Advertisement
ಜಿಲ್ಲಾ ಕೇಂದ್ರದಲ್ಲಿ ಆಗಬೇಕಾದ ಪಶು ವೈದ್ಯಕೀಯ ಮಹಾವಿದ್ಯಾಲಯವನ್ನು ಗ್ರಾಮೀಣ ಪ್ರದೇಶಕ್ಕೆ ತರುವ ಮೂಲಕ ಹೊಸಇತಿಹಾಸವನ್ನು ಬರೆದ ಲಕ್ಷ ¾ಣ ಸವದಿಯವರು ಈ ಮಹಾವಿದ್ಯಾಲಯ ನಿರ್ಮಾಣವಾದರೆ ಈ ಭಾಗದ ರೈತರ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಕಲೆಯಬಹುದೆಂದು ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಮೇಲೆ ಒತ್ತಡ ತಂದು ಅಥಣಿ ತಾಲೂಕಿನಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣಕ್ಕೆ ಕಾರಣೀಭೂತರಾದರು.
ವೈದ್ಯಕೀಯ ಮಹಾವಿದ್ಯಾಲಯಕ್ಕೆ 9 ವರ್ಷಗಳ ನಂತರ ಉದ್ಘಾಟನೆಗೆ ಸಿದ್ಧವಾಗಿದೆ. ಇದರಿಂದ ತಾಲೂಕಿನ ರೈತರ ಮೋಗದಲ್ಲಿ ಮಂದಹಾಸ ಮೂಡಿದೆ. ಆಗಿನ ಬಿಜೆಪಿ ಪಕ್ಷದ ಶಾಸಕ ಹಾಗೂ ಸಚಿವರಾಗಿದ್ದ ಲಕ್ಷ್ಮಣ ಸವದಿಯವರ ಪ್ರಯತ್ನದಿಂದಾಗಿ ಕೋಕಟನೂರ ಗ್ರಾಮದ ಹೋರವಲಯದಲ್ಲಿ ಸುಮಾರು 250 ಎಕರೆ ಜಾಗದಲ್ಲಿ 80 ಕೋಟಿ ರೂಗೂ ಮೇಲ್ಪಟ್ಟು ಅನುದಾನದಲ್ಲಿ ಪಶು ವೈದ್ಯಕೀಯ
ಮಹಾವಿದ್ಯಾಲಯದ ನಿಮಾರ್ಣಗೊಂಡಿತು.
Related Articles
Advertisement
ಈ ಭಾಗದ ರೈತರ ಮಕ್ಕಳ ಭವಿಷ್ಯದ ಕನಾಸಾದ ಪಶುವೈದ್ಯಕೀಯ ಮಹಾ ವಿದ್ಯಾಲಯ, ಬಹಳ ದಿನಗಳಿಂದ ಉದ್ಘಾಟನೆಗೊಳ್ಳದೆ ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿತ್ತು. ಆದರೆ ಈಗ ಉದ್ಘಾಟನೆಗೆ ಸಿದ್ಧವಾಗಿದೆ.ಲಕ್ಷ್ಮಣ ಸವದಿ, ಶಾಸಕ ವಿಜಯಕುಮಾರ ಅಡಹಳ್ಳಿ