Advertisement

ತಾರಾಪುರ ರಾಸಾಯನಿಕ ಘಟಕದಲ್ಲಿ ಅಗ್ನಿ ಅನಾಹುತ; 3 ಸಾವು

03:39 PM Mar 09, 2018 | Team Udayavani |

ಮುಂಬಯಿ : ಪಾಲಘರ್‌ ನ ತಾರಾಪುರದಲ್ಲಿ ನಿನ್ನೆ ಗುರುವಾರ ತಡ ರಾತ್ರಿ ಖಾಸಗಿ ರಾಸಾಯನಿಕ ಉತ್ಪಾದನಾ ಕಂಪೆನಿಯೊಂದರಲ್ಲಿ ಭಾರೀ ಬೆಂಕಿ ಅನಾಹುತ ಸಂಭವಿಸಿ ಸಮೀಪದ ಕಟ್ಟಡಗಳಿಗೂ ಅದು ಪಸರಿಸಿದ ಭೀಕರ ದುರಂತದಲ್ಲಿ ಮೂವರು ಮೃತಪಟ್ಟು ಇತರ ಐವರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. 

Advertisement

ತುರ್ತು ಕರೆ ಬಂದೊಡನೆಯೇ ಅಗ್ನಿ ಅವಘಡ ತಾಣಕ್ಕೆ ಧಾವಿಸಿದ ಐದು ಅಗ್ನಿ ಶಾಮಕಗಳು ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡವು. ಇದೇ ವೇಳೆ ರಕ್ಷಣಾ ಕಾರ್ಯವನ್ನೂ ಕೈಗೊಳ್ಳಲಾಗಿ ಕಟ್ಟಡದ ಒಳಗೆ ಸಿಲುಕಿ ಕೊಂಡಿದ್ದವರನ್ನು ಪಾರುಗೊಳಿಸಲಾಯಿತು. 

ರಾಸಾಯನಿಕ ಘಟಕದಲ್ಲಿ ರಾತ್ರಿ 11.15ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡು ಶರವೇಗದಲ್ಲಿ ಅದು ಇಡಿಯ ಕಟ್ಟಡವನ್ನು ಆವರಿಸಿತು. ಬಳಿಕ ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿ ಹರಡ ತೊಡಗಿತು.

ಬೆಂಕಿಗೆ ಕಾರಣವಾದ ಭಾರೀ ದೊಡ್ಡ ಸ್ಫೋಟದ ಸದ್ದು ಹತ್ತು ಕಿ.ಮೀ. ದೂರದ ವರೆಗೂ ಕೇಳಿ ಬಂದಿತ್ತು ಎಂದು ಪಾಲಘರ ನಿಯಂತ್ರಣ ಕೊಠಡಿಯ ಪೊಲೀಸ್‌ ಅಧಿಕಾರಿ ಪ್ರಮೋದ್‌ ಪವಾರ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next