ಚೆನ್ನೈ: ಅಪನಗದೀಕರಣ ಯೋಜನೆ ಜಾರಿಯಲ್ಲಿದ್ದ ಅವಧಿಯಲ್ಲಿ ಜನರಿಗೆ ನೆರವಾಗುವ ನಿಟ್ಟಿನಲ್ಲಿ ತೆಗೆದು ಹಾಕಲಾಗಿದ್ದ ಎಟಿಎಂ ಬಳಕೆ ಶುಲ್ಕವನ್ನು ಜ.1ರಿಂದಲೇ ಮರು ಜಾರಿ ಮಾಡಲಾಗಿದೆ.
ಹೀಗಾಗಿ ಯಾವುದೇ ಡೆಬಿಟ್‌ಕಾರ್ಡ್ ಬಳಕೆದಾರರು ಜ.1ರ ಬಳಿಕ ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ಮಾಸಿಕ 5 ಬಾರಿ, ಇತರ ಬ್ಯಾಂಕಿನ ಎಟಿಎಂಗಳಲ್ಲಿ ಮಾಸಿಕ 3 ಬಾರಿ ಉಚಿತ ವ್ಯವಹಾರ ನಡೆಸಬಹುದಾಗಿದೆ. ಅನಂತರದ ಪ್ರತಿ ವಹಿವಾಟಿಗೂ ಶುಲ್ಕ ವಿಧಿಸಲಾಗುವುದು.
ಅಪನಗದೀಕರಣದ ವೇಳೆ ಭಾರೀ ಪ್ರಮಾಣದಲ್ಲಿ ಎಟಿಎಂಗಳು ಬಂದ್ ಆಗಿದ್ದ ಹಿನ್ನೆಲೆಯಲ್ಲಿ, ಯಾವುದೇ ಬಳಕೆದಾರರು, ಯಾವುದೇ ಬ್ಯಾಂಕಿನ ಎಟಿಎಂಗಳಲ್ಲಿ ಎಷ್ಟು ಬಾರಿ ಬೇಕಾದರೂ ಉಚಿತವಾಗಿ ವ್ಯವಹಾರ ನಡೆಸಲು ಬ್ಯಾಂಕ್‌ಗಳು ಅವಕಾಶ ಮಾಡಿಕೊಟ್ಟಿದ್ದವು. ಜ.1ರ ನಂತರವೂ ಪೂರ್ಣ ಪ್ರಮಾಣದಲ್ಲಿ ಎಲ್ಲಾ ಎಟಿಎಂಗಳು ಬಾಗಿಲು ತೆರೆಯದೇ ಇದ್ದರೂ, ಬ್ಯಾಂಕ್‌ಗಳಲ್ಲಿ ಹಣ ಪಡೆಯಲು ಮಿತಿ ಮುಂದುವರಿದ ಹೊರತಾಗಿಯೂ, ಎಟಿಎಂ ಬಳಕೆ ಶುಲ್ಕವನ್ನು ಮರು ಜಾರಿಗೊಳಿಸಲಾಗಿದೆ.