Advertisement

ಆ್ಯತ್ಲೆಟಿಕ್ಸ್‌ : ಮಂಗಳೂರು ವಿ.ವಿ. ಮತ್ತೆ ಚಾಂಪಿಯನ್‌

12:18 AM May 03, 2022 | Team Udayavani |

ಮೂಡುಬಿದಿರೆ: ಬೆಂಗಳೂರಿನ ಜೈನ್‌ ಯೂನಿವರ್ಸಿಟಿಯ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ನಲ್ಲಿ ಮಂಗಳೂರು ವಿ.ವಿ. ಸತತ ಎರಡನೇ ಬಾರಿಗೆ ಆ್ಯತ್ಲೆಟಿಕ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಮಂಗಳೂರು ವಿ.ವಿ. ಒಟ್ಟಾರೆ 7 ಚಿನ್ನ, 6 ಬೆಳ್ಳಿ ಮತ್ತು 7 ಕಂಚಿನ ಪದಕಗಳೊಂದಿಗೆ 109 ಅಂಕ ಗಳಿಸಿ ಆ್ಯತ್ಲೆಟಿಕ್‌ ವಿಭಾಗದ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ. ಪದಕ ವಿಜೇತ ವಿದ್ಯಾರ್ಥಿಗಳೆಲ್ಲರೂ ಆಳ್ವಾಸ್‌ ಸಂಸ್ಥೆಯ ಕ್ರೀಡಾ ಪಟುಗಳಾಗಿರುವುದು ನಮ್ಮ ಹೆಮ್ಮೆ ಎಂದವರು ವಿವರಿಸಿದರು.

ಆಳ್ವಾಸ್‌ನ ವಿಘ್ನೇಶ್‌ ಹ್ಯಾಟ್ರಿಕ್‌
ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ್ದ ಆಳ್ವಾಸ್‌ನ ವಿಘ್ನೇಶ್ ಪುರುಷರ ವಿಭಾಗದ 100 ಮೀ., 200 ಮೀ. ಹಾಗೂ 4×100 ಮೀ. ರಿಲೇಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಹ್ಯಾಟ್ರಿಕ್‌ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ವಿಘ್ನೇಶ್ 2 ಕೂಟ ದಾಖಲೆ ಸಹಿತ ಮೂರು ಚಿನ್ನ ಗೆದ್ದ ವಿಘ್ನೇಶ್‌ ಕೂಟದ ತ್ತಮ ಕ್ರೀಡಾಪಟು ಪ್ರಶಸ್ತಿಗೆ ಪಾತ್ರರಾದರು.

ದೇವಯ್ಯ (800 ಮೀ.-ಬೆಳ್ಳಿ, 4×400ಮೀ. ರಿಲೇ -ಚಿನ್ನ), ನಿಹಾಲ್‌ (400 ಮೀ. -ಬೆಳ್ಳಿ, 4×400ಮೀ. ರಿಲೇ – ಚಿನ್ನ), ಬಸುಕೇಶ್‌ ಪುನಿಯಾ (ಡಿಸ್ಕಸ್‌- ಬೆಳ್ಳಿ), ಅನಿಲ್‌ ಕುಮಾರ್‌ (ಉದ್ದಜಿಗಿತ -ಬೆಳ್ಳಿ), ಪರಂಜೀತ್‌ (20 ಕಿ.ಮೀ. ನಡಿಗೆ -ಕಂಚು), ಮಹಾಂತೇಶ್‌ (400ಮೀ.- ಕಂಚು, 4×400ಮೀ. ರಿಲೇ -ಚಿನ್ನ) ತೀರ್ಥೇಶ್‌ (200 ಮೀ.- ಕಂಚು, 4×100 ರಿಲೇ – ಚಿನ್ನ), ಸಿಜಿನ್‌ (4×100 ಮೀ. ರಿಲೇ ಚಿನ್ನ) ಪದಕ ಪಡೆದಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಕೆ.ಎಂ. ಲಕ್ಷ್ಮೀ (10,000 ಮೀ.-ಚಿನ್ನ), ಕೆ. ಎಂ. ರಾಧಾ (1,500 ಮೀ.- ಚಿನ್ನ), ಕರಿಷ್ಮಾ ಸನಿಲ್‌ (ಜಾವೆಲಿನ್‌-ಬೆಳ್ಳಿ), ಲಿಖೀತಾ (400ಮೀ-ಕಂಚು), ರೇಖಾ (ಶಾಟ್‌ಪುಟ್‌ – ಕಂಚು), ಶ್ರುತಿ ಲಕ್ಷ್ಮೀ (ಉದ್ದಜಿಗಿತ -ಕಂಚು), ನವಮಿ (4×100 ಮೀ. ರಿಲೇ -ಬೆಳ್ಳಿ), ದೇಚಮ್ಮ (4×100ಮೀ. ರಿಲೇ -ಬೆಳ್ಳಿ) ಹಾಗೂ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಆ್ಯನ್‌ ಮರಿಯಾ ಚಿನ್ನದ ಪದಕ ಪಡೆದಿದ್ದಾರೆ.

Advertisement

ದೇಶಿಯ ಕ್ರೀಡೆ ಮಲ್ಲಕಂಬದಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ ಆಳ್ವಾಸ್‌ ತಂಡ 5ನೇ ಸ್ಥಾನ ಪಡೆದಿದೆ.

6 ಕೂಟ ದಾಖಲೆಗಳು
ಕೂಟದ ವೇಟ್‌ಲಿಫ್ಟಿಂಗ್‌ನಲ್ಲಿ ಆಳ್ವಾಸ್‌ನ ಆ್ಯನ್‌ ಮರಿಯಾ ರಾಷ್ಟ್ರೀಯ ದಾಖಲೆ, 100ಮೀ. ಹಾಗೂ 200 ಮೀ.ನಲ್ಲಿ ವಿN°àಶ್‌ ನೂತನ ಕೂಟ ದಾಖಲೆ, ಲಕ್ಷ್ಮೀ 10,000 ಮೀ. ಓಟ, ಹಾಗೂ 4×400 ಮೀ. ಮತ್ತು 4×100 ಮೀ ಪುರುಷರ ರಿಲೇಯಲ್ಲಿ ನೂತನ ಕೂಟ ದಾಖಲೆ ನಿರ್ಮಾಣವಾಗಿದೆ.

ಕ್ರೀಡಾದತ್ತು ಸ್ವೀಕಾರದ ಕ್ರೀಡಾಳುಗಳು
ಆಳ್ವಾಸ್‌ ವಿದ್ಯಾರ್ಥಿಗಳ ಸತತ ಪರಿಶ್ರಮದಿಂದ ಮಂಗಳೂರು ವಿ.ವಿ. 2ನೇ ಬಾರಿ ಖೇಲೋ ಕೂಟದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಈ ಹಿಂದೆ ಪದಕ ವಿಜೇತರೆಲ್ಲರೂ ಆಳ್ವಾಸ್‌ ಸಂಸ್ಥೆಯ ಕ್ರೀಡಾದತ್ತು ಸ್ವೀಕಾರದಡಿ ಉಚಿತ ಶಿಕ್ಷಣ ಪಡೆಯುತ್ತಿದ್ದರು ಎಂದು ಆಳ್ವರು ತಿಳಿಸಿದರು.

ಇಂದು ಸಮಾರೋಪ
ಕೂಟದ ಸಮಾರೋಪ ಸಮಾರಂಭ ಮಂಗಳವಾರ ಮಧ್ಯಾಹ್ನ 5.30ರಿಂದ ಆರಂಭವಾಗಲಿದೆ. ಕೇಂದ್ರ ಗೃಹಸಚಿವ ಅಮಿತ್‌ ಶಾ, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಭಾಗವಹಿಸಲಿದ್ದಾರೆ.

200ಮೀ.: ದ್ಯುತಿಚಂದ್‌ಗೆ ಆಘಾತ
200 ಮೀ. ಓಟದಲ್ಲಿ ಒಡಿಶಾದ ಖ್ಯಾತ ಓಟಗಾರ್ತಿ ದ್ಯುತಿಚಂದ್‌ಗೆ ಜೈನ್‌ ವಿ.ವಿ.ಯ ಪ್ರಿಯಾ ಮೋಹನ್‌ ದೊಡ್ಡ ಎದುರಾಳಿಯಾಗಿದ್ದರಲ್ಲದೇ ಅದನ್ನು ಸಾಬೀತು ಮಾಡಿದರು. ಆರಂಭದ 100 ಮೀ.ವರೆಗೆ ದ್ಯುತಿ ಮುಂದಿದ್ದರು. ಅನಂತರ ದಿಢೀರನೆ ವೇಗ ವೃದ್ಧಿಸಿಕೊಂಡ ಪ್ರಿಯಾ 23.90 ಸೆಕೆಂಡುಗಳಲ್ಲಿ ಗುರಿಮುಟ್ಟಿ ಚಿನ್ನ ಗೆದ್ದರು. ಕಳಿಂಗ ವಿ.ವಿ.ಯನ್ನು ಪ್ರತಿನಿಧಿಸುತ್ತಿರುವ ದ್ಯುತಿ 24.02 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿಗೆ ತಣ್ಣಗಾದರು. ರಾಂಚಿಯ ಫ್ಲಾರೆನ್ಸ್‌ ಬಾರ್ಲಾ ಕಂಚು ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next