Advertisement
ಸಾರ್ವತ್ರಿಕ ಚುನಾವಣೆಯ ಅನಂತರ ಮೊದಲ ಬಾರಿಗೆ “ಮನ್ ಕಿ ಬಾತ್’ ರೇಡಿಯೋ ಭಾಷಣದಲ್ಲಿ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. “ಟೋಕಿಯೊದಲ್ಲಿ ನಮ್ಮ ಕ್ರೀಡಾಪಟುಗಳ ಪ್ರದರ್ಶನವು ಪ್ರತಿಯೊಬ್ಬ ಭಾರತೀಯನ ಹೃದಯ ವನ್ನು ಗೆದ್ದಿದೆ. ಟೋಕಿಯೊ ಒಲಿಂಪಿಕ್ಸ್ ಬಳಿಕ ನಮ್ಮ ಕ್ರೀಡಾಪಟುಗಳು ಉತ್ಕೃಷ್ಟ ನಿರ್ವಹಣೆ ನೀಡುವ ನಿಟ್ಟಿನಲ್ಲಿ ಕಠಿನ ತರಬೇತಿಯೊಂದಿಗೆ ತಯಾರಿ ನಡೆಸುತ್ತಿದ್ದಾರೆ. ಗರಿಷ್ಠ ಪದಕ ಗೆಲ್ಲುವುದೇ ಅವರ ಗುರಿಯಾಗಿದೆ ಎಂದವರು ಹೇಳಿದ್ದಾರೆ.
ಪ್ಯಾರಿಸ್‌ನ ಶೂಟಿಂಗ್ ಸ್ಪರ್ಧೆಯಲ್ಲಿ ದಾಖಲೆ 21 ಮಂದಿ ಸ್ಪರ್ಧಿಸು ತ್ತಿದ್ದು ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಪ್ಯಾರಿಸ್‌ನಲ್ಲಿ ಕೆಲವು ಸ್ಪರ್ಧೆಗಳಲ್ಲಿ ಭಾರತ ಮೊದಲ ಬಾರಿ ಕಾಣಿಸಿಕೊಳ್ಳುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಮೋದಿ ತಿಳಿಸಿದರು. ಆ್ಯತ್ಲೀಟ್‌ಗಳನ್ನು ಹುರಿದುಂಬಿಸಲು ಮತ್ತು ಪ್ರೋತ್ಸಾ ಹಿಸಲು ಚಿಯರ್‌ಫಾರ್‌ಭಾರತ್ (Cheer4Bharat)ಹ್ಯಾಸ್ ಟಾಗ್ ಬಳಸುವಂತೆ ಅವರು ಕ್ರೀಡಾಭಿ ಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.