Advertisement

ನಗರಕ್ಕೆ ಬಂದಿದೆ “ಅಟಲ್‌ ಟಿಂಕರಿಂಗ್‌ ಲ್ಯಾಬ್‌’

02:43 PM Jan 27, 2020 | Suhan S |

ಹಾವೇರಿ: ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕೌಶಲ್ಯ ತಿಳಿಸಿಕೊಡುವ ವಿಶೇಷ ಪ್ರಯೋಗಾಲಯ ಎನಿಸಿದ “ಅಟಲ್‌ ಟಿಂಕರಿಂಗ್‌ ಲ್ಯಾಬ್‌’ ನಗರದಲ್ಲಿ ಪ್ರಥಮ ಬಾರಿಗೆ ಇಲ್ಲಿಯ ಎಸ್‌.ಎಂ.ಎಸ್‌. ಪ್ರೌಢಶಾಲೆಯಲ್ಲಿ ನಿರ್ಮಾಣ ಮಾಡಲಾಗಿದೆ.

Advertisement

ವಿವಿಧ ವೃತ್ತಿ, ಯೋಜನೆಗಳಲ್ಲಿನ ವಿಜ್ಞಾನ-ತಂತ್ರಜ್ಞಾನ ಕೌಶಲ್ಯ ಪಡೆಯಲು ಬೇಕಾದ ಅಗತ್ಯ ಮೂಲ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು “ಅಟಲ್‌ ಟಿಂಕರಿಂಗ್‌ ಲ್ಯಾಬ್‌’ ಸಹಕಾರಿಯಾಗಲಿದೆ. ಈ ಪ್ರಯೋಗಾಲಯದಿಂದ ವಿಶೇಷ ಮಾಹಿತಿ ಪಡೆದು ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು ಹಾಗೂ ತಮ್ಮಲ್ಲಿರುವ ವಿಶೇಷ ಕೌಶಲ್ಯ ಪ್ರದರ್ಶಿಸಲು ಈ ಪ್ರಯೋಗಾಲಯ ಅನುಕೂಲ ಕಲ್ಪಿಸಲಿದೆ. ಜಿಲ್ಲೆಯ ಇಚ್ಚಂಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ವರ್ಷವೇ “ಅಟಲ್‌ ಟಿಂಕರಿಂಗ್‌ ಲ್ಯಾಬ್‌’ ಪ್ರಾರಂಭಿಸಲಾಗಿದ್ದು, ಅನುದಾನಿತ ಪ್ರೌಢಶಾಲೆಯಲ್ಲಿ ಆರಂಭವಾಗುತ್ತಿರುವ ಪ್ರಥಮ ಪ್ರಯೋಗಾಲಯ ಇದಾಗಿದೆ. “ಅಟಲ್‌ ಟಿಂಕರಿಂಗ್‌ ಲ್ಯಾಬ್‌’ ಇದುಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಶೈಕ್ಷಣಿಕ ಯೋಜನೆಗಳಲ್ಲೊಂದಾಗಿದೆ.

ಕೇಂದ್ರ ನೀತಿ ಆಯೋಗದಡಿಯಲ್ಲಿ “ಅಟಲ್‌ ಟಿಂಕರಿಂಗ್‌ ಲ್ಯಾಬ್‌’ಗಾಗಿ 20ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಹಾಗೂ ಭದ್ರತೆ, ಸಾಮಾಜಿಕ, ಪರಿಸರ ವಿವಿಧ ಅನೈರ್ಮಲ್ಯಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ “ಅಟಲ್‌ ಟಿಂಕರಿಂಗ್‌ ಲ್ಯಾಬ್‌’ ಸಹಕಾರಿಯಾಗಲಿದೆ. ಪ್ರಯೋಗಾಲದಲ್ಲಿ ಯುನಿಕ್‌ ಮತ್ತು ಹೈಟೆಕ್‌ ಸಾಮಗ್ರಿಗಳಿದ್ದು, ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಹೆಚ್ಚು ಪರಿಣಾಮ ಬೀರುವ ಕೇಂದ್ರವಾಗಲಿದೆ.

ಕೇಂದ್ರದಲ್ಲಿ ಏನಿರುತ್ತದೆ?: “ಅಟಲ್‌ ಟಿಂಕರಿಂಗ್‌ ಲ್ಯಾಬ್‌’ನಲ್ಲಿ ವಿಜ್ಞಾನ, ಕೃಷಿ, ತಂತ್ರಜ್ಞಾನ, ಪರಿಸರ, ಭದ್ರತೆ ಸೇರಿದಂತೆ ಅನೇಕ ವಿಚಾರಗಳಲ್ಲಿ ಬಳಸಲ್ಪಡುವ ಅತ್ಯಾಧುನಿಕ ತಂತ್ರಜ್ಞಾನದ ಮಾಹಿತಿ ಹಾಗೂ ಅದಕ್ಕೆ ಬೇಕಾದ ಪುಟ್ಟ ಪುಟ್ಟ ವಿಶೇಷ, ವಿಶಿಷ್ಟ ಪ್ರಾಯೋಗಿಕ ಉಪಕರಣಗಳು ಪ್ರಯೋಗಾಲಯದಲ್ಲಿ ಇರುತ್ತವೆ. ವಿಶೇಷ ತಂತ್ರಜ್ಞಾನದ ವಾಹನ ಪಾರ್ಕಿಂಗ್‌, ತ್ರಿಡಿ ಮದ್ರಣ ಯಂತ್ರ, ಹೊಲಿಗೆ ಯಂತ್ರ, ಮೆಕ್ಯಾನಿಕಲ್‌ ಉಪಕರಣಗಳ ಬಳಕೆ, ಬ್ಯಾಟರಿ, ಮೋಟಾರ್‌, ವೈಯರ್‌, ಕಟರ್‌ ಸೇರಿದಂತೆ ನೂರಾರು ಪ್ರಯೋಗಗಳಿಗೆ ಬೇಕಾಗುವ ಅತ್ಯಾಧುನಿಕ ಉಪಕರಣಗಳು ಪ್ರಯೋಗಾಲಯದಲ್ಲಿವೆ. ಒಟ್ಟಾರೆ ಲ್ಯಾಬ್‌ಗ ಐದರಿಂದ ಆರು ಲಕ್ಷ ರೂ. ಮೌಲ್ಯದ ಸಾವಿರಾರು ಉಪಕರಣಗಳನ್ನು ನೀಡಲಾಗುತ್ತದೆ. ಅಟೋಮೊಬೈಲ್‌ ತಂತ್ರಜ್ಞಾನ, ಕೃಷಿಯಲ್ಲಿ ಬಳಸುವ ತಂತ್ರಜ್ಞಾನ, ರೋಬೋಟ್‌ ತಂತ್ರಜ್ಞಾನ, ಪರಿಸರ ರಕ್ಷಣೆ ಹಾಗೂ ಮಾಹಿತಿ ತಂತ್ರಜ್ಞಾನ, ನೀರುನಿರ್ವಹಣೆ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ದ್ರೋಣ ತಂತ್ರಜ್ಞಾನ, ಸೆನ್ಸಾರ್‌ ತಂತ್ರಜ್ಞಾನ, ಮೊಬೈಲ್‌, ಬ್ಲೂಟೂತ್‌ ತಂತ್ರಜ್ಞಾನ, ತ್ರಿ ಡಿ ತಂತ್ರಜ್ಞಾನ, ಆ್ಯಪ್‌ ಬಳಸುವ ತಂತ್ರಜ್ಞಾನ ಹೀಗೆ ನೂರಾರು ತಂತ್ರಜ್ಞಾನ ಮಾಹಿತಿಯನ್ನು ಅಗತ್ಯ ಸಲಕರಣೆ, ಉಪಕರಣ ಬಳಕೆಯೊಂದಿಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ವಿಡಿಯೋ ಪ್ರೊಜೆಕ್ಟರ್‌ ಮೂಲಕ ಪಾಠದ ವ್ಯವಸ್ಥೆಯೂ ಈ ಪ್ರಯೋಗಾಲಯ ಹೊಂದಿದೆ.

250 ಪ್ರೊಜೆಕ್ಟ್ಗಳು: ಈ ಪ್ರಯೋಗಾಲಯದಲ್ಲಿ 250ಕ್ಕೂ ಹೆಚ್ಚು ಯೋಜಿತ ಪ್ರೊಜೆಕ್ಟ್ಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಈ ಪ್ರೊಜೆಕ್ಟ್ಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಶಾಲೆಯ ಶಿಕ್ಷಕರಿಗೆ ತರಬೇತಿ ನೀಡಿ ಅವರಿಂದಲೇ ಅನುಷ್ಠಾನಗೊಳಿಸಲಾಗುತ್ತದೆ. ಪ್ರತಿಯೊಂದು ಪ್ರೊಜೆಕ್ಟಿನ ಕಾರ್ಯನಿರ್ವಹಣೆ, ಮಾಹಿತಿ ತಂತ್ರಜ್ಞಾನವನ್ನು ಮಕ್ಕಳಿಗೆ ತಿಳಿಸಿಕೊಡಲಾಗುತ್ತದೆ. ಈ ಯೋಜಿತ ಪ್ರೊಜೆಕ್ಟ್ಗಳಲ್ಲದೇ ವಿದ್ಯಾರ್ಥಿಗಳು ತಮ್ಮ ಕೌಶಲ್ಯದಿಂದ ಹೊಸ ಪ್ರೊಜೆಕ್ಟ್ಗಳನ್ನು ನಿರ್ಮಾಣ ಮಾಡಿ ತಮ್ಮ ಜ್ಞಾನ ಪ್ರದರ್ಶಿಸಲು ಈ ಲ್ಯಾಬ್‌ ಒಳ್ಳೆಯ ವೇದಿಕೆಯಾಗಲಿದೆ. ಒಟ್ಟಾರೆ ಜಿಲ್ಲೆಯ ವಿದ್ಯಾರ್ಥಿಗಳಲ್ಲಿಗೆ ಮಾಹಿತಿ ತಂತ್ರಜ್ಞಾನದ ಸಮಗ್ರ ತಿಳಿವಳಿಕೆ ನೀಡುವ ಜತೆಗೆ ಅವರಲ್ಲಿನ ಕೌಶಲ್ಯ ಬೆಳಕಿಗೆ ತರಲು “ಅಟಲ್‌ ಟಿಂಕರಿಂಗ್‌ ಲ್ಯಾಬ್‌’ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Advertisement

ಸೆಂಟ್ರಡೋ ಕಂಪನಿ “ಅಟಲ್‌ ಟಿಂಕರಿಂಗ್‌ ಲ್ಯಾಬ್‌’ ನಿರ್ವಹಣೆಯ ಜವಾಬ್ದಾರಿ ತೆಗೆದುಕೊಂಡಿದೆ. ಮಕ್ಕಳಿಗೆ ಹಾಗೂ ಶಿಕ್ಷಕರಿಗೆ 250 ಯೋಜಿತ ಪ್ರೊಜೆಕ್ಟ್ಗಳ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಂದ ಪ್ರಯೋಗಾಲಯದಲ್ಲಿ ಅನುಷ್ಠಾನಗೊಳಿಸಲಾಗುವುದು. ಮೊದಲ ಒಂದು ವರ್ಷ ಸಂಸ್ಥೆ ನಿರ್ವಹಣೆ ಮಾಡಲಿದ್ದು, ಐದು ವರ್ಷ ಪ್ರಯೋಗಾಲಯಕ್ಕೆ ಬೆಂಬಲವಾಗಿ ನಿಂತು ವಿದ್ಯಾರ್ಥಿಗಳಿಗೆ ಸಹಕಾರ ನೀಡಲಿದೆ. ವಾರದಲ್ಲಿ ಒಂದು ದಿನ ಇದಕ್ಕಾಗಿ ಅವ ಧಿ ಮೀಸಲಿಡಲಾಗುತ್ತದೆ. ಈ ಅವಧಿ ಯಲ್ಲಿ ತಜ್ಞರಿಂದ ವಿಶೇಷ ತರಬೇತಿ ನೀಡಲಾಗುತ್ತದೆ ಹಾಗೂ ತರಬೇತುದಾರರನ್ನೂ ಸಿದ್ಧಪಡಿಸಲಾಗುತ್ತದೆ.  –ಚೇತನ್‌ ಪೊನ್ನಪ್ಪ, ಪ್ರಾದೇಶಿಕ ನಿರ್ದೇಶಕರು, ಸೆಂಟ್ರಡೋ ಕಂಪನಿ

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next