Advertisement
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಆತ್ಮನಿರ್ಭರ ಭಾರತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಪ್ರಸ್ತುತ ರಾಜಕಾರಣಿಗಳು ಮತದಾರರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುವ ಸಾಧ್ಯತೆ ಇದೆ.ಇದರಿಂದಪಕ್ಷದ ತತ್ವ ಸಿದ್ಧಾಂತದಂತೆ ಕಾರ್ಯನಿರ್ವಹಿಸಿ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಕಾರ್ಯಕರ್ತರನ್ನು ಗುರುತಿಸಿ ಪಂಚಾಯ್ತಿ ಆಯ್ಕೆ ಮಾಡಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ನಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ, ಜಿಲ್ಲೆ ಮತ್ತು ತಾಲೂಕಿನಲ್ಲಿ ಪಕ್ಷದ ಮತ್ತಷ್ಟು ಸದೃಢವಾಗುವಂತೆ ನೋಡಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
Related Articles
Advertisement
ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್‌ಕುಮಾರ್, ಮೈಸೂರು ವಿಭಾಗದ ಕಾರ್ಯದರ್ಶಿ ಕುಮಾರ ಸ್ವಾಮಿ, ಮುಖಂಡ ಡಾ.ಸಿದ್ದರಾಮಯ್ಯ, ತಾಲೂಕುಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಬ್ಬಣಿ ಬಸವರಾಜು, ಸುರೇಶ್, ಪ್ರಧಾನಕಾರ್ಯದರ್ಶಿ ಕೆ.ಸಿ.ನಾಗೇಗೌಡ,ಅಶೋಕ್‌ಕುಮಾರ್, ಯುವ ಘಟಕ ಅಧ್ಯಕ್ಷ ಕೆ.ಪಿ.ಮೋಹನ್‌ಕುಮಾರ್ ಹಾಜರಿದ್ದರು.
ಗ್ರಾಪಂ ಚುನಾವಣೆಗಾಗಿ ಕಾರ್ಯಕ್ರಮ ರೂಪಿಸಿ :
ಶ್ರೀರಂಗಪಟ್ಟಣ: ಜಿಲ್ಲೆಯ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿ, ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು. ಗ್ರಾಪಂ ಚುನಾವಣೆಗಾಗಿ ಕಾರ್ಯಕ್ರಮ ರೂಪಿಸಬೇಕು ಎಂದು ಮಾಜಿ ಸಚಿವಹಾಗೂ ಜಿಲ್ಲಾ ಬಿಜೆಪಿ ಉಸ್ತುವಾರಿ ಎ. ಮಂಜು ಹೇಳಿದರು.
ಪಟ್ಟಣದ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯ ಬಿಜೆಪಿಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿಹಳ್ಳಿಗಳಲ್ಲೂ ಪಕ್ಷ ಸಂಘಟನೆಗೆ ಕಾರ್ಯಕರ್ತರು ಮುಂದಾಗಬೇಕು. ಸರ್ಕಾರದ ಅಭಿವೃದ್ಧಿಕಾರ್ಯಕ್ರಮಗಳನ್ನು ಗ್ರಾಮಗಳಲ್ಲಿಅಲ್ಲಿನ ಮುಖಂಡರು, ಸ್ಥಳೀಯ ಜನರಿಗೆ ಮುಟ್ಟಿಸಬೇಕು. ಪ್ರತಿ ಬೂತ್ ಮಟ್ಟದಲ್ಲೂ ಪಕ್ಷ ಸಂಘಟನೆಯಾಗಿ, ಮುಂದಿನ ಗ್ರಾಮ ಪಂಚಾಯ್ತಿ ಚುನಾವಣೆ ಎದುರಿಸಲು ಪೂರ್ವಯೋಜಿತಕಾರ್ಯಕ್ರಮಗಳನ್ನು ರೂಪಿಸಬೇಕು. ಸಂಘಟನೆ ವಿಚಾರದಲ್ಲಿ ಪ್ರತಿ ಗ್ರಾಮಗಳ ಕಾರ್ಯಕ್ರಮಕ್ಕೆ ನಾವು ಬರುತ್ತೇವೆ. ಕಾರ್ಯಕರ್ತರು ಬಲವರ್ಧನೆಗೆ ಹಿಂಜರಿಯಬಾರದು ಎಂದು ತಿಳಿಸಿದರು.
ಕಾರ್ಯಕ್ರಮ ರೂಪಿಸಿ:ಮೈಸೂರು ವಿಭಾಗೀಯ ಮಟ್ಟದ ಸಂಘಟನಾಕಾರ್ಯದರ್ಶಿ ಕೆ.ಟಿ.ಕುಮಾರಸ್ವಾಮಿಮಾತನಾಡಿ, ಪಕ್ಷದಲ್ಲಿಕಾರ್ಯಕರ್ತರುಹಾಗೂ ಮುಖಂಡರ ನಡುವೆ ಹೊಂದಾಣಿಕೆ ಮಾಡಿಕೊಂಡು ಪದಾಧಿಕಾರಿಗಳು ಕಾರ್ಯಕ್ರಮ ರೂಪಿಸಬೇಕು. ಆಗ ಎಲ್ಲರಿಗೂ ಪರಸ್ಪರಸಂಪರ್ಕ ಬೆಳೆಯುತ್ತದೆ. ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಿದಂತಾಗುತ್ತದೆ ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಡಾ.ಸಿದ್ದರಾಮಯ್ಯ, ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್‌ನಂಜುಂಡೇಗೌಡ, ಮಂಡ್ಯ ಜಿಲ್ಲಾ ಆಧ್ಯಕ್ಷ ವಿಜಯಕುಮಾರ್, ಜಿಲ್ಲಾ ಉಪಾಧ್ಯಕ್ಷಟಿ.ಶ್ರೀಧರ್,ಜಿಲ್ಲಾಮಹಿಳಾ ಪ್ರಧಾನ ಕಾರ್ಯದರ್ಶಿ ವಿದ್ಯಾ ಉಮೇಶ್, ತಾಲೂಕು ಕಾರ್ಯದರ್ಶಿ ಇಂದ್ರಕುಮಾರ್ ಹಾಜರಿದ್ದರು.