Advertisement

3,000 ಮಂದಿಗೆ ಆಟಿ ಕಷಾಯ ವಿತರಣೆ

12:20 PM Aug 12, 2018 | Team Udayavani |

ಮೂಡಬಿದಿರೆ: ವಿದ್ಯಾಗಿರಿಯ ಆಳ್ವಾಸ್‌ ಆಯುರ್ವೇದ ಕಾಲೇಜಿನ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಪರಂಪರೆಯಂತೆ ತಯಾರಿಸಿದ ಆಟಿಯ ಕಷಾಯವನ್ನು ಉಚಿತವಾಗಿ ವಿತರಿಸಲಾಯಿತು. ವಿಭಾಗ ಮುಖ್ಯಸ್ಥ, ಪ್ರಾಧ್ಯಾಪಕ ಡಾ| ಸುಬ್ರಹ್ಮಣ್ಯ ಪದ್ಯಾಣ ಸ್ವಾಗತಿಸಿ, ‘ಆಟಿ ತಿಂಗಳ (ಕರ್ಕಾಟಕ ಮಾಸ) ಅಮಾವಾಸ್ಯೆಯಂದು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಹಾಲೆಮರದ (ಸಪ್ತಪರ್ಣ) ಕೆತ್ತೆಯನ್ನು ಸಂಗ್ರಹಿಸಿ, ಅದಕ್ಕೆ ಬೆಳ್ಳುಳ್ಳಿ, ಜೀರಿಗೆ, ಕಾಳ ಜೀರಿಗೆ, ಕಾಳು ಮೆಣಸು, ಓಮ ಇತ್ಯಾದಿಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿ, ಆರೋಗ್ಯವಾಗಿರಲು ಸಹಕಾರಿ ಎಂದು ಹೇಳಿದರು.

Advertisement

ಕಾಲೇಜಿನ ಸಹಾಯಕ ಆಡಳಿತಾಧಿಕಾರಿ ಜೊಬಿನ್‌, ಪ್ರಾಧ್ಯಾಪಕರಾದ ಡಾ| ರವಿರಾವ್‌, ಡಾ| ಅನೂಪ್‌, ಡಾ|ಬಾಲಸುಬ್ರಹ್ಮಣ್ಯ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಾರ್ವಜನಿಕರು ಸೇರಿ ಸುಮಾರು 3,000 ಕ್ಕಿಂತಲೂ ಅಧಿಕ ಮಂದಿಗೆ ಆಟಿ ಕಷಾಯ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next