with the latest news.

Next