Advertisement

ಜನರ ನೆಮ್ಮದಿ ಕೆಡಿಸುವ ಅಟಲ್‌ಜಿ ಜನಸ್ನೇಹಿ ಕೇಂದ್ರ 

06:00 AM Jul 24, 2018 | |

ಉಡುಪಿ: ಇಲ್ಲಿಗೆ ಬೆಳಗ್ಗೆ ಬಂದರೆ ಸಂಜೆವರೆಗೂ ಸರತಿ ನಿಲ್ಲಬೇಕು. ರಜೆ ಹಾಕಿ ಬಂದರೆ ಮಾತ್ರ ಕೆಲಸ ಸಾಧ್ಯ ಇಲ್ಲವಾದಲ್ಲಿ ಜನರ ಪರಿಸ್ಥಿತಿ ಅಧೋಗತಿ ಇದು ಜಿಲ್ಲೆಯ ಅಟಲ್‌ ಜನಸ್ನೇಹಿ ಕೇಂದ್ರಗಳ ಪರಿಸ್ಥಿತಿ. 

Advertisement

ಕೇವಲ 5-6 ಅರ್ಜಿಗಳು ವಿಲೇವಾರಿ
ಜನಸ್ನೇಹಿ ಕೇಂದ್ರಗಳಲ್ಲಿ ಕೇವಲ ಒಂದು ಕೌಂಟರ್‌ನಿಂದ ಸೇವೆ ಒದಗಿಸಲಾಗುತ್ತಿರುವುದು ಸಮಸ್ಯೆಗೆ ಕಾರಣ. ಕಳೆದ ಕೆಲವು ದಿನಗಳಿಂದ ಸರ್ವರ್‌ ಸಮಸ್ಯೆಯಿಂದ ಕೆಲಸಗಳು ಇನ್ನಷ್ಟು ವಿಳಂಬಗೊಳ್ಳುತ್ತಿದ್ದು. 10- 15 ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ಕೇವಲ 5-6 ಅರ್ಜಿಗಳು ವಿಲೇವಾರಿಯಾಗುತ್ತಿದೆ. 

ಆಧಾರ್‌ ನೋಂದಣಿ: ಹೆಚ್ಚುವರಿ ಒತ್ತಡ 
ಜಿಲ್ಲೆಯಲ್ಲಿ ಒಟ್ಟು 9ಜನ ಸ್ನೇಹಿ ಕೇಂದ್ರಗಳಿವೆ. ಈ ಎಲ್ಲ ಕೇಂದ್ರಗಳಲ್ಲೂ ಇರುವುದು ಒಂದೇ ಕೌಂಟರ್‌. ಅದರೊಂದಿಗೆ ಹೆಚ್ಚುವರಿಯಾಗಿ ಆಧಾರ್‌ ನೋಂದಣಿ ಸೇವೆ ಕೂಡ ನೀಡಲಾಗಿದೆ. ಬೇರೆ ಕೇಂದ್ರಗಳಲ್ಲಿ ಆಧಾರ್‌ ನೋಂದಣಿಗೆ ಬೇರೆ ಸಿಬಂದಿ ನೇಮಿಸಲಾಗಿದೆ. ಆದರೆ ಕೋಟ ಜನಸ್ನೇಹಿ ಕೇಂದ್ರದಲ್ಲಿ ಮಾತ್ರ ಇರುವ ಸಿಬಂದಿ ಬೆಳಗ್ಗೆ ಕಂದಾಯ ಇಲಾಖೆಯ ಕೆಲಸವನ್ನು ಮಾಡಿದರೆ, ಮಧ್ಯಾಹ್ನದ ಬಳಿಕ ಆಧಾರ್‌ ನೋಂದಣಿಯ ಕೆಲಸವನ್ನು ಮಾಡುತ್ತಿದ್ದಾರೆ. ಮುಂದಿನ ತಿಂಗಳಲ್ಲಿ ಗ್ರಾ.ಪಂ.ಗಳಲ್ಲಿ ಆಧಾರ್‌ ನೋಂದಣಿ ನಡೆಯುವುದರಿಂದ ಹೆಚ್ಚುವರಿ ಕೆಲಸದ ಒತ್ತಡ ಕಡಿಮೆಯಾಗಬಹುದು.

