ಅಥರ್ ಎನರ್ಜಿಯ ಇಲೆಕ್ಟ್ರಿಕ್ ಸ್ಕೂಟರ್‌ಗಳು ಮಾರುಕಟ್ಟೆಗೆ ಬಿಡುಗಡೆಗೊಂಡಿವೆ. 340ಮತ್ತು 450 ಎಂಬ ಸರಳ ಆವೃತ್ತಿಯಲ್ಲಿ ಇದು ಲಭ್ಯವಿದೆ. ಬೆಂಗಳೂರಿನಲ್ಲಿ ಅಥರ್ 340ರ ಸ್ಕೂಟರ್ ಬೆಲೆ 1,09,750 ರೂ. ಮತ್ತು ಅಥರ್ 450ರ ಬೆಲೆ ರೂ. 1,24,750ರೂ. ಆಗಿರುತ್ತದೆ. ಇದರ ನಿರ್ವಹಣೆ ಸುಲಭವಾಗಿದ್ದು, ರಸ್ತೆ ಬದಿಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಹೊಂದಿದೆ.
ಪವರ್ ಪ್ಯಾಕ್
ಅಥರ್ 340ನ್ನು ಒಂದು ಬಾರಿ ಚಾರ್ಜ್ ಮಾಡಿದರೆ 60 ಕಿ.ಮೀ. ಸಂಚರಿಸಬಹುದು. ಅಥರ್ 340 70 ಕಿ.ಮೀ ಸಂಚರಿಸಬಹುದು. ನಗರ ವ್ಯಾಪ್ತಿಯಲ್ಲಿ 80 ಕಿ.ಮಿ. ವರೆಗೆ ಸಾಗಬಹುದು. ಹೀರೋ ಮೋಟೊಕಾರ್ಪ್ ಪ್ರಕಾರ, ಈ ವಾಹನವು ಕೆಟ್ಟ ರಸ್ತೆಗಳಲ್ಲಿ ಸಂಚಾರಕ್ಕೆ ಒಳ್ಳೆಯದು. ಮೃದುವಾದ ಪ್ರತಿಕ್ರಿಯೆಗಳನ್ನು ಒಳಗೊಂಡಿದ್ದು, ಒರಟಾದ ರಸ್ತೆಗಳಲ್ಲಿ ಸಂಚರಿಸಲು ಅನುಕೂಲವಾಗಲಿದೆ. ಎರಡೂ ಇಲೆ ಕ್ಟ್ರಿಕ್ ಸ್ಕೂಟರ್ ಗಳಿಗೂ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ಬ್ರೇಕ್ ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ.
ಅಥರ್ 340 ಮತ್ತು 450 ಸಹ ಸ್ಮಾರ್ಟ್ ಇಂಟರ್ ಆಕ್ಟಿವ್ ಡ್ಯಾಶ್‌ಅನ್ನು ಹೊಂದಿವೆ. 7 ಕೆಪಾಸಿಟಿವ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದ್ದು, ಸಂಚಾರದ ಸಂದರ್ಭದಲ್ಲಿ ಸೂಕ್ತವಾದ ಮಾಹಿತಿ, ಪ್ರಯಾಣದ ಸಂಚಾರ, ಉತ್ತಮ ಮಾರ್ಗಗಳು ಮತ್ತು ಟ್ರಾಫಿಕ್‌ನ ಬಗ್ಗೆ ಮಾಹಿತಿ ನೀಡುತ್ತದೆ. ಇಲೆಕ್ಟ್ರಿಕ್ ಸ್ಕೂಟರ್ ಅಥರ್‌ಗರ್ಡ್ ಅಪ್ಲಿಕೇಶನ್ ಆ್ಯಪ್ ಹೊಂದಿದ್ದು, ಸವಾರರಿಗೆ ಸ್ಕೂಟರನ್ನು ಚಾರ್ಜ್ ಮಾಡಲು ಹತ್ತಿರದಲ್ಲಿ ಎಲ್ಲಿ ಸ್ಟೇಷನ್ ಇದೆ ಎಂದು ತಿಳಿಯಲು ಸಹಾಯ ಮಾಡುತ್ತದೆ. ಇದರ ಜತೆಗೆ ಸವಾರಿ ಮಾದರಿಗಳನ್ನು ವೀಕ್ಷಿಸಿ ಮತ್ತು ವಾಹನ ಕಾರ್ಯಕ್ಷಮತೆಯನ್ನು ಸುಧಾರಿಸಲು ಅಥರ್ ಗರ್ಡ್ ಆ್ಯಪ್ ಮೂಲಕ ಸಲಹೆಗಳನ್ನು ಪಡೆಯಬಹುದು.