Advertisement
ಸೋಮವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದುರ್ಬಲ ವರ್ಗದ ಜನರು ದೇಶದ ಆಸ್ತಿ ಮತ್ತು ಸಂಸ್ಥೆಗಳಲ್ಲಿ ತಮ್ಮ ಪಾಲು ಪಡೆಯುತ್ತಿಲ್ಲ ಎಂದರು. ಮಾತ್ರವಲ್ಲದೆ ಇಲ್ಲಿ ಎಷ್ಟು ಮಂದಿ ದಲಿತರು ಮತ್ತು ಒಬಿಸಿಗಳು ಇದ್ದೀರಿ ಎಂದು ಪ್ರಶ್ನಿಸಿ ಪತ್ರಿಕಾಗೋಷ್ಠಿಯಲ್ಲಿದ್ದ ಪತ್ರಕರ್ತರಿಗೆ ಕೈ ಎತ್ತಲು ಹೇಳಿದರು.
Related Articles
Advertisement
4 ಕಾಂಗ್ರೆಸ್ ಮುಖ್ಯಮಂತ್ರಿಗಳ ಪೈಕಿ 3 ಮುಖ್ಯಮಂತ್ರಿಗಳು ಒಬಿಸಿಯವರು. ಬಿಜೆಪಿಯ 10 ಮುಖ್ಯಮಂತ್ರಿಗಳ ಪೈಕಿ 1 ಮುಖ್ಯಮಂತ್ರಿ ಒಬಿಸಿ ಆಗಿದ್ದು, ಕೆಲ ದಿನಗಳ ನಂತರ ಅವರೂ ಮುಖ್ಯಮಂತ್ರಿಯಾಗಿರುವುದಿಲ್ಲ.ಪ್ರಧಾನಿ ಮೋದಿ ಒಬಿಸಿಗಾಗಿ ಕೆಲಸ ಮಾಡುವುದಿಲ್ಲ, ಅವರು ಒಬಿಸಿ ವರ್ಗದ ಗಮನವನ್ನು ಬೇರೆಡೆಗೆ ತಿರುಗಿಸುತ್ತಾರೆ ಎಂದು ರಾಹುಲ್ ಆರೋಪಿಸಿದರು.
ಜಾತಿ ಗಣತಿ ವರದಿ ಖಂಡಿತ ಪ್ರಕಟಿಸುತ್ತೇವೆ
2014-15 ರಲ್ಲಿ, ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಜಾತಿ ಗಣತಿ ಮತ್ತು ಎಲ್ಲಾ ಸಮುದಾಯಗಳ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ವಹಿಸಲಾಯಿತು. ನಮ್ಮ ಸರ್ಕಾರದ ಅವಧಿ ಮುಗಿಯುವ ಹೊತ್ತಿಗೆ ವರದಿ ಸಿದ್ಧವಾಗಿರಲಿಲ್ಲ. ಈಗ ಕಾಯಂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ವರದಿ ಸಲ್ಲಿಸುವಂತೆ ಮನವಿ ಮಾಡಿದ್ದೇವೆ. ಅದನ್ನು ಕಾಂಗ್ರೆಸ್ ಸರ್ಕಾರ ಖಂಡಿತ ಪ್ರಕಟಿಸುತ್ತದೆ ಎಂದು ಸಭೆಯಲ್ಲಿ ಹಾಜರಿದ್ದ ಸಿಎಂ ಸಿದ್ದರಾಮಯ್ಯ ಹೇಳಿದರು.