Advertisement

97ನೇ ಜನ್ಮದಿನ: ವಾಜಪೇಯಿ-ಸುಶಾಸನಕ್ಕೆ ಸಮಾನಾರ್ಥಕ ಹೆಸರು

10:46 AM Dec 25, 2021 | Team Udayavani |

ಉತ್ತಮ ಆಡಳಿತ ಅಥವಾ ಸುಶಾಸನ ಭಾರ ತೀಯ ಪ್ರಾಚೀನ ಸಂಸ್ಕೃತಿ ಮತ್ತು ಪುರಾಣದ ಅವಿಭಾಜ್ಯ ಆಂಗ. ಬೌದ್ಧ ಧರ್ಮದ ಗಾನ ಸಂಘ ಮತ್ತು ಬಸವೇಶ್ವರರು 11ನೇ ಶತಮಾನದಲ್ಲಿ ಸ್ಥಾಪಿ ಸಿದ ಅನುಭವ ಮಂಟಪ ವ್ಯವಸ್ಥೆ, ಚಾಣಕ್ಯರ ಅರ್ಥಶಾಸ್ತ್ರ, ಸಿಂಧೂ ಕಣಿವೆಯ ನಾಗರಿಕತೆ ಸಮಯದಲ್ಲಿದ್ದ ನಗರ ಯೋಜನೆ ಮತ್ತು ಮೌರ್ಯ ಚಕ್ರವರ್ತಿ ಅಶೋಕನ ಪರಂಪರೆ ಮುಂತಾದವುಗಳ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಡೆಯಲಾಗಿದೆ. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರ ಜನ್ಮ ದಿನವಾದ ಡಿ. 25 ರಂದು “ಉತ್ತಮ ಆಡಳಿತ ದಿನ’ವಾಗಿ ಆಚರಿಸಲಾಗುತ್ತದೆ. ಸ್ವತಂತ್ರ ಭಾರತ ದಲ್ಲಿ ಅತ್ಯುತ್ತಮ ಆಡಳಿತ ಕ್ರಮಗಳನ್ನು ಸಾಂಸ್ಥಿ ಕಗೊಳಿಸುವಲ್ಲಿ ವಾಜಪೇಯಿ ಪಾತ್ರ ಗಣನೀಯ.

Advertisement

ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಭವಿಷ್ಯದ ಬಗೆಗಿನ ಒಳನೋಟ, ರಾಷ್ಟ್ರ ನಿರ್ಮಾಣದಲ್ಲಿನ ಅವರ ಪಾತ್ರದಿಂದ ವಾಜಪೇಯಿ ಅವರು ಗಾಢ ವಾಗಿ ಪ್ರಭಾವಿತರಾಗಿದ್ದರು. ವಾಜಪೇಯಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ರಾಜನೀತಿ ಯಿಂದ ಐತಿಹಾಸಿಕ ಮತ್ತು ಉತ್ತಮ ಆಡಳಿತದ ಪ್ರಯತ್ನಗಳಿಗೆ ರಾಷ್ಟ್ರ ಸಾಕ್ಷಿಯಾಯಿತು.
ಸಂಸದರಾಗಿ 10 ಅವಧಿಯ ಸುದೀರ್ಘ‌ ಸಂಸದೀಯ ಅನುಭವ ಹೊಂದಿದ, 2 ಬಾರಿ ರಾಜ್ಯಸಭಾ ಸದಸ್ಯರಾಗಿ ಅವರು 2 ಅವಧಿಗೆ ಉತ್ತಮ ಆಡಳಿತದ ಸೂಕ್ಷ್ಮತೆಗಳ ಬಗ್ಗೆ ಬೆಳಕು ಚೆಲ್ಲಿದರು. ವಿಪಕ್ಷ ಸದಸ್ಯರಾಗಿ, ಅವರ ತರ್ಕಬದ್ಧ ವಾದ, ರಚನಾತ್ಮಕ ಟೀಕೆಗಳು ಕಲ್ಯಾಣ ಕೇಂದ್ರಿತ ಆಡಳಿತ ವ್ಯವಸ್ಥೆಯ ರೂಪಣೆಯಲ್ಲಿ ಮಹತ್ವ ಪಡೆದವು. ಪ್ರಧಾನಿಯಾಗಿದ್ದಾಗ ಕೈಗೊಂಡ ಜನ-ಕೇಂದ್ರಿತ ಉಪಕ್ರಮಗಳು ದೇಶದ ಪರಿವರ್ತನಾ ಯಾತ್ರೆ ಯಲ್ಲಿ ಮೈಲಿಗಲ್ಲುಗಳಾದವು. ರೈತರ ಜೀವನ ಸುಧಾರಣೆಗೆ ಕಿಸಾನ್‌ ಕ್ರೆಡಿಟ್‌ಕಾರ್ಡ್‌, ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ, ಸುವರ್ಣ ಚತುಷ್ಪಥ ಯೋಜನೆ ಮೂಲಕ ಮೂಲಸೌಕರ್ಯಕ್ಕೆ ಉತ್ತೇಜನ, ಅಂತಾರಾಜ್ಯ ನದಿ ಜೋಡಣೆ, ಸರ್ವ ಶಿಕ್ಷಾ ಅಭಿಯಾನದ ಮೂಲಕ ಶೈಕ್ಷಣಿಕ ಸುಧಾರಣ ಕ್ರಮಗಳು, ಪ್ರತ್ಯೇಕ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸ್ಥಾಪನೆ ಮತ್ತಿತರ ಕ್ರಮಗಳು ಎಲ್ಲ ವರ್ಗವನ್ನು ತಲುಪಿದವು.

ಮೇ 1998ರಲ್ಲಿ ರಾಜಸ್ಥಾನದ ಪೋಖ್ರಾನ್ ನಲ್ಲಿ ಅಣು ಪರೀಕ್ಷೆ ನಡೆಸಿ ಭಾರತ‌ಕ್ಕೆ ಪರಮಾಣು ಶಸ್ತ್ರಾಸ್ತ್ರದ ಸ್ಥಾನಮಾನ ತಂದುಕೊಟ್ಟರು. ಇದು ಅವರ ರಾಷ್ಟ್ರೀಯ ಆಡಳಿತದ ಕಾರ್ಯಸೂಚಿಯ ಭಾಗ. ಸಂಕೀರ್ಣ ಕಾಶ್ಮೀರದ ಸಮಸ್ಯೆ ಪರಿಹಾರ ಕುರಿತ ಪ್ರಸಿದ್ಧ ವಾಜಪೇಯಿ ಸಿದ್ಧಾಂತ, ಕಾಶ್ಮೀರಿ ಜನರ ಮಾನವೀಯತೆ, ಶಾಂತಿ ಮತ್ತು ಪವಿತ್ರತೆಗೆ ಮೀಸಲಾದ “ಇನ್ಸಾನಿಯತ್‌, ಜಮುØರಿಯತ್‌ ಮತ್ತು ಕಾಶ್ಮೀರಿಯತ್‌” ಎಂಬ ಜನಪ್ರಿಯ ಹೇಳಿಕೆ ಅವರ ಬುದ್ಧಿಮತ್ತೆಯನ್ನು ಪ್ರತಿಬಿಂಬಿಸಿತು. ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ಅವರ ಒಳನೋಟ “ನೀವು ಸ್ನೇಹಿತರನ್ನು ಬದಲಾಯಿಸಬಹುದು, ಆದರೆ ನೆರಹೊರೆಯವರನ್ನಲ್ಲ’ ಎಂಬ ಸಿದ್ಧಾಂತದ ಮೂಲಕ ಎಲ್ಲ ವೇದಿಕೆಗಳಲ್ಲಿ ನಿರಂತರ ಸಂಪರ್ಕ ಕಾಯ್ದುಕೊಳ್ಳಲಾಗುತ್ತಿತ್ತು. ಅತ್ಯುನ್ನತ ತ್ಯಾಗ ಮಾಡಿದ ಸೈನಿಕರನ್ನು ಜನರು ಗೌರವಿಸಲು ಅನುವು ಮಾಡಿಕೊಡಲು ಅಟಲ್‌ಜಿ ಸರಕಾರವು ಹುತಾತ್ಮರ ಮೃತದೇಹಗಳನ್ನು ಅವರ ಮನೆಗಳಿಗೆ ಕಳುಹಿಸುವ ತೀರ್ಮಾನ ಮಾಡಿತು.

ಅಟಲ್‌ ಅವರು 21ನೇ ಶತಮಾನದ ಆರಂಭದಲ್ಲಿ ಉತ್ತಮ ಆಡಳಿತಕ್ಕೆ ಹಲವು ಉಪಕ್ರಮಗಳನ್ನು ಕೈಗೊಂಡು ಮನೆಮಾತಾ ದರು. ಇದೀಗ ಆ ಕಾರ್ಯಗಳನ್ನು ಮುಂದು ವರಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನವ ಭಾರತ ನಿರ್ಮಿಸಲು ಹಲವು ಉಪಕ್ರಮಗಳ ವೇಗ ಮತ್ತು ವ್ಯಾಪ್ತಿ ಹೆಚ್ಚಿಸಿದೆ. ಜನರ ಜೀವನ ಸುಗಮಗೊಳಿಸಲು “ಕನಿಷ್ಠ ಸರ್ಕಾರ -ಗರಿಷ್ಠ ಆಡಳಿತ’ ಮಂತ್ರಕ್ಕೆ ಒತ್ತು ನೀಡಿ ಪಾರದರ್ಶಕತೆಯನ್ನು ಹೆಚ್ಚಿಸಲಾಗಿದೆ.

ಉತ್ತಮ ಆಡಳಿತವು ಜನರಿಗೆ ಸೇವೆ ಸಲ್ಲಿಸುವ ಸಾಧನ, ಸುಸ್ಥಾಪಿತ ಸಾಂವಿಧಾನಿಕ ಚೌಕಟ್ಟಿನ ಮೂಲಕ ಅವರ ಆಕಾಂಕ್ಷೆಗಳನ್ನು ಪೂರೈಸುವುದು ಅದರ ಗುರಿ. “ಆಜಾದಿ ಕಾ ಅಮೃತ ಮಹೋತ್ಸವ’ ದ ಸಂದರ್ಭದಲ್ಲಿ ರಾಷ್ಟ್ರವು ಉತ್ತಮ ಆಡಳಿತ ದಿನಕ್ಕೆ ಸಾಕ್ಷಿಯಾಗುತ್ತಿರುವಂತೆಯೇ ನಾವು ಆತ್ಮಾವಲೋಕನ ಮಾಡಿಕೊಳ್ಳೋಣ.

Advertisement

-ಅರ್ಜುನ್‌ ರಾಮ್‌ ಮೇಘವಾಲ್, ಕೇಂದ್ರ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next