Advertisement
5000 ಮೀ. ಓಟ5000 ಮೀ. ಓಟದಲ್ಲಿ ಕುರುಕ್ಷೇತ್ರ ಯುನಿವರ್ಸಿಟಿಯ ಪ್ರಿನ್ಸ್ (14 ನಿ. 5.48 ಸೆ.) ಕೂಟ ದಾಖಲೆ ನಿರ್ಮಿಸಿದರು. ಹಿಂದಿನ ಕೂಟ ದಾಖಲೆ ಮಂಗಳೂರು ವಿವಿಯ ನರೇಂದ್ರ ಪ್ರತಾಪ್ ಸಿಂಗ್ (14 ನಿ. 17.77 ಸೆ.) ಅವರದ್ದಾಗಿತ್ತು. ಲವ್ಲಿ ಪ್ರೊಫೆಶನಲ್ ಯುನಿವರ್ಸಿಟಿಯ ಅಜಯ್ (14ನಿ. 5.87ಸೆ) ದ್ವಿತೀಯ, ಮಹರ್ಷಿ ದಯಾನಂದ ಯುನಿವರ್ಸಿಟಿಯ ಲೋಕೇಶ್ ಚೌಧಾರ್ (14 ನಿ. 5.88 ಸೆ.) ತೃತೀಯ ಸ್ಥಾನಿಯಾದರು.
ಪೋಲ್‌ವಾಲ್ಟ್ನಲ್ಲಿ ಕೊಟ್ಟಾಯಂ ಮಹಾತ್ಮಾ ಗಾಂಧಿ ಯುನಿವರ್ಸಿಟಿಯ ಸಿದ್ದಾರ್ಥ್ ಎ.ಕೆ. (4.92 ಮೀ. ) ಅವರಿಂದ ನೂತನ ಕೂಟ ದಾಖಲೆ ನಿರ್ಮಾಣಗೊಂಡಿತು. ಹಿಂದಿನ ಕೂಟ ದಾಖಲೆ (2018) ಯುನಿವರ್ಸಿಟಿ ಆಫ್ ಕ್ಯಾಲಿಕಟ್‌ನ ಜೆಸ್ಸನ್ ಕೆ.ಜಿ. ಅವರದಾಗಿತ್ತು.(4.91 ಮೀ.). ಕೊಟ್ಟಾಯಂ ಮಹಾತ್ಮಾ ಗಾಂಧಿ ಯುನಿವರ್ಸಿಟಿಯ ಗಾಡ್‌ವಿನ್ ದಾಮಿಯನ್ ದ್ವಿತೀಯ (4.85 ಮೀ.), ವಿಬಿಎಸ್‌ಪಿಯು, ಜಾನ್‌ಪುರ್‌ನ ಧೀರೇಂದ್ರ ಕುಮಾರ್ (4.85 ಮೀ.) ತೃತೀಯ ಸ್ಥಾನಿಯಾದರು. 110 ಮೀ. ಹರ್ಡಲ್ಸ್
110 ಮೀ. ಹರ್ಡಲ್ಸ್‌ನಲ್ಲಿ ಆಚಾರ್ಯ ನಾಗಾರ್ಜುನ ಯುನಿವರ್ಸಿಟಿಯ ಎಲ್. ಯಶವಂತ್ ಕುಮಾರ್ ಪ್ರಥಮ (14.32 ಸೆ.), ಯುನಿವರ್ಸಿಟಿ ಆಫ್ ಮದ್ರಾಸ್‌ನ ನಿಶಾಂತ್‌ರಾಜ ಜಿ. ದ್ವಿತೀಯ (14.41 ಸೆ.) ಹಾಗೂ ಯುನಿವರ್ಸಿಟಿ ಆಫ್ ಕೇರಳದ ಮುಹಮ್ಮದ್ ಲಝಾನ್ (14.49 ಸೆ.) ತೃತೀಯ ಸ್ಥಾನ ಗಳಿಸಿದರು.
Related Articles
Advertisement
ಡೆಕಥ್ಲಾನ್ ಫಲಿತಾಂಶ: 1. ಯಮನ್‌ದೀಪ್ ಶರ್ಮ, ಲವ್ಲಿ ಪ್ರೊಫೆಶನಲ್ ವಿವಿ (6779 ಅಂಕ), 2. ಸುನಿಲ್ ಕುಮಾರ್, ಲವ್ಲಿ ಪ್ರೊಫೆಶನಲ್ ವಿವಿ, (6460 ಅಂಕ), 3. ಸ್ಟಾಲಿನ್ ಜೋಸ್, ತಮಿಳುನಾಡು ಫಿಸಿಕಲ್ ಎಜ್ಯುಕೇಶನ್ ಆ್ಯಂಡ್ ನ್ಪೋರ್ಟ್ಸ್ ಯುನಿವರ್ಸಿಟಿ (6050 ಅಂಕ).
ಇಂದು ಕೂಟ ಮುಕ್ತಾಯಪಂದ್ಯಾವಳಿ ಶುಕ್ರವಾರ ಸಮಾಪನಗೊಳ್ಳಲಿದೆ. ಹಾಫ್ ಮ್ಯಾರಥಾನ್, 3000 ಮೀ. ಸ್ಟೀಪಲ್ ಚೇಸ್, ಹ್ಯಾಮರ್ ತ್ರೋ, 800 ಮೀ. ಓಟ, ಉದ್ದ ಜಿಗಿತ, 200 ಮೀ. ಓಟ, 400 ಮೀ. ಹರ್ಡಲ್ಸ್, ಜಾವೆಲಿನ್ ತ್ರೊ, 4×100 ಮೀ. ರಿಲೇ ಮತ್ತು 4×400 ಮೀ. ರಿಲೇ ಸ್ಪರ್ಧೆಗಳ ಅಂತಿಮ ಹಣಾಹಣಿ ನಡೆಯಲಿದೆ. ಸಮಾರೋಪ ಸಮಾರಂಭ
ಶುಕ್ರವಾರ ಮಂಗಳೂರು ವಿ.ವಿ. ಉಪಕುಲಪತಿ ಡಾ| ಪಿ. ಎಸ್. ಯಡಪಡಿತ್ತಾಯ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಶಾಸಕ ಉಮಾನಾಥ ಕೋಟ್ಯಾನ್ ಪ್ರಶಸ್ತಿ ವಿತರಿಸಲಿದ್ದಾರೆ. ಅದಾನಿ ಯುಪಿಸಿಎಲ್ ಗ್ರೂಪ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿಶೋರ್ ಆಳ್ವ, ಮಾಜಿ ಕ್ರೀಡಾ ಸಚಿವ ಕೆ. ಅಭಯಚಂದ್ರ, ಮಂ.ವಿ.ವಿ. ಹಣಕಾಸು ಆಧಿಕಾರಿ ಡಾ| ಬಿ. ನಾರಾಯಣ್, ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ.ಕೆ., ಮೂಡುಬಿದಿರೆ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಆತಿಥೇಯ ಆಳ್ವಾಸ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಸಂಘಟನಾ ಕಾರ್ಯದರ್ಶಿ, ಮಂ.ವಿ.ವಿ. ದೈ.ಶಿ.ವಿಭಾಗ ನಿರ್ದೇಶಕ ಡಾ| ಜೆರಾಲ್ಡ್ ಎಸ್. ಡಿಸೋಜ ಉಪಸ್ಥಿತರಿರುವರು.