Advertisement

ಬಾಲ್ಯದಲ್ಲಿ ಯೇ ವಿಜ್ಞಾನ ಕಲಿತುಕೊಳ್ಳಿ : ಮಠಂದೂರು

12:19 PM Sep 09, 2018 | |

ಪುತ್ತೂರು: ಬಾಲ್ಯದಲ್ಲಿಯೇ ವಿಜ್ಞಾನಕ್ಕೆ ತೆರೆದುಕೊಂಡು, ದೇಶಕ್ಕೆ ದೊಡ್ಡ ಕೊಡುಗೆ ನೀಡುವಂತೆ ಆಗಬೇಕು. ಈ ನಿಟ್ಟಿನಲ್ಲಿ ಅಟಲ್‌ ಟಿಂಕರಿಂಗ್‌ ಲ್ಯಾಬನ್ನು ಕೇಂದ್ರ ಸರಕಾರ ಸ್ಥಾಪಿಸಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಕೇಂದ್ರ ಸರಕಾರದ ನೀತಿ ಆಯೋಗದ ಮೂಲಕ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಆರಂಭಗೊಂಡ ಅಟಲ್‌ ಟಿಂಕರಿಂಗ್‌ ಲ್ಯಾಬನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

Advertisement

ಹಲವು ತಂತ್ರಜ್ಞಾನಗಳನ್ನು ನಾವಿಂದು ಬಳಕೆ ಮಾಡುತ್ತಿದ್ದೇವೆ. ಇದರಿಂದ ಜಗತ್ತು ಹಾಗೂ ಸಂಬಂಧಗಳು ಹತ್ತಿರಕ್ಕೆ ಬಂದಿವೆ. ಇದಕ್ಕೆ ಪೂರಕವಾಗಿ ಸ್ವಾಭಿಮಾನದ ಪರಿಕಲ್ಪನೆಯನ್ನು ನಮ್ಮ ಹಿರಿಯರು ನೀಡಿದ್ದಾರೆ. ಅದನ್ನು ಮುಂದುವರಿಸುವ ನಿಟ್ಟಿನಲ್ಲಿ ಅಟಲ್‌ ಟಿಂಕರಿಂಗ್‌ ಲ್ಯಾಬನ್ನು ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.

ದೇಶದ ಮಾಜಿ ಪ್ರಧಾನಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಅವರು ಜೈ ಜವಾನ್‌, ಜೈ ಕಿಸಾನ್‌ ಘೋಷಣೆ ಮೂಲಕ ರಾಷ್ಟ್ರದ ಕೃಷಿಕರು ಮತ್ತು ಯೋಧರಿಗೆ ಬಹುದೊಡ್ಡ ಗೌರವ ನೀಡಿದ್ದರು. ಈ ಮಾದರಿಯನ್ನು ಮುಂದುವರಿಸಿದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ‘ಜೈ ವಿಜ್ಞಾನ್‌’ ಎಂಬ ಘೋಷಣೆ ಸೇರಿಸಿದರು. ವಿಜ್ಞಾನದ ಮೇಲೆ ಅವರಿಟ್ಟ ಭರವಸೆ ಮತ್ತು ತೋರಿಸಿದ ಗೌರವ ಈಗ ಸಾಕಾರಗೊಳ್ಳುತ್ತಿದೆ ಎಂದರು.

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌, ಇಲೆಕ್ಟ್ರಾನಿಕ್ಸ್‌ ಇತ್ಯಾದಿ ವಿಷಯಗಳು ಹೆಚ್ಚು ಪ್ರಚಲಿತದಲ್ಲಿವೆ. ಇತ್ತೀಚೆಗೆ ಮೆಕೋ- ಇಲೆಕ್ಟ್ರಾನಿಕ್ಸ್‌ ಎಂಬ ಹೊಸ ಪರಿಕಲ್ಪನೆ ಜನಪ್ರಿಯಗೊಳ್ಳುತ್ತಿದೆ. ತ್ರಿಡಿ ತಂತ್ರಜ್ಞಾನ ಜನಪ್ರಿಯಗೊಂಡಿದೆ. ಇದೆಲ್ಲ ವಿಜ್ಞಾನದ ವಿಸ್ತರಿತ ರೂಪ. ಇದನ್ನು ಅಧ್ಯಯನ ಮಾಡುತ್ತಾ, ವೃತ್ತಿಯ ಭಾಗವಾಗಿ ಸ್ವೀಕರಿಸಿದರೆ ಅದ್ಭುತ ಯಶಸ್ಸು ಕಾಣಬಹುದು ಮತ್ತು ಸಮಾಜಕ್ಕೆ ನೂತನ ಕೊಡುಗೆಗಳನ್ನು ನೀಡಬಹುದು ಎಂದರು.

ಎಂಆರ್‌ಪಿಎಲ್‌ ಕಂಪನಿಯ ಪ್ರಾಯೋಜಕತ್ವದಲ್ಲಿ ನಿರ್ಮಾಣವಾಗಲಿರುವ ಶಾಲೆಯ 2ನೇ ಅಂತಸ್ತಿನ ಕಾಮಗಾರಿಗೆ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ ಕುಮಾರ್‌ ರೈ ಶಿಲಾನ್ಯಾಸ ಮಾಡಿದರು. ಶಾಸಕ ಸಂಜೀವ ಮಠಂದೂರು, ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ವೈ. ಶಿವರಾಮಯ್ಯ, ಜಿ.ಪಂ. ಸದಸ್ಯರಾದ ಮಂಜುಳಾ ಮಾವೆ, ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ನಗರಸಭೆಯ ನಿರ್ಗಮನ ಅಧ್ಯಕ್ಷೆ ಜಯಂತಿ ಬಲಾ°ಡ್‌, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆ ಗುತ್ತು, ಡಾ| ಪ್ರತಿಮಾ ಹೆಗ್ಡೆ, ಬೆಂಗಳೂರಿನ ಲರ್ನಿಂಗ್‌ ಲಿಂಕ್ಸ್‌ ಫೌಂಡೇಶನ್‌ನ ಸಂಯೋಜಕಿ ಹಾನಾ ಮುರುಗನ್‌, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ವಿಜ್ಞಾನ ಶಿಕ್ಷಕಿ ವಸಂತಿ ಕೆದಿಲ, ನಿವೃತ್ತ ಮುಖ್ಯಶಿಕ್ಷಕ ಮನೋಹರ ರೈ, ಶಾಲೆಯ ಆಡಳಿತ ಮಂಡಳಿ ಸದಸ್ಯ ಸಂಜೀವ ಆಳ್ವ, ಶಾಲೆಯ ಮುಖ್ಯ ಶಿಕ್ಷಕಿ ರೂಪಕಲಾ ಕೆ. ಉಪಸ್ಥಿತರಿದ್ದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಆಡಳಿತ ಮಂಡಳಿ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿದ್ಯಾರ್ಥಿ- ವಿಜ್ಞಾನಿ
ಸಂತ ಫಿಲೋಮಿನಾ ಪ್ರೌಢಶಾಲೆ, ವಿವೇಕಾನಂದ ಪ್ರೌಢಶಾಲೆ, ಶ್ರೀ ರಾಮಕೃಷ್ಣ ಪ್ರೌಢಶಾಲೆ, ಕೊಂಬೆಟ್ಟು ಸರಕಾರಿ ಪ.ಪೂ. ಕಾಲೇಜು ಮತ್ತು ಉಪ್ಪಿನಂಗಡಿ ಸರಕಾರಿ ಪ.ಪೂ. ಕಾಲೇಜುಗಳ ಪ್ರೌಢಶಾಲೆಗಳಿಗೆ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಮಂಜೂರಾಗಿದೆ. ನೀತಿ ಆಯೋಗ ಈ ಲ್ಯಾಬ್‌ ಸ್ಥಾಪನೆಗೆ 10 ಲಕ್ಷ ರೂ. ನೀಡುತ್ತಿದೆ. ಮುಂದೆ 5 ವರ್ಷಗಳ ಕಾಲ ವರ್ಷಕ್ಕೆ 2 ಲಕ್ಷ ರೂ. ನಂತೆ ನಿರ್ವಹಣ ವೆಚ್ಚ ನೀಡಲಿದೆ. ವಿದ್ಯಾರ್ಥಿ ವಿಜ್ಞಾನಿಗಳನ್ನು ತಯಾರಿಸಲು ಇದು ಸಹಕಾರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next