Advertisement
ನಗರದ ಸಂಸ್ಕೃತ ಭವನದ ಮಾರುತಿ ಮಾನ್ಪಡೆ ವೇದಿಕೆ ಯಲ್ಲಿ ಶನಿವಾರ ನಡೆದ ಸಿಐಟಿಯು ಹಾಸನ 6ನೇ ಜಿಲ್ಲಾ ಸಮ್ಮೇಳನದಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ.
Related Articles
Advertisement
ಗಂಭೀರ ಸಮಸ್ಯೆಗಳು ಎದುರಾಗಲಿದೆ: ಕಾರ್ಮಿಕರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರರಿದರೆ ಮುಂಬರುವ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಕಾರ್ಮಿಕರ ಕಾನೂನು ಮಾಲಿಕರ ಪರ ತಿದ್ದುವ ಕ್ರಮ, ಕಾರ್ಮಿಕರ ವಿಮಾ ಯೋಜನೆ ಕಾರ್ಮಿಕ ರಿಂದ ಕಸಿಯುವ ಪ್ರಯತ್ನ, ಪಿಎಫ್ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು, ಸಾಮಾಜಿಕ ವೆಚ್ಚಗಳ ಕಡಿತ, ಐಸಿಡಿಎಸ್ ನೀಡುತ್ತಿರುವ ಅನುದಾನ ಕಡಿತ, ಬಿಸಿಯೂಟ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ವೆಚ್ಚಗಳ ಕಡಿತ ಹಾಗೂ ಭೂಸ್ವಾಧಿನ ಕಾಯಿದೆ ಕಾರ್ಮಿಕರಿಗೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು..
ಸಿಐಟಿಯು ಜಿಲ್ಲಾ ಅಧ್ಯಕ್ಷ ಧರ್ಮೇಶ್ ಮಾತನಾಡಿ, ಕಡಿಮೆ ವೇತನಕ್ಕೆ ಕಾರ್ಮಿಕರಿಂದ ದುಡಿಸಿಕೊಳ್ಳಲಾಗುತ್ತಿದೆ. ಈಗ ನೀಡುತ್ತಿರುವ ವೇತನ ಕಾರ್ಮಿಕರಿಗೆ ಯಾವುದಕ್ಕೂ ಸಾಲುತ್ತಿಲ್ಲ. 1994ರ ನಂತರ ನೇಮಕಗೊಂಡ ಎಲ್ಲ ನೌಕರರನ್ನು ಅನುಮೋದನೆಗೊಳಿಸಿ ಕಾಯಂ ಗೊಳಿಸಬೇಕು. ಸಮರ್ಪಕ ವೇತನ ನೀಡುತ್ತಿಲ್ಲ. ಕನಿಷ್ಟ ವೇತನ ಎಲ್ಲರಿಗೂ ಪಾವತಿಸಬೇಕು. ಬಾಕಿ ಉಳಿಸಿಕೊಂಡ ಪಿಡಿಒಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನೂತನ ಸಮಿತಿ ರಚನೆ: ಸಿಐಟಿಯುವಿನ ಹಾಸನ ಜಿಲ್ಲಾ 6ನೇ ಸಮ್ಮೇಳನದಲ್ಲಿ 23 ಮಂದಿ ಪದಾಧಿಕಾರಿಗಳನ್ನೊಳಗೊಂಡ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆಮಾಡಲಾಯಿತು. ನೂತನ ಸಮಿತಿ ಗೌರವಾಧ್ಯಕ್ಷರಾಗಿ ವಿ.ಸುಕುಮಾರ್, ಧರ್ಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಬಿ.ಪುಷ್ಪ, ಖಜಾಂಚಿಯಾಗಿ ಜಿ.ಪಿ.ಸತ್ಯನಾರಾಯಣ ಪುನಾರಾಯ್ಕೆ ಆದರು. ಏಳು ಜನ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿ ಗಳು, ಸಿಐಟಿಯುವಿನಡಿ ಸಂಘಟಿತರಾಗಿರುವ ಎಲ್ಲಾ ಸಂಘಟನೆಗಳ ತಾಲೂಕು ಅಧ್ಯಕ್ಷರು ಕಾರ್ಯದರ್ಶಿಗಳನ್ನೊಳಗೊಂಡ ಜಿಲ್ಲಾ ಸಮಿತಿ ಆಯ್ಕೆ ಮಾಡಲಾಗಿದೆ.