Advertisement
ಎಟಿಎಮ್ ಹಾಗೂ ಚೆಕ್ ಟ್ರಾನ್ಸಾಕ‍್ಶನ್ ಗಳಲ್ಲಿ ಕೆಲವು ಬದಲಾವಣೆಯನ್ನು ಅನುಷ್ಠಾನಗೊಳಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆದೇಶ ಹೊರಡಿಸಿದೆ.
Related Articles
Advertisement
ತನ್ನ ಅಧಿಕೃತ ವೆಬ್ ಸೈಟ್ ಮೂಲಕ ಮಾಹಿತಿ ನೀಡಿದ ಎಸ್ ಬಿ ಐ,., ಹೊಸ ಶುಲ್ಕಗಳ ನಿಯಮಗಳು ಚೆಕ್ ಬುಕ್, ವರ್ಗಾವಣೆ ಮತ್ತು ಇತರ ಹಣಕಾಸೇತರ ವಹಿವಾಟುಗಳಿಗೆ ಅನ್ವಯವಾಗುತ್ತವೆ. ಹೊಸ ಸೇವಾ ಶುಲ್ಕಗಳು ಎಸ್ ಬಿ ಐ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (ಬಿಎಸ್‌ಬಿಡಿ) ಖಾತೆದಾರರಿಗೆ ಜುಲೈ 1, 2021 ರಿಂದ ಅನ್ವಯವಾಗುತ್ತವೆ ಎಂದು ತಿಳಿಸಿದೆ.
ಎಸ್ ಬಿ ಐ ನ ಬಿ ಎಸ್ ಬಿ ಡಿ ಗ್ರಾಹಕರಿಗೆ ನಾಲ್ಕು ಬಾರಿ ಉಚಿತ ಕ್ಯಾಶ್ ವಿತ್ ಡ್ರಾ ಸೌಲಭ್ಯವಿದೆ. ಉಚಿತ ಮಿತಿ ಮುಗಿದ ನಂತರ, ಬ್ಯಾಂಕ್ ಗ್ರಾಹಕರಿಗೆ ಶುಲ್ಕ ವಿಧಿಸುತ್ತದೆ. ಆದರೆ ಜುಲೈ 1 ರ ನಂತರ ಬ್ಯಾಂಕ್ ಎಟಿಎಂಗಳಿಂದ ಹಣವನ್ನು ಹಿಂಪಡೆಯಲು 15 ರೂ. ಶುಲ್ಕದೊಂದಿಗೆ ಜಿಎಸ್ ಟಿ ಶುಲ್ಕವನ್ನು ಎಸ್ ಬಿ ಐ ವಿಧಿಸುತ್ತದೆ.
ದೇಶದಾದ್ಯಂತ ಇರುವ ಕೋವಿಡ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಗದು ಹಿಂಪಡೆಯುವಿಕೆಯ ಮಿತಿಯನ್ನು ಹೆಚ್ಚಿಸಿದ್ದು, ತನ್ನ ಖಾತೆದಾರರಿಗೆ ಪರಿಹಾರ ನೀಡಲಿದೆ. ಗ್ರಾಹಕರು ಮತ್ತೊಂದು ಶಾಖೆಗೆ ಹೋಗುವುದರ ಮೂಲಕ ತಮ್ಮ ಉಳಿತಾಯ ಖಾತೆಯಿಂದ 25 ಸಾವಿರ ರೂ.ಗಳನ್ನು ವಾಪಸಾತಿ ಫಾರ್ಮ್ ಮೂಲಕ ಹಿಂಪಡೆಯಲು ಸಾಧ್ಯವಾಗುತ್ತದೆ ಮತ್ತು ಇನ್ನೊಂದು ಶಾಖೆಗೆ ಹೋಗುವ ಚೆಕ್ ಮೂಲಕ 1 ಲಕ್ಷ ರೂ.ಗಳನ್ನು ಸಹ ಹಿಂಪಡೆಯಬಹುದು.
ಇನ್ನು, ಗ್ರಾಹಕರು 10 ಚೆಕ್ ಗಳನ್ನು ಹೊಂದಿರುವ ಚೆಕ್ ಪುಸ್ತಕದಲ್ಲಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈಗ ಬಿ ಎಸ್ ಬಿ ಡಿ ಬ್ಯಾಂಕ್ ಖಾತೆದಾರರು 10 ಚೆಕ್ ಲೀವ್ಸ್ ಪಡೆಯಲು 40 ರೂ., ಮತ್ತು 25 ಚೆಕ್ ಲೀವ್ಸ್ ಪಡೆಯಲು 75 ರೂ. ಪಾವತಿಸಬೇಕಾಗುತ್ತದೆ. ಇದರೊಂದಿಗೆ ಜಿ ಎಸ್ ಟಿ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ತುರ್ತು ಚೆಕ್ ಬುಕ್ ನ 10 ಲೀವ್ಸ್ ಗಳಿಗಾಗಿ 50 ರೂ. ಜೊತೆಗೆ ಜಿ ಎಸ್ ಟಿ ಪಾವತಿಸಬೇಕಾಗುತ್ತದೆ. ಎಂದು ವೆಬ್ ಸೈಟ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ : ಆನ್ಲೈನ್ ತರಗತಿಯ ಖಿನ್ನತೆಯಿಂದ ನೇಣಿಗೆ ಶರಣಾದ ಮಗಳು: ವಿಷಯ ತಿಳಿದ ತಂದೆ ಹೃದಯಾಘಾತದಿಂದ ಸಾವು