ಹೊಸ ತಂತ್ರಾಂಶ: ಕೆಲಸ ವಿಳಂಬ
ಅಟಲ್‌ ಜನಸ್ನೇಹಿ ಕೇಂದ್ರದ ಸಿಬಂದಿಯನ್ನು ಉದಯವಾಣಿ ಮಾತನಾಡಿಸಿದಾಗ,  ಈಗ ಶಾಲಾ ಕಾಲೇಜುಗಳು ಆರಂಭಗೊಂಡಿರುವ ಹಿನ್ನೆಲೆ ಈಗ ಒತ್ತಡ ಇದೆ. ಕೆಲವೊಂದು ಸೇವೆಗಳಲ್ಲಿ ಹೊಸ ತಂತ್ರಾಂಶ ಅಳವಡಿಸಿದ ಹಿನ್ನೆಲೆ ಅವುಗಳ ಕೆಲಸ ವಿಳಂಬವಾಗುತ್ತಿದೆ. ಇಲ್ಲವಾದಲ್ಲಿ ಸಮಸ್ಯೆ ಇಲ್ಲ ಎನ್ನುತಾರೆ. 

ಮೂರ್‍ನಾಲು ದಿನಗಳಿಂದ ಕ್ಯೂ
ಜನಸ್ನೇಹಿ ಕೇಂದ್ರದಲ್ಲಿ ದಾಖಲೆ ಪಡೆಯಲು ಬಂದಿದ್ದ ಶಶಿಧರ್‌ ಮಾತನಾಡಿ “ಕಳೆದ ಮೂರ್‍ನಾಲು ದಿನಗಳಿಂದ ಬಂದಿದ್ದೇನೆ. ಇದೇ ರೀತಿ ಕ್ಯೂ ನಿಂತಿದೆ. ನಾವು ಕೆಲಸಕ್ಕೆ ಹೋಗುವವರು ಕೆಲಸ ಬಿಟ್ಟು ಬಂದು ನಿಲ್ಲಬೇಕು. ಪಿಂಚಣಿ ಸೇವೆ ಸೇರಿದಂತೆ ಕೆಲವು ಸೇವೆಗಳಲ್ಲಿ ಒಬ್ಬೊಬ್ಬರ ಕೆಲಸಕ್ಕೆ 10ರಿಂದ 15 ನಿಮಿಷ ಬೇಕು. ಹೀಗೆ ಒಬ್ಬೊರದ್ದು ಇಷ್ಟೊಂದು ಕಾಲ ತೆಗೆದುಕೊಳ್ಳುವುದಾದರೆ ಎರಡು ಕೌಂಟರ್‌ ತೆರೆಯಬಹುದಲ್ಲ’ ಎಂದರು. 

Advertisement

– 30ಸೇವೆಗಳಿಗೆ ಒಂದೇ ಕೌಂಟರ್‌
– ಬೆಳಗ್ಗಿನಿಂದ ಸಂಜೆವರೆಗೂ ದಾಖಲೆಗಾಗಿ ಕಾಯಬೇಕು.
– ಕೆಲವೊಂದು ಸೇವೆಗಳಿಗೆ 10 ನಿಮಿಷದವರೆಗೆ ಸಮಯ ಬೇಕು.
– ಜಿಲ್ಲೆಯಲ್ಲಿ 9 ಅಟಲ್‌ಜೀ ಜನಸ್ನೇಹಿ ಕೇಂದ್ರ ಇದೆ. 
– ಡಿಸಿ ಕಚೇರಿಯಲ್ಲಿರುವ ಸ್ಪಂದನ ಕೇಂದ್ರದಲ್ಲೂ ಸೇವೆ ಲಭ್ಯ 

ಸರ್ವರ್‌ ಸಮಸ್ಯೆ
ಅಟಲ್‌ ಜನಸ್ನೇಹಿ ಕೇಂದ್ರದಲ್ಲಿ ಸರ್ವರ್‌ ಸಮಸ್ಯೆಯಿಂದ ತೊಂದರೆಯಾಗಿದೆ. ಇಲ್ಲವಾದಲ್ಲಿ ಒಂದು ಕೌಂಟರ್‌ ಸಾಲುತ್ತದೆ. ಇನ್ನೊಂದೆರಡು ದಿನಗಳಲ್ಲಿ ಸರ್ವರ್‌ ಸಮಸ್ಯೆ ಸರಿಯಾಗುತ್ತದೆ. 
– ಪ್ರದೀಪ್‌ ಕುರುಡೇಕರ್‌ ತಹಶೀಲ್ದಾರ್‌, ಉಡುಪಿ

– ಹರೀಶ್‌ ಕಿರಣ್‌ ತುಂಗ

 

Advertisement

Udayavani is now on Telegram. Click here to join our channel and stay updated with the latest news.

Next