Advertisement

ಇಂದಿನಿಂದ ಎಟಿಪಿ ಫೈನಲ್ಸ್‌ ಟೆನಿಸ್‌

09:25 PM Nov 13, 2021 | Team Udayavani |

ಟುರಿನ್‌ (ಇಟಲಿ): ಸ್ವಿಜರ್ಲೆಂಡ್‌ ತಾರೆ ರೋಜರ್‌ ಫೆಡರರ್‌ ಅವರ ದಾಖಲೆಯನ್ನು ಸರಿದೂಗಿಸುವ ಗುರಿಯೊಂದಿಗೆ ನಂ.1 ಟೆನಿಸಿಗ ನೊವಾಕ್‌ ಜೊಕೊವಿಕ್ ಭಾನವಾರದಿಂದ ಆರಂಭವಾಗಲಿರುವ ಎಟಿಪಿ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

Advertisement

ಮೊದಲ ಪಂದ್ಯದಲ್ಲಿ ಕ್ಯಾಸ್ಪರ್‌ ರೂಡ್‌ ಅವರನ್ನು ಎದುರಿಸಲಿದ್ದಾರೆ. ವರ್ಷದ ಎಲ್ಲ 4 ಗ್ರ್ಯಾನ್‌ಸ್ಲಾéಮ್‌ ಚಾಂಪಿಯನ್‌ ಪ್ರಶಸ್ತಿಯತ್ತ ದಾಪುಗಾಲಿಕ್ಕಿದ ಜೊಕೊವಿಚ್‌, ಯುಎಸ್‌ ಓಪನ್‌ ಫೈನಲ್‌ನಲ್ಲಿ ಡ್ಯಾನಿಲ್‌ ಮೆಡ್ವೆಡೆವ್‌ ವಿರುದ್ಧ ಎಡವಿದ್ದರು. ಟೋಕ್ಯೊ ಒಲಿಂಪಿಕ್ಸ್‌ನಲ್ಲೂ ಯಾವುದೇ ಪದಕ ಒಲಿದಿರಲಿಲ್ಲ.

ಕಳೆದ ವಾರ ನಡೆದ ಪ್ಯಾರಿಸ್‌ ಮಾಸ್ಟರ್ನಲ್ಲಿ ಮೆಡ್ವೆಡೆವ್‌ ಅವರನ್ನು ಸೋಲಿಸಿ ಚಾಂಪಿಯನ್‌ ಆಗಿರುವ ಜೊಕೊ, ಇದೀಗ ಎಟಿಪಿ ಫೈನಲ್ಸ್‌ನಲ್ಲಿ 6 ಪ್ರಶಸ್ತಿ ಗೆದ್ದಿರುವ ಫೆಡರರ್‌ ದಾಖಲೆಯನ್ನು ಸರಿಗಟ್ಟುವ ಯೋಜನೆಯಲ್ಲಿದ್ದಾರೆ. ಸ್ವಾರಸ್ಯವೆಂದರೆ, 2015ರಿಂದೀಚೆ ಜೊಕೊ ಎಟಿಪಿ ಫೈನಲ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿಲ್ಲ. ಆದರೆ ಈ ಬಾರಿ ಫೆಡರರ್‌ ಮತ್ತು ನಡಾಲ್‌ ಗೈರಲ್ಲಿ ಜೊಕೊ ಹಾದಿ ಸುಗಮವಾದೀತು ಎಂಬುದೊಂದು ಲೆಕ್ಕಾಚಾರ.

Advertisement

Udayavani is now on Telegram. Click here to join our channel and stay updated with the latest news.

Next