Advertisement

ರಾಷ್ಟ್ರೀಯ ವನಿತಾ ಕ್ರೀಡಾಪಟು ಅಂಪಾರಿನ ಪೃಥ್ವಿ ಪೂಜಾರಿ ಆತ್ಮಹತ್ಯೆ: ಆರೋಪಿ ಖುಲಾಸೆ

12:34 AM Dec 03, 2019 | mahesh |

ಕುಂದಾಪುರ: ಸುಮಾರು 8 ವರ್ಷಗಳ ಹಿಂದೆ ಸಂಚಲನ ಮೂಡಿಸಿದ್ದ ರಾಷ್ಟ್ರೀಯ ವನಿತಾ ಕ್ರೀಡಾಪಟು ಪೃಥ್ವಿ ಪೂಜಾರಿ ಅಂಪಾರು (17) ಅವರ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಬ್ರಹ್ಮಾವರದ ಮಿಸ್ಬಾನ್‌ ಹುಸೇನ್‌ (30) ನನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಜೋಷಿ ಅವರು ಸೋಮವಾರ ದೋಷಮುಕ್ತಿಗೊಳಿಸಿದ್ದಾರೆ.

Advertisement

ಅಂಪಾರಿನ ಶೇಖರ್‌ ಪೂಜಾರಿ ಯವರ ಪುತ್ರಿ, ಪೋಲ್‌ವಾಲ್ಟ್ನಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದ ಬ್ರಹ್ಮಾವರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಪೃಥ್ವಿ ಅವರು 2011ರ ಸೆ. 27ರಂದು ಬ್ರಹ್ಮಾವರ ಸಮೀಪದ ವಾರಂಬಳ್ಳಿಯ ಹಾಸ್ಟೆಲೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಆಕೆ ಬರೆದಿದ್ದ ಪತ್ರದಲ್ಲಿ “ಬ್ರಹ್ಮಾವರದ ಆಕಾಶವಾಣಿ ನಿವಾಸಿ ಮಿಸ್ಬಾನ್‌ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ’ ಎಂದಿತ್ತು. ಇದರ ಆಧಾರದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಮಿಸ್ಬಾಲ್‌ ವಿರುದ್ಧ ಪ್ರಕರಣ ದಾಖಲಾಗಿ ಆತನನ್ನು ಬಂಧಿಸಲಾಗಿತ್ತು. ಆತ್ಮಹತ್ಯೆ ನಡೆದ ಸಂದರ್ಭದಲ್ಲಿ ಆರೋಪಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಬಿಲ್ಲವ ಸಂಘಟನೆ, ವಿವಿಧ ರಾಜಕೀಯ ಪಕ್ಷಗಳು ಹಾಗೂ ಇತರ ಸಂಘಟನೆಗಳಿಂದ ಭಾರೀ ಪ್ರತಿಭಟನೆಯೂ ನಡೆದಿತ್ತು.

ಆಗ ಕುಂದಾಪುರ ಎಎಸ್‌ಪಿಯಾಗಿದ್ದ ಐಪಿಎಸ್‌ ಅಧಿಕಾರಿ ಡಾ| ಎಚ್‌. ರಾಮ್‌ ನಿವಾಸ್‌ ಸೆಪಟ್‌ ಅವರು ಪ್ರಕರಣ ತನಿಖಾಧಿಕಾರಿಯಾಗಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವು 24 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿತ್ತು. ಎಲ್ಲ ಸಾಕ್ಷಿದಾರರ ವಿಚಾರಣೆ, ಪರ – ವಿರೋಧದ ವಾದ ಸೆ.25ಕ್ಕೆ ಮುಗಿದಿತ್ತು. ಈಗ ಆರೋಪ ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಶನ್‌ ವಿಫ‌ಲವಾಗಿದೆ ಎಂದು ಅಭಿಪ್ರಾಯಪಟ್ಟ ಕೋರ್ಟ್‌ ಆರೋಪಿಯನ್ನು ಖುಲಾಸೆಗೊಳಿಸಿದೆ. ಆರೋಪಿ ಪರ ರವಿಕಿರಣ್‌ ಮುರ್ಡೇಶ್ವರ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next