ಇಟಾನಗರ : ಅರುಣಾಚಲ ಪ್ರದೇಶದ ರಾಜಧಾನಿಯ ನಹರ್ಲಗುನ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 700 ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿದೆ. ಭಾರಿ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿಯ ಕುರಿತು ವರದಿಯಾಗಿಲ್ಲ.
ಮೂಲಗಳ ಪ್ರಕಾರ, 2 ಗಂಟೆಗಳಲ್ಲಿ ಕೇವಲ 2 ಅಂಗಡಿಗಳಿಗೆ ಬೆಂಕಿ ಆವರಿಸಿದೆ, ಆದರೆ ಬೆಂಕಿ ಹರಡುವುದನ್ನು ನಿಯಂತ್ರಿಸಲು ಅಗ್ನಿಶಾಮಕ ದಳದ ಸಿಬಂದಿಗಳು ವಿಫಲವಾದರು ಎಂದು ವರದಿಯಾಗಿದೆ.
ರಾಜ್ಯದ ಅತ್ಯಂತ ಹಳೆಯ ಮಾರುಕಟ್ಟೆಯಲ್ಲಿ ಅವಘಡ ನಡೆದಿದ್ದು,ಇಟಾನಗರದಿಂದ ಸುಮಾರು 14 ಕಿಮೀ ದೂರದಲ್ಲಿರುವ ಅಗ್ನಿಶಾಮಕ ಠಾಣೆ ಮತ್ತು ನಹರ್ಲಗುನ್ ಪೊಲೀಸ್ ಠಾಣೆಯ ಸಮೀಪದಲ್ಲಿದೆ.
ಸ್ಫೋಟಗೊಂಡ ಎಲ್‌ಪಿಜಿ ಸಿಲಿಂಡರ್‌ಗಳು ಬೆಂಕಿಗೆ ಮತ್ತಷ್ಟು ಇಂಧನವನ್ನು ಸೇರಿಸಿದ್ದರಿಂದ ಗಾಬರಿಗೊಂಡ ಅಂಗಡಿಯವರು ತಮ್ಮ ಕೈಲಾದದ್ದನ್ನು ಉಳಿಸಲು ಹರಸಾಹಸ ಪಟ್ಟರು. ಮೂರು ಅಗ್ನಿಶಾಮಕ ಟೆಂಡರ್‌ಗಳು, ಅದರಲ್ಲಿ ಒಂದನ್ನು ಇಟಾನಗರದಿಂದ ತರಲಾಗಿದ್ದು ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಗಂಟೆಗಳ ಕಾಲ ಹರಸಾಹಸಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿಯಿಂದ ಉಂಟಾದ ಹಾನಿಯನ್ನು ನಿಖರವಾಗಿ ಅಂದಾಜು ಮಾಡಲಾಗುತ್ತಿದೆ, ಆದರೆ ಇದು ಕೋಟ್ಯಂತರ ರೂ. ಎಂದು ಅಂದಾಜಿಸಲಾಗಿದೆ.