Advertisement

ಮಳೆಗಾಲ ಆರಂಭದಲ್ಲೇ ಮೆಸ್ಕಾಂಗೆ 32.10 ಲ.ರೂ.ನಷ್ಟ

10:50 PM Jun 16, 2019 | Team Udayavani |

ಉಡುಪಿ: ಈ ಬಾರಿಯ ಮಳೆಗಾಲದ ಆರಂಭದಲ್ಲೇ ಮೆಸ್ಕಾಂ ಇಲಾಖೆಗೆ 32.10 ಲ.ರೂ. ನಷ್ಟ ಉಂಟಾಗಿದೆ.

Advertisement

ವಿದ್ಯುತ್‌ ಕಂಬಗಳ ಮುರಿತ, ಟ್ರಾನ್ಸ್‌ಫಾರ್ಮರ್‌ ಸುಟ್ಟು ಹೋಗಿರುವುದು ಮೊದಲಾದವುಗಳಿಗೆ ಹಾನಿಯಾಗಿದೆ.

ಜಿಲ್ಲೆಯಲ್ಲಿ ಜೂ.1ರಿಂದ 12ರ ವರೆಗೆ ಗಾಳಿ, ಮಳೆ, ಸಿಡಿಲು, ಮರ ಬಿದ್ದು ಮೆಸ್ಕಾಂನ 276ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಮುರಿದಿವೆ. ಸುಮಾರು 35ರಷ್ಟು ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿವೆ. ಸುಮಾರು 8.42ಕಿ.ಮೀ.ನಷ್ಟು ವಿದ್ಯುತ್‌ ತಂತಿಗಳು ಹಾನಿಗೊಂಡಿವೆ.

ಎಲ್ಲೆಲ್ಲಿ ನಷ್ಟ?
ಮೆಸ್ಕಾಂನ ಉಡುಪಿ ಸಬ್‌ ಡಿವಿಜನ್‌ನಲ್ಲಿ ಭಾರಿ ಗಾಳಿ ಮಳೆಗೆ ಸುಮಾರು 6 ವಿದ್ಯುತ್‌ ಕಂಬಗಳು ಮುರಿದಿವೆ. 3 ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿವೆ.
ಮಣಿಪಾಲ ಸಬ್‌ ಡಿವಿಜನ್‌ಗೆ ಸಂಬಂಧಿಸಿದಂತೆ ಮಣಿಪಾಲ, ಪ್ರಗತಿ ನಗರ, ಹಿರಿಯಡಕ, ಪರ್ಕಳ, ಅಲೆವೂರು ಹಾಗೂ ಮೂಡುಬೆಳ್ಳೆ ಸೆಕ್ಷನ್‌ಗಳಲ್ಲಿ ಸುಮಾರು 50 ಕಂಬಗಳು ಮುರಿದಿದ್ದು, 7 ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟಿವೆ. ಬ್ರಹ್ಮಾವರ ಸಬ್‌ ಡಿವಿಜನ್‌ ಪೇತ್ರಿಯಲ್ಲಿ ಒಂದು ವಿದ್ಯುತ್‌ ಕಂಬಕ್ಕೆ
ಹಾನಿಯಾಗಿದ್ದು, 3 ವಿದ್ಯುತ್‌ ಪರಿವರ್ತಕಗಳು ಸುಟ್ಟಿವೆ. ಕಾರ್ಕಳ ಸಬ್‌ ಡಿವಿಜನ್‌ನಲ್ಲಿ ಒಟ್ಟು 1 ವಿದ್ಯುತ್‌ ಪರಿವರ್ತಕಗಳು ಹಾಗೂ ಸುಮಾರು 36ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಗಾಳಿ, ಮಳೆ, ಸಿಡಿಲು, ಮರ ಬಿದ್ದು ಹಾನಿಗೊಂಡಿವೆ.

ಮುಂಗಾರು ಮಳೆಯನ್ನು ಎದುರಿಸಲು ಸರ್ವ ಸನ್ನದ್ಧವಾಗಿದ್ದ ಮೆಸ್ಕಾಂ ಈಗಾಗಲೇ ತುಂಡಾದ ವಿದ್ಯುತ್‌ ಕಂಬಗಳು, ಹಾಳಾದ ವಯರ್‌ ಹಾಗೂ ವಿದ್ಯುತ್‌ ಪರಿವರ್ತಕಗಗಳನ್ನು ಬದಲಾಯಿಸಲಾಗಿದೆ ಎಂದು ಮೆಸ್ಕಾಂನ ಜಿಲ್ಲಾ ಅಧೀಕ್ಷಕ ಅಭಿಯಂತರ ನರಸಿಂಹ ಪಂಡಿತ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next