Advertisement

UP: 180 ದಿನವಾದರೂ ಪತ್ತೆಯಿಲ್ಲ ಅತೀಖ್‌ ಪತ್ನಿ

09:48 PM Sep 02, 2023 | Team Udayavani |

ಲಕ್ನೋ: ತಲೆಮರೆಸಿಕೊಂಡಿರುವ ಮೃತ ಮಾಫಿಯಾ ಡಾನ್‌ ಅತೀಖ್‌ ಅಹ್ಮದ್‌ ಪತ್ನಿ ಶೈಸ್ತಾ ಪರ್ವೀನ್‌ಗಾಗಿ ಉತ್ತರ ಪ್ರದೇಶ ಪೊಲೀಸರು ಶೋಧ ಮುಂದುವರಿಸಿದ್ದಾರೆ. 180 ದಿನಗಳು ಕಳೆದರೂ ಪರ್ವೀನ್‌ ಅಡಗಿರುವ ಸ್ಥಳದ ಕುರಿತು ಪೊಲೀಸರಿಗೆ ಸುಳಿವು ದೊರೆತಿಲ್ಲ. ಹೀಗಾಗಿ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು, ಆಟೋ ಚಾಲಕರು, ಹಾಲು ಮಾರಾಟಗಾರರು ಸೇರಿದಂತೆ ವಿವಿಧ ವೇಷಗಳಲ್ಲಿ ಅಂಡರ್‌ಕವರ್‌ ಏಜೆಂಟ್‌ಗಳಾಗಿ ಪರ್ವೀನ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಉತ್ತರ ಪ್ರದೇಶ ಪೊಲೀಸರು ಪರ್ವೀನ್‌ ತಲೆಗೆ 50,000 ರೂ. ಬಹುಮಾನ ಘೋಷಿಸಿದ್ದಾರೆ. ಆಕೆಯ ಬಂಧನಕ್ಕಾಗಿ ಎಲೆಕ್ಟ್ರಾನಿಕ್‌ ಕಣ್ಗಾವಲಿನ ಮೊರೆ ಹೋಗಿದ್ದಾರೆ.ಪರ್ವೀನ್‌ ಅಲ್ಲದೇ ಜೈನಾಬ್‌ ಫಾತಿಮಾ ಮತ್ತು ಆಯಿಷಾ ನೂರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಜೈನಾಬ್‌ ಫಾತಿಮಾ ಅತೀಖ್‌ ಸಹೋದರ ಖಾಲಿದ್‌ ಅಜೀಂ ಅಲಿಯಾಸ್‌ ಅಶ್ರಫ್ ಪತ್ನಿಯಾಗಿದ್ದಾರೆ. ಆಯಿಷಾ ನೂರಿಯು ಅತೀಖ್‌ ಮತ್ತು ಅಶ್ರಫ್ ಸಹೋದರಿಯಾಗಿದ್ದಾಳೆ. ಈ ಆರೋಪಿಗಳಿಗಾಗಿ ಪ್ರಯಾಗ್‌ರಾಜ್‌ ಗ್ರಾಮಾಂತರ ಪ್ರದೇಶ ಹಾಗೂ ಕೌಶಂಬಿಯಲ್ಲಿ ಅತೀಖ್‌ ಸಂಬಂಧಿಕರು ಹಾಗೂ ಆಪ್ತರಿರುವ ಮನೆಗಳ ಬಳಿಯಲ್ಲಿ ಮಾರುವೇಷದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next