Advertisement

ತುಮಕೂರು: ಹಣದ ಸಮೇತ ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಕಳ್ಳರು ;ಪೊಲೀಸರಿಂದ ಕಾರ್ಯಾಚರಣೆ

01:49 PM Jan 19, 2021 | Team Udayavani |

ತುಮಕೂರು: ಹಣದ ಸಮೇತ ಎಟಿಎಂ ಯಂತ್ರವನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ಹೆಗ್ಗೆರೆಯಲ್ಲಿರುವ ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ನ ಎಟಿಎಂನಲ್ಲಿ ಸೋಮವಾರ ನಡೆದಿದೆ. ಮಧ್ಯರಾತ್ರಿ ನಾಲ್ಕು ಚಕ್ರದ ವಾಹನದ ಬಂದಿರುವ ಕಳ್ಳರು ಎಟಿಎಂ ಕೇಂದ್ರಕ್ಕೆ ನುಗ್ಗಿ ಹಣದ ಸಮೇತವೇ ಎಟಿಎಂ ಯಂತ್ರವನ್ನು ಕದ್ದೊಯ್ದಿದ್ದಾರೆ.
ಈ ಬ್ಯಾಂಕ್‌ ಬಳಿಯೇ ಎಟಿಎಂ ಕೇಂದ್ರ ಹಾಗೂ ಜಿಮ್‌ ಕೇಂದ್ರ ಇದೆ.

Advertisement

ಮುಂಜಾನೆ ಜಿಮ್‌ ಕೇಂದ್ರಕ್ಕೆ ಬಂದ ಸ್ಥಳೀಯರು ಎಟಿಎಂ ಕೇಂದ್ರದಲ್ಲಿ ಎಟಿಎಂ ಯಂತ್ರ ಕಳುವಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರವಾಣಿ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಘಟನೆಯ ಸುದ್ದಿ ತಿಳಿದ ಕೂಡಲೇ ಗ್ರಾಮಾಂತರ ಠಾಣೆಯ ಸಬ್‌ಇನ್‌ Õಪೆಕ್ಟರ್‌ ಲಕ್ಷ್ಮಯ್ಯ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಎಟಿಎಂ ಕೇಂದ್ರದಲ್ಲಿ ಅಳವಡಿ ಸಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮಧ್ಯರಾತ್ರಿ ನಾಲ್ಕು ಚಕ್ರದ ವಾಹನದಲ್ಲಿ ಬಂದಿರುವ ಕಳ್ಳರು ಹಣದ ಸಮೇತ ಎಟಿಎಂ ಯಂತ್ರವನ್ನು ಕದ್ದೊಯ್ದಿದ್ದಿ ರುವುದು ಸಿಸಿ ಟಿವಿ ದೃಶ್ಯದಲ್ಲಿ ಕಂಡು ಬಂದಿದೆ. ಆದರೆ ಸೆರೆಯಾಗಿರುವ ದೃಶ್ಯ ಗಳು ಸರಿಯಾಗಿ ಕಾಣಿಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಎಟಿಎಂ ಕೇಂದ್ರದಲ್ಲಿ ಕಳ್ಳತನವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಬ್ಯಾಂಕ್‌ ಅಧಿಕಾರಿಗಳು
ಸ್ಥಳಕ್ಕೆ ಧಾವಿಸಿ ಎಟಿಎಂ ಯಂತ್ರದಲ್ಲಿ 83 ಸಾವಿರ ರೂ. ನಗದು ಇತ್ತು.

ಇದನ್ನೂ ಓದಿ:ಮಂಗಳೂರು ಗೋಲಿಬಾರ್ ಗೆ ಪ್ರತೀಕಾರ: ಪೊಲೀಸ್ ಸಿಬ್ಬಂದಿ ಕೊಲೆ ಯತ್ನದ ಹಿಂದೆ ‘ಮಾಯಾ ಗ್ಯಾಂಗ್’

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಡಿವೈಎಸ್ಪಿ ತಿಪ್ಪೇಸ್ವಾಮಿ, ಸಿಪಿಐ ರಾಮಕೃಷ್ಣ ಹಾಗೂ ಪಿಎಸ್‌ಐ ಲಕ್ಷ್ಮಯ್ಯ ನೇತೃತ್ವದಲ್ಲಿ ವಿಶೇಷ ತಂಡವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೋ.ನಂ. ವಂಸಿಕೃಷ್ಣ ರಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next