Advertisement

ವಾಜಪೇಯಿಯವರೂ ಎತ್ತಿನ ಗಾಡಿಯಲ್ಲಿ ಬಂದಿದ್ದರು, ನಾವು ಬಂದರೆ ತಪ್ಪೇಕೆ?: ಸಿದ್ದರಾಮಯ್ಯ

03:10 PM Sep 13, 2021 | Team Udayavani |

ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬೆಲೆ ಏರಿಕೆ ವಿರೋಧಿಸಿ ಪಾರ್ಲಿಮೆಂಟ್ ಗೆ ಎತ್ತಿನಗಾಡಿ ಮೇಲೆ ಬಂದಿದ್ದರು. ಈಗ ನಾವು ಬಂದರೆ ತಪ್ಪಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಯುಪಿಎ ಸರ್ಕಾರ ಇದ್ದಾಗ ಕಾಂಗ್ರೆಸ್ ನವರು ಎತ್ತಿನಗಾಡಿ ಮೇಲೆ ವಿಧಾನಸೌಧಕ್ಕೆ ಬರಬೇಕಿತ್ತು ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯುಪಿಎ ಸರ್ಕಾರದ ಸಂದರ್ಭದಲ್ಲಿ ಕಚ್ಚಾತೈಲದ ಬೆಲೆ 110 ಡಾಲರ್ ಮೇಲಿತ್ತು. ಆದರೂ ಕಡಿಮೆ ದರದಲ್ಲಿ ಪೆಟ್ರೋಲ್ ನೀಡಲಾಗುತ್ತಿತ್ತು. ಈಗ ಕಚ್ಚಾ ತೈಲ ಬೆಲೆ 70 ಡಾಲರ್ ಇದೆ. ಆದರೆ ಪೆಟ್ರೋಲ್ 100 ರ ಗಡಿ ದಾಟಿದೆ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ 3.45 ರೂ ಮಾತ್ರ ಪ್ರತಿ ಲೀಟರ್ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಈಗ 33 ರೂಗಳಷ್ಟು ಪ್ರತಿ ಲೀಟರ್ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಯಾವುದು ಸತ್ಯ ಯಾವುದು ಸುಳ್ಳು ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಲಿ ನೋಡೊಣ ಎಂದು ಸವಾಲೆಸೆದರು.

ಎಲ್ ಪಿಜಿ ಬೆಲೆ ಏರಿಕೆಯಾದಾಗ ಶೋಭಾ ಕರಂದ್ಲಾಜೆ ಅವರು ತಲೆ ಮೇಲೆ ಸಿಲೆಂಡರ್ ಹೊತ್ಕೊಂಡು ಪ್ರತಿಭಟನೆ ಮಾಡಿದ್ದರು‌. ಈಗ ಶೋಭಾ ಕರಂದ್ಲಾಜೆ ಅವರು ಏಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ರಾಜ್ಯಸಭಾ ಸದಸ್ಯ, ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನ

ಯಾದಗಿರಿ ಮಹಿಳೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಈ ಪ್ರಕರಣ ಖಂಡಿಸುತ್ತೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಸಚಿವರು ಸಂಜೆ ಹೊತ್ತು ಹೆಣ್ಮಕ್ಕಳು ಹೊರಗೆ ಹೋಗುವುದೇ ತಪ್ಪು ಎನ್ನುವಂತೆ ಮಾತನಾಡುತ್ತಾರೆ. ನಮ್ಮ ಅವಧಿಯಲ್ಲಿ ಡಿಕೆ ರವಿ ಪ್ರಕರಣ, ಡಿವೈಎಸ್ ಪಿ ಗಣಪತಿ ಪ್ರಕರಣ, ನಂದಿತಾ ಅತ್ಯಾಚಾರ ಪ್ರಕರಣಗಳ ಬಗ್ಗೆ ಸುಳ್ಳು ಆರೋಪ ಮಾಡಿದ್ದರು. ನಾನು ಎಲ್ಲವನ್ನು ಸಿಬಿಐಗೆ ವಹಿಸಿದ್ದೆ. ಇವರು ಯಾವದೇ ಪ್ರಕರಣವನ್ನೂ ಸಿಬಿಐ ಕೊಟ್ಟಿಲ್ಲ. ಈ ಬಗ್ಗೆ ಸದನದಲ್ಲಿ ಮಾತನಾಡುತ್ತೇನೆ ಎಂದರು.

Advertisement

ದೇವಸ್ಥಾನ ತೆವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಾಪ್ ಸಿಂಹ ಪ್ರಚಾರ ಪ್ರಿಯ. ದೇವಸ್ಥಾನ ಕೆಡವುತ್ತಿರುವುದು ಅವರದೇ ಸರ್ಕಾರ. ಅವರು ಪ್ರತಿಭಟಿಸುವುದಾದರೆ, ರಾಜೀನಾಮೆ ಕೊಟ್ಟು ಪ್ರತಿಭಟನೆ ನಡೆಸಲಿ ಎಂದರು.

ದೇವಸ್ಥಾನಗಳನ್ನು ಒಡೆಯುವ ಮೊದಲು ಭಕ್ತರಿಗೆ ಮಾಹಿತಿ ನೀಡಬೇಕು. ಪರ್ಯಾಯ ಸ್ಥಳ ನೀಡಬೇಕು. ಆ ನಂತರ ಕಾನೂನು ಪ್ರಕಾರ ದೇವಸ್ಥಾನ ತೆರವುಗೊಳಿಸಲಿ. ಅದನ್ನು ಬಿಟ್ಟು ಯಾವುದೇ ಮಾಹಿತಿ ನೀಡದೆ ದೇವಸ್ಥಾನ ತೆರವುಗೊಳಿಸುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next