ಬೆಂಗಳೂರು: ರಾತ್ರಿ ವೇಳೆ ಗ್ಯಾಸ್ ಕಟರ್‌ನಿಂದ ಎಟಿಎಂ ಯಂತ್ರಗಳನ್ನು ಕಟ್ ಮಾಡಿ ಬಳಿಕ ಅದರಲಿದ್ದ ಹಣ ದೋಚಿ ಪರಾರಿ ಆಗುತ್ತಿದ್ದ ಖದೀಮನನ್ನು ಸೋಲದೇವನಹಳ್ಳಿ ಪೋಲಿಸರು ಬಂಧಿಸಿದ್ದಾರೆ.
ಪಂಜಾಬ್ ಮೂಲದ ಸಮರ್ಜಿತ್ ಸಿಂಗ್ (36)ಬಂಧಿತ ಆರೋಪಿ. ಈತ ಕಳೆದ ಡಿಸೆಂಬರ್‌ನಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಮತ್ತೆ ಕಳ್ಳತನಕ್ಕೆ ಇಳಿದಿದ್ದ. ಆರೋಪಿಯಿಂದ ಕೃತ್ಯಕ್ಕೆ ಬಳಸುತ್ತಿದ್ದ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಚಿಕ್ಕಸಂದ್ರದ ಸಪ್ತಗಿರಿ ಕಾಲೇಜು ರಸ್ತೆಯ ಕೆನರಾ ಬ್ಯಾಂಕ್‌ನ ಎಟಿಎಂ ಬಳಿ ಕಳೆದ ನಾಲ್ಕೈದು ದಿನ ಗಳಿಂದ ರಾತ್ರಿ ಸುಮಾರು 10.30ರಿಂದ 11ಗಂಟೆ ಯೊಳಗೆ ಬಂದು ಶೆಟರ್ ಮುಚ್ಚುವುದು ಹಾಗೂ ಮುಂಜಾನೆ 4.30 ರಿಂದ 5 ಗಂಟೆಯವರೆಗೆ ಶೆಟರ್ ತೆಗೆದು ಎಟಿಎಂ ಯಂತ್ರವನ್ನು ಪರಿಶೀಲಿಸುತ್ತಿ ರುವುದು ಏಜೆನ್ಸಿ ರವರ ಗಮನಕ್ಕೆ ಬಂದಿದೆ. ಜತೆಗೆ ಜೂ.7ರಂದು ಮುಂಜಾನೆ ಕಾರ್ಡ್ ರೀಡರ್ ಜಾಮ್ ಆಗಿದ್ದನ್ನು ಸರಿಪಡಿಸಿದ್ದು ಜೂ.9 ಬೆಳಗ್ಗೆ ಲ್ಯಾನ್ ಕೇಬಲ್ ಕಟ್ ಮಾಡಿರುವುದು ಕಂಡು ಬಂದಿದೆ. ಈ ರೀತಿ ಪದೇ ಪದೆ ಆಗುತ್ತಿರುವ ತೊಂದರೆ ಬಗ್ಗೆ ಏಜೆನ್ಸಿ ರವರಿಗೆ ಅನುಮಾನ ಬಂದು ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿ ಮುಂಭಾಗದಲ್ಲಿದ್ದ ಅಂಗಡಿಯ ಸಿಸಿ ಟೀವಿ ಪರಿಶೀಲಿಸಿದಾಗ ಅದರಲ್ಲಿ ಅಪರಿಚಿತನೊಬ್ಬ ಎಟಿಎಂ ಕೇಂದ್ರದೊಳಗೆ ಹೋಗುತ್ತಿರುವುದು ಹಾಗೂ ರಾತ್ರಿ ವೇಳೆಯಲ್ಲಿ ಶೆಟರ್ ಹಾಕುತ್ತಿರುವುದು ಕಂಡು ಬಂದಿದೆ. ಕೂಡಲೇ ಏಜೆನ್ಸಿ ಅಧಿಕಾರಿಗಳು ಸೋಲದೇವನ ಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಅದೇ ವೇಳೆಗೆ ಪೊಲೀಸ್ ಸಿಬ್ಬಂದಿ ಆರೋಪಿಯನ್ನು ಹಿಡಿದುಕೊಂಡು ಬಂದಿದ್ದಾರೆ.
ಆತನನ್ನು ವಿಚಾರಿಸಿದಾಗ ಸಪ್ತಗಿರಿ ಕಾಲೇಜು ರಸ್ತೆಯ ಕೆನರಾ ಬ್ಯಾಂಕ್‌ನ ಎಟಿ ಎಂಗೆ ಬಂದು ಹೋಗುತ್ತಿರುವುದನ್ನು ಬಾಯ್ಬಿಟ್ಟಿದ್ದಾನೆ. ಈ ಸಂಬಂಧಿಸಿದಂತೆ ರಾತ್ರಿ ಕನ್ನ ಕಳವು ಪ್ರಯತ್ನ ಮತ್ತು ಶಸ್ತ್ರ ಕಾಯ್ದೆಯಡಿ ಪ್ರಕರಣ ದಾಖ ಲಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಆರೋಪಿಯು ಪಂಜಾಬ್‌ನಿಂದ ರಾಜ್ಯಕ್ಕೆ ಬಂದು ತನ್ನ ಸಹಚರರ ಜೊತೆ ಸೇರಿಕೊಂಡು ಎಟಿಎಂ ಮಷಿನ್‌ಗಳನ್ನು ಗ್ಯಾಸ್ ಕಟ್ಟರ್‌ನಿಂದ ಕಟ್ ಮಾಡಿ ಹಣ ಕಳ್ಳತನ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.
ಆರೋಪಿಯ ವಿರುದ್ಧ 2019 ನೇ ಸಾಲಿನಿಂದ ಪರಪ್ಪನ ಅಗ್ರಹಾರ ಠಾಣೆ-1, ಜಾಲ ಹಳ್ಳಿ-1, ಸುಬ್ರಮಣ್ಯಪುರ-1 ರಾತ್ರಿ ಕನ್ನಾ ಕಳವು ಪ್ರಕರಣ (ಎಟಿಎಂ ಕೇಂದ್ರ) ಹಾಗೂ ಮೈಕೋಲೇ ಔಟ್-1, ಚನ್ನಮ್ಮಕೆರೆ ಅಚ್ಚುಕಟ್ಟು-1 ರಾತ್ರಿ ಕನ್ನಾ ಕಳವು ಪ್ರಯತ್ನ ಪ್ರಕರಣ (ಎಟಿಎಂ ಕೇಂದ್ರ) ಹಾಗೂ ಬ್ಯಾಟರಾಯನಪುರ ಠಾಣೆ-1 ಎಟಿಎಂನಲ್ಲಿ ರಾತ್ರಿ ಕನ್ನ ಕಳವು ಮಾಡುವಾಗ ಕೊಲೆ ಯತ್ನ ಮತ್ತು ಹಲ್ಲೆ ಮಾಡಿರುವ ಪ್ರಕರಣ ದಾಖಲಾ ಗಿದೆ. ಜತೆಗೆ ವಿವಿಧ ಪ್ರಕರಣಗಳ ವಿಚಾರಣೆ ಸಮಯದಲ್ಲಿ ಆರೋಪಿ ಯು ನ್ಯಾಯಾಲಯಕ್ಕೆ ಹಾಜ ರಾಗದೇ ತಲೆಮರೆಸಿಕೊಂಡಿರುವುದು ತಿಳಿದು ಬಂದಿದ್ದು ರಾಜ್ಯದಲ್ಲಿ ಕಳವು ಮಾಡಿ ಪಂಜಾಬ್ ಪರಾರಿಯಾಗಿ ಹಣ ಖರ್ಚಾಗುವವರೆಗೆ ತಲೆಮರೆಸಿಕೊಳ್ಳುತ್ತಿದ್ದ ಎಂದು ಪೋಲಿಸರು ಹೇಳಿದ್ದಾರೆ.
ಎಟಿಎಂ ದರೋಡೆಗೆ ಬಳಸುತ್ತಿದ್ದ ಪರಿಕರಗಳು : ಆರೋಪಿಯಿಂದ 5 ಕೆ.ಜಿ. ತೂಕದ ಗ್ಯಾಸ್ ಸಿಲಿಂಡರ್-1, ಪೈಪ್ ಒಳಗೊಂಡ ಗ್ಯಾಸ್ ಕಟ್ಟರ್-1, ಏರ್ ಫಿಲ್ಟರ್ ಮಾಸ್ಕ್, ಟೈರ್ ಲಿವರ್-1, ಸ್ðಯೂ ಡ್ರೈವರ್-1, ಆಕ್ಸಿಜನ್ ಸಿಲಿಂಡರ್ ಕೀ, ಏಷಿಯನ್ ಪೈಂಟ್ ಸ್ಟ್ರೈ-1, ಚಾಕು-1, ಲೈಟರ್-1, ಕಬ್ಬಿಣದ ರಿಂಚ್-1, ವೈರ್ ಕಟರ್-1, ಕಬ್ಬಿಣದ ಕತ್ತಿ-1, 10 ಲೀಟರ್‌ನ ಆಕ್ಸಿಜನ್ 2 ಸಿಲಿಂಡರ್‌ಗಳು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.