Advertisement

Kejriwal ತಥಾಕಥಿತ ಹಗರಣದ ಕುರಿತು ಸತ್ಯ ಬಹಿರಂಗ ಮಾಡುತ್ತಾರೆ: ಸುನೀತಾ

12:55 PM Mar 27, 2024 | Team Udayavani |

ಹೊಸದಿಲ್ಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆಗೆ ಕರೆ ನೀಡಿರುವ ಆಮ್ ಆದ್ಮಿ ಪಕ್ಷದ ಕಾನೂನು ಘಟಕಕ್ಕೆ ದೆಹಲಿ ಹೈಕೋರ್ಟ್ ಬುಧವಾರ ಕಠಿಣ ಎಚ್ಚರಿಕೆ ನೀಡಿದೆ. ಪ್ರತಿಭಟನೆ ನಡೆದರೆ ವಕೀಲರು ಅವರ ಸ್ವಂತ ಅಪಾಯದಲ್ಲಿ ಅದನ್ನು ಮಾಡುತ್ತಾರೆ ಎಂದು ಹೇಳಿದೆ.

Advertisement

ಮಾರ್ಚ್ 27 ರಂದು (ಇಂದು) ರಾಷ್ಟ್ರ ರಾಜಧಾನಿಯ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರತಿಭಟನೆಗೆ ಎಎಪಿ ಕಾನೂನು ಕರೆ ನೀಡಿದ ನಂತರ ನ್ಯಾಯಾಲಯದ ಹೇಳಿಕೆ ಬಂದಿದೆ.

ಬಾರ್ ಅಂಡ್ ಬೆಂಚ್ ಪ್ರಕಾರ, ಕೇಜ್ರಿವಾಲ್ ಅವರ ಬಂಧನವನ್ನು ಪ್ರತಿಭಟಿಸಲು ವಕೀಲರು ಮಧ್ಯಾಹ್ನ 12.30 ರ ಸುಮಾರಿಗೆ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಜಮಾಯಿಸಲಿದ್ದಾರೆ ಎಂದು ಎಎಪಿಯ ಕಾನೂನು ಕೋಶದ ರಾಜ್ಯ ಅಧ್ಯಕ್ಷ ವಕೀಲ ಸಂಜೀವ್ ನಾಸಿಯಾರ್ ಹೇಳಿದ್ದರು.

ಕ್ರಮ ಕೈಗೊಳ್ಳುತ್ತೇವೆ

”ಚಿಂತಿಸಬೇಡಿ.ನಾವು ನಾಳೆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತೇವೆ. ನ್ಯಾಯವನ್ನು ತಡೆಹಿಡಿಯಲಾಗುವುದಿಲ್ಲ ಅಥವಾ ನ್ಯಾಯಾಲಯವನ್ನು ನಿಲ್ಲಿಸಲಾಗುವುದಿಲ್ಲ. ನ್ಯಾಯಾಲಯವನ್ನು ಸಂಪರ್ಕಿಸಲು ಯಾರೊಬ್ಬರ ಮೂಲಭೂತ ಹಕ್ಕನ್ನು ನಾವು ಕಸಿದುಕೊಳ್ಳಲು ಸಾಧ್ಯವಿಲ್ಲ. ಯಾರಾದರೂ ಪ್ರತಿಭಟನೆಯನ್ನು ಮಾಡಿದರೆ, ಅವರು ಅದನ್ನು ತಮ್ಮ ಸ್ವಂತ ಅಪಾಯದಲ್ಲಿ ಮಾಡುತ್ತಾರೆ ಮತ್ತು ಅಗತ್ಯವಿದ್ದರೆ ಕ್ರಮ ಕೈಗೊಳ್ಳುತ್ತೇವೆ,’’ ಎಂದು ನ್ಯಾಯಾಲಯ ಹೇಳಿದೆ.

Advertisement

ಸತ್ಯವನ್ನು ಬಹಿರಂಗಪಡಿಸುತ್ತಾರೆ

ಕೇಜ್ರಿವಾಲ್ ಅವರು ಗುರುವಾರ ದೆಹಲಿ ಹೈಕೋರ್ಟ್ ಮುಂದೆ ಹಾಜರಾಗಲಿದ್ದು ಮದ್ಯದ ಹಗರಣ ಎಂದು ಕರೆಯಲ್ಪಡುವ ಪ್ರಕರಣಕ್ಕೆ ಸಂಬಂಧಿಸಿ ಸತ್ಯವನ್ನು ಬಹಿರಂಗಪಡಿಸುತ್ತಾರೆ ಎಂದು ಅವರ ಪತ್ನಿ ಸುನೀತಾ ಬುಧವಾರ ಹೇಳಿಕೆ ನೀಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಸುನೀತಾ ಎರಡು ದಿನಗಳ ಹಿಂದೆ ಕೇಜ್ರಿವಾಲ್ ಅವರು ದೆಹಲಿಯ ನೀರು ಮತ್ತು ಒಳಚರಂಡಿ ಸಮಸ್ಯೆಗಳ ಬಗ್ಗೆ ಜಲಸಚಿವೆ ಅತಿಶಿ ಅವರಿಗೆ ಪತ್ರ ಕಳುಹಿಸಿದ್ದರು..ಕೇಂದ್ರ ಸರ್ಕಾರ ಕೇಜ್ರಿವಾಲ್ ಅವರ ವಿರುದ್ಧ ಕೇಸ್ ಹಾಕಿ ದೆಹಲಿಯನ್ನು ನಾಶಮಾಡಲು ಬಯಸುತ್ತಾರೆಯೇ? ಜನರ ದುಃಖ ಮುಂದುವರೆಸಬೇಕೆಂದು ಅವರು ಬಯಸುತ್ತಾರೆಯೇ? ಇದರಿಂದಾಗಿ ಕೇಜ್ರಿವಾಲ್‌ ಅವರಿಗೆ ತುಂಬಾ ನೋವಾಗಿದೆ. ಮದ್ಯದ ಹಗರಣ ಎಂದು ಕರೆಯಲ್ಪಡುವ ಪ್ರಕರಣದಲ್ಲಿ ಇಡಿ 250 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದೆ. ಅವರು ಈ ತಥಾಕಥಿತ ಹಗರಣದ ಹಣವನ್ನು ಹುಡುಕುತ್ತಿದ್ದಾರೆ. ಅವರಿಗೆ ಇನ್ನೂ ಏನೂ ಸಿಕ್ಕಿಲ್ಲ.ಮಾರ್ಚ್ 28ರಂದು ಕೋರ್ಟ್ ನಲ್ಲಿ ನನ್ನ ಪತಿ ಹಣ ಎಲ್ಲಿದೆ ಎಂದು ಬಹಿರಂಗಪಡಿಸುತ್ತಾರೆ ಮತ್ತು ಸಾಕ್ಷ್ಯವನ್ನು ಸಹ ಒದಗಿಸುತ್ತಾರೆ ಎಂದು ಸುನೀತಾ ಹೇಳಿದ್ದಾರೆ.

ಬಿಜೆಪಿ ಪ್ರತಿಭಟನೆ
ಸಿಎಂ ಹುದ್ದೆಗೆ ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿ ವಿಧಾನಸಭೆಯ ಹೊರಗೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಮತ್ತು ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next