Advertisement

ಎಟಿಎಂ ಹಲ್ಲೆಕೋರ ಮಧುಕರ್‌ ಬೆಂಗಳೂರು ಪೊಲೀಸರ ವಶಕ್ಕೆ

11:53 AM Mar 07, 2017 | Team Udayavani |

ಬೆಂಗಳೂರು: ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಕಾರ್ಪೊರೇಷನ್‌ ಎಟಿಎಂ ಬಳಿ ಬ್ಯಾಂಕ್‌ ಉದ್ಯೋಗಿ ಜ್ಯೋತಿ ಉದಯ್‌ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿ ಮಧುಕರ್‌ ರೆಡ್ಡಿಯನ್ನು ನಗರ ಪೊಲೀಸರು ಸೋಮವಾರ  ರಾತ್ರಿ ಬೆಂಗಳೂರಿಗೆ ಕರೆ ತಂದಿದ್ದಾರೆ.  ಕಡಪ ಜೈಲಿನಲ್ಲಿದ್ದ ಆರೋಪಿಯನ್ನು ಬಾಡಿ ವಾರೆಂಟ್‌ ಮೇಲೆ ನಗರಕ್ಕೆ ಕರೆ ತರಲಾಗಿದೆ. ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್‌ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗುವುದು ಎಂದು ಡಿಸಿಪಿ ಡಾ.ಚಂದ್ರಗುಪ್ತ ಹೇಳಿದ್ದಾರೆ.

Advertisement

ನಗರಕ್ಕೆ ಕರೆ ತಂದ ಆರೋಪಿ ಮಧುಕರ್‌ ರೆಡ್ಡಿಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ  ವೈದ್ಯಕೀಯ ತಪಾಸಣೆಗೊಳಪಡಿಸಲಾಯಿತು. ಆರೋಪಿಯನ್ನು ವಶಕ್ಕೆ ಪಡೆದ ಬಳಿಕ ಪ್ರಕರಣದ ಸಂತ್ರಸ್ತ ಮಹಿಳೆಯಿಂದ ಆರೋಪಿ ಗುರುತು ಪತ್ತೆ ಪರೇಡ್‌ ಮತ್ತು ಸ್ಥಳ ಮಹಜರ್‌ ನಡೆಸಲಾಗುವುದು. ಸಂತ್ರಸ್ತ ಮಹಿಳೆಯಿಂದ ಹೇಳಿಕೆ ದಾಖಲಿಸಿಕೊಂಡು, ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಲಾವುದು ಎಂದು ತನಿಖಾಕಾರಿಯೊಬ್ಬರು ತಿಳಿಸಿದರು. 

ಕೊಲೆ ಪ್ರಕರಣವೊಂದರಲ್ಲಿ ಮಧುಕರ್‌ ರೆಡ್ಡಿಯನ್ನು ಧರ್ಮಾವರಂ ಪೊಲೀಸರು ಹಾಗೂ ಕೊಲೆ ಸೇರಿದಂತೆ ನಾಲ್ಕು ಪ್ರಕರಣದಲ್ಲಿ ಚಿತ್ತೂರು ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಆರೋಪಿಯನ್ನು ಬಾಡಿ ವಾರೆಂಟ್‌ ಮೇಲೆ ಬೆಂಗಳೂರಿಗೆ ಕರೆ ತರಲು ಫೆ.28 ರಂದೆ ಅಲ್ಲಿನ ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು. ಅಲ್ಲಿನ ಪ್ರಕರಣಗಳಲ್ಲಿ ಸ್ಥಳೀಯರು ಪೊಲೀಸರು ವಶಕ್ಕೆ ಪಡೆದಿದ್ದರಿಂದ ನಗರಕ್ಕೆ ಕರೆ ತರುವುದು ತಡವಾಯಿತು ಎಂದು ಅಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next