Advertisement

ಕೋವಿಡ್ ವಿರುದ್ಧ ಸಂಘಟಿತ ಹೋರಾಟ

03:16 PM May 04, 2020 | Team Udayavani |

ಅಥಣಿ: ಸರ್ಕಾರದ ಮಾರ್ಗಸೂಚಿಯನ್ನು ಚಾಚು ತಪ್ಪದೆ ಪರಿಪಾಲನೆ ಮಾಡುತ್ತಿದ್ದೇವೆ. ಕೊರೊನಾ ತಡೆಗೆ ಕಟ್ಟು ನಿಟ್ಟಿನ ಲಾಕ್‌ಡೌನ್‌ ಜಾರಿಗೆ ತರಲಾಗಿದೆ. ಗ್ರಾಮದಲ್ಲಿ ಸದಸ್ಯರನ್ನೊಳಗೊಂಡ ತಂಡಗಳನ್ನು ರಚಿಸಲಾಗಿದ್ದು 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಜನರಿಗೆ ವಿಶೇಷ ಮಾರ್ಗದರ್ಶನದ ಮೂಲಕ ಕಾಳಜಿ ಮಾಡಲಾಗುತ್ತಿದೆ ಎಂದು ಸಂಕೋನಟ್ಟಿ ಪಿಡಿಒ ಸುರೇಶ ಮುಂಜೆ ಹೇಳಿದರು.

Advertisement

ಅವರು ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಗ್ರಾಮ ಪಂಚಾಯತ್‌ ಸಿಬ್ಬಂದಿ, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ವೈರಸ್‌ ತಡೆಗಟ್ಟುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದು, ಸಾರ್ವಜನಿಕರು, ರೈತರು ಸಹಕಾರ ನೀಡುತ್ತಿದ್ದಾರೆ. ಪ್ರತಿ ದಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸಂಚರಿಸಿ ಅಗತ್ಯ ವಸ್ತುಗಳ ಅಂಗಡಿಗಳು, ನ್ಯಾಯಬೆಲೆ ಅಂಗಡಿ ಸೇರಿದಂತೆ ಎಲ್ಲೆಡೆ ಸುತ್ತಾಡಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

ಸಂಕೋನಟ್ಟಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ಟಿ.ಸಿ.ಎಲ್‌ ಪೌಡರ ಹಾಗೂ ಸ್ಯಾನಿಟೆ„ಸರ್‌ ದ್ರಾವಣ ಸಿಂಪರಣೆ ಮಾಡಲಾಗಿದೆ, ಚರಂಡಿ ಸ್ವತ್ಛತೆ ಮಾಡಲಾಗಿದೆ. ಬೇರೆ ಗ್ರಾಮಗಳಿಂದ ಹಾಗೂ ಹೊರ ರಾಜ್ಯಗಳಿಂದ ಜನ ಬರುವುದನ್ನು ನಿಷೇಧ ಮಾಡಲಾಗಿದ್ದು ಅದಕ್ಕಾಗಿಯೇ ಕಾವಲು ಪಡೆ ರಚಿಸಲಾಗಿದೆ ಎಂದರು.

ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಹೊರ ಬರುವಂತೆ ಡಂಗುರ ಮೂಲಕ ತಿಳಿ ಹೇಳಲಾಗಿದೆ. ಮಾಸ್ಕ್ ಇಲ್ಲದೆ ಹೊರ ಬಂದವರಿಗೆ ದಂಡ ವಿಧಿಸುವ ಕಾರ್ಯ ಮಾಡಲಾಗಿದೆ. ಗ್ರಾ.ಪಂ ಕಾರ್ಯಾಲಯಕ್ಕೆ ಬರುವವರಿಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಸುರೇಶ ಮುಂಜೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